ETV Bharat / bharat

ಕಾಶ್ಮೀರದ ಬಗ್ಗೆ ಮಲಾಲ ಕಳವಳ... ಟ್ವಿಟ್ಟರ್​ನಲ್ಲಿ ಶೋಭಾ ಕರಂದ್ಲಾಜೆ ತಿರುಗೇಟು! - ಸಂಸದೆ ಶೋಭಾ ಕರಂದ್ಲಾಜೆ

ಕಾಶ್ಮೀರದ ಬಗ್ಗೆ ಟ್ವೀಟ್ ಮಾಡಿದ ಮಲಾಲಗೆ ಸಂಸದೆ ಶೋಭಾ ಕರಂದ್ಲಾಜೆ ಟ್ವಿಟ್ಟರ್​ನಲ್ಲಿ ತಿರುಗೇಟು ಕೊಟ್ಟಿದ್ದಾರೆ.

ಮಲಾಲ ಯೂಸುಫ್ ಝಾಯಿ
author img

By

Published : Sep 15, 2019, 8:14 PM IST

ನವದೆಹಲಿ: ಕಾಶ್ಮೀರದ ಮಕ್ಕಳು ಮರಳಿ ಶಾಲೆಗೆ ಹೋಗಲು ವಿಶ್ವಸಂಸ್ಥೆ ನೆರವಾಗಬೇಕು ಎಂದು ಪಾಕಿಸ್ತಾನದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮತ್ತು ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸುಫ್ ಝಾಯಿ ಟ್ವಿಟ್ಟರ್​ನಲ್ಲಿ ಮನವಿ ಮಾಡಿದ್ದಾರೆ.

  • I am asking leaders, at #UNGA and beyond, to work towards peace in Kashmir, listen to Kashmiri voices and help children go safely back to school.

    — Malala (@Malala) September 14, 2019 " class="align-text-top noRightClick twitterSection" data=" ">

ಕಳೆದ ವಾರ ನಾನು ಕಾಶ್ಮೀರದಲ್ಲಿ ವಾಸಿಸುವ ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ವಕೀಲರು ಮತ್ತು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇನೆ. ಅಲ್ಲಿನ ಯುವತಿಯರೊಂದಿಗೆ ನೇರವಾಗಿ ಮಾತನಾಡಲು ಪ್ರಯತ್ನಿಸಿದೆ. ಅಲ್ಲಿನ ಮೂವರು ಯುವತಿಯರು ಹೇಳುವ ಪ್ರಕಾರ ಕಾಶ್ಮೀರ ಸದ್ಯಕ್ಕೆ ನಿಶ್ಯಬ್ದವಾಗಿದೆ. ಏನಾಗುತ್ತಿದೆ ಎಂದು ತಿಳಿದುಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಕಿಟಕಿ ಮೂಲಕ ಭದ್ರತಾ ಪಡೆಗಳ ಹೆಜ್ಜೆಗಳ ಶಬ್ದವೊಂದೆ ನಮ್ಮ ಕಿವಿಗೆ ಕೇಳುತ್ತಿರುವುದು ತುಂಬಾ ಭಯವಾಗುತ್ತಿದೆ ಎಂದಿದ್ದಾರೆ.

  • “I feel purposeless and depressed because I can’t go to school. I missed my exams on August 12 and I feel my future is insecure now. I want to be a writer and grow to be an independent, successful Kashmiri woman. But it seems to be getting more difficult as this continues.”

ಅಲ್ಲದೆ, ಆಗಸ್ಟ್​ನಲ್ಲಿ ಪರೀಕ್ಷೆ ಬರೆಯಬೇಕಿತ್ತು, ಅದೂ ಕೂಡ ಸಾಧ್ಯವಾಗಿಲ್ಲ. ಶಾಲೆಗೆ ಹೋಗಲು ಆಗುತ್ತಿಲ್ಲ. ನಾನೊಬ್ಬ ಉತ್ತಮ ಬರಹಗಾರ್ತಿ ಆಗಬೇಕಿಂದಿದ್ದೆ. ಆದರೆ ಇದೇ ಪರಿಸ್ಥಿತಿ ಮುಂದುವರೆದರೆ ಅದು ಆಸಾಧ್ಯವೆನಿಸುತ್ತದೆ. ಇದರಿಂದ ಖಿನ್ನತೆಗೆ ಒಳಗಾಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ ಅಂತಾ ಮಲಾಲ ಟ್ವೀಟ್​ ಮಾಡಿದ್ದಾರೆ.

ಇನ್ನು ಕಾಶ್ಮೀರದಲ್ಲಿ ಮಕ್ಕಳು ಸೇರಿದಂತೆ 4,000 ಜನರನ್ನ ಬಂಧಿಸಲಾಗಿದೆ. ಕಳೆದ 40 ದಿನಗಳಿಂದ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಯುವತಿಯರು ಮನೆ ಬಿಟ್ಟು ಹೊರಗೆ ಬಾರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಿಶ್ವಸಂಸ್ಥೆಯ ಅಧಿಕಾರಿಗಳು ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ಮುಂದಾಗಬೇಕು. ಕಾಶ್ಮೀರ ಜನರ ಕೂಗು ಕೇಳಿಸಿಕೊಳ್ಳಿ, ಮಕ್ಕಳನ್ನ ಮರಳಿ ಶಾಲೆಗೆ ಹೋಗಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಶೋಭಾ ಕರಂದ್ಲಾಜೆ ತಿರುಗೇಟು:

  • Sincere request to the Nobel winner, to spend some time speaking with the minorities of Pakistan.

    To speak against the forceful conversation & persecution taking place on the minority girls in her own country!

    Developmental agendas got extended to Kashmir, nothing suppressed! https://t.co/Um3BmGuJwi

    — Shobha Karandlaje (@ShobhaBJP) September 15, 2019 " class="align-text-top noRightClick twitterSection" data=" ">

ಇನ್ನು ಮಲಾಲ ಟ್ವೀಟ್​ಗೆ ಟ್ವಿಟ್ಟರ್​ನಲ್ಲೇ ಪ್ರತಿಕ್ರಿಯೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ, ಮಲಾಲ ಅವರೇ ದಯವಿಟ್ಟು ಪಾಕಿಸ್ತಾನದ ಅಲ್ಪಸಂಖ್ಯಾತ ಮಹಿಳೆಯರೊಂದಿಗೆ ಸ್ವಲ್ಪ ಸಮಯ ಮಾತನಾಡಿ. ನಿಮ್ಮ ದೇಶದ ಅಲ್ಪಸಂಖ್ಯಾತ ಹುಡುಗಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಕಿರುಕುಳದ ವಿರುದ್ಧ ಮಾತನಾಡಿ. ಕಾಶ್ಮೀರದಲ್ಲಿ ಅಭಿವೃದ್ಧಿಯ ಕಾರ್ಯಸೂಚಿಗಳನ್ನ ವಿಸ್ತರಿಸಲಾಗಿದೆ. ಯಾವುದನ್ನೂ ನಿರ್ಬಂಧಿಸಿಲ್ಲ ಎಂದು ಟಾಂಗ್ ನೀಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.