ETV Bharat / bharat

ಹಾಲು ಬಿಳುಪಿನ ಮಕರಾನಾ ಅಮೃತ ಶಿಲೆ ವ್ಯಾಪಾರಕ್ಕೂ ಕೊರೊನಾ ಕಲ್ಲು

ಶುಭ್ರ ಬಿಳುಪಾದ ಮಕರಾನಾ ಕಲ್ಲುಗಳನ್ನು ಸುಂದರ ಮೂರ್ತಿಗಳ ತಯಾರಿಕೆ ಹಾಗೂ ವಿಶಿಷ್ಟ ಕಟ್ಟಡಗಳ ನಿರ್ಮಾಣಕ್ಕೆ ಬಳಸಲಾಗುತ್ತದೆ. ದೇಶಾದ್ಯಂತ ವಿಧಿಸಲಾಗಿರುವ ಲಾಕ್​ಡೌನ್​ನಿಂದಾಗಿ ಮಕರಾನಾ ಸೇರಿದಂತೆ ದೇಶದ ಇನ್ನೂ ಅನೇಕ ಅಮೃತ ಶಿಲೆಯ ಗಣಿಗಳು ಸ್ತಬ್ಧವಾಗಿವೆ.

makranas-marble
makranas-marble
author img

By

Published : Apr 14, 2020, 6:04 PM IST

ಮಕರಾನಾ (ನಾಗೌರ್, ರಾಜಸ್ಥಾನ​): ತಾಜ್‌ಮಹಲ್ ನಿರ್ಮಾಣಕ್ಕೆ ಬಳಸಲಾಗಿರುವ ಅಚ್ಚ ಹಾಲು ಬಿಳುಪಿನ ಮಕರಾನಾ ಅಮೃತ ಶಿಲೆ (ಮಾರ್ಬಲ್​ ಕಲ್ಲು) ದೇಶ-ವಿದೇಶಗಳಲ್ಲೂ ಪ್ರಖ್ಯಾತಿ ಪಡೆದಿದೆ. ಅಮೃತ ಶಿಲೆ ಅಂದರೆ ಮಕರಾನಾ ಶಿಲೆ ಎಂಬಷ್ಟರ ಮಟ್ಟಿಗೆ ಇಲ್ಲಿನ ಕಲ್ಲು ಪ್ರಸಿದ್ಧಿ ಪಡೆದಿದೆ. ಆದರೆ, ಕೊರೊನಾ ಕರಿನೆರಳು ಮಕರಾನಾ ಶಿಲೆಯ ವ್ಯಾಪಾರದ ಮೇಲೂ ಬಿದ್ದಿದೆ. ಈ ಶಿಲೆಯನ್ನು ಈಗ ಯಾರೂ ಕೇಳುವವರಿಲ್ಲದಂತಾಗಿದೆ.

makranas-marble-business
ಹಾಲು ಬಿಳುಪಿನ ಮಕರಾನಾ ಅಮೃತ ಶಿಲೆಯಲ್ಲರಳಿದ ತಾಜ್‌ ಮಹಲ್‌

ಶುಭ್ರ ಬಿಳುಪಾದ ಮಕರಾನಾ ಕಲ್ಲುಗಳನ್ನು ಸುಂದರ ಮೂರ್ತಿಗಳ ತಯಾರಿಕೆ ಹಾಗೂ ವಿಶಿಷ್ಟ ಕಟ್ಟಡಗಳ ನಿರ್ಮಾಣಕ್ಕೆ ಬಳಸಲಾಗುತ್ತದೆ. ರಾಜಸ್ಥಾನದ ಮಕರಾನಾದಲ್ಲಿ ದೊರಕುವ ಈ ವಿಶಿಷ್ಟ ಅಮೃತ ಶಿಲೆಗಳನ್ನು ಬಳಸಿಯೇ ಆಗ್ರಾದ ತಾಜ್‌ಮಹಲ್ ಕಟ್ಟಿರೋದು ಎಂದರೆ ಈ ಕಲ್ಲಿನ ಮಹತ್ವ ಎಷ್ಟೆಂಬುದು ಗೊತ್ತಾಗುತ್ತದೆ. ಕೋಲ್ಕತಾದ ವಿಕ್ಟೋರಿಯಾ ಮೆಮೋರಿಯಲ್ ಸೇರಿದಂತೆ ಇನ್ನೂ ಹಲವಾರು ಪ್ರಖ್ಯಾತ ಸ್ಮಾರಕಗಳನ್ನು ಇದೇ ಕಲ್ಲಿನಿಂದ ನಿರ್ಮಿಸಲಾಗಿದೆ.

ದೇಶಾದ್ಯಂತ ವಿಧಿಸಲಾಗಿರುವ ಲಾಕ್​ಡೌನ್​ನಿಂದಾಗಿ ಮಕರಾನಾ ಮಾತ್ರವಲ್ಲದೆ ದೇಶದ ಇನ್ನೂ ಅನೇಕ ಅಮೃತ ಶಿಲೆಯ ಗಣಿಗಳು ಸ್ತಬ್ಧವಾಗಿವೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ತಮ್ಮ ತಮ್ಮ ಊರು ಸೇರಿಕೊಂಡಿದ್ದಾರೆ. ಮಕರಾನಾ ಶಿಲೆ ತೆಗೆಯುವವರೇ ಇಲ್ಲದಂತಾಗಿದೆ.

makranas-marble-business
ಮಕರಾನಾ ಕಲ್ಲುಗಳಿಂದ ತಯಾರಾದ ವಿಗ್ರಹಗಳು

ಮಕರಾನಾ ಪ್ರದೇಶದಲ್ಲಿನ ಅಮೃತ ಶಿಲೆ ಹಾಗೂ ಅಲ್ಲಿನ ಗಣಿಗಳ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ:

ಮಕರಾನಾದ ಸುಮಾರು 850 ಗಣಿಗಳಲ್ಲಿ ಅಮೃತ ಶಿಲೆ ದೊರಕುತ್ತದೆ.

  • - ಇಲ್ಲಿನ ಗಣಿಗಳಲ್ಲಿ ಹಾಗೂ ಕಲ್ಲಿನ ಶಿಲ್ಪಕಲೆ ತಯಾರಿಸುವ ಕೆಲಸದಲ್ಲಿ ಸುಮಾರು 5 ಸಾವಿರ ಜನ ತೊಡಗಿಸಿಕೊಂಡಿದ್ದಾರೆ.
  • - ಮಕರಾನಾ ಸುತ್ತಮುತ್ತಲಿನ ಅಂದಾಜು 1 ಲಕ್ಷ ಜನ ಪರೋಕ್ಷ ಹಾಗೂ ಅಪರೋಕ್ಷವಾಗಿ ಈ ಉದ್ಯಮವನ್ನು ಅವಲಂಬಿಸಿ ಬದುಕುತ್ತಿದ್ದಾರೆ.
  • - ಮಾರ್ಬಲ್ ಉದ್ಯೋಗ ನಿಂತು ಹೋಗಿದ್ದರಿಂದ ಸಾವಿರಾರು ಲಾರಿ ಚಾಲಕರು ಹಾಗೂ ಕೂಲಿಯಾಳುಗಳು ನಿರುದ್ಯೋಗಿಗಳಾಗಿದ್ದಾರೆ.
  • - ಮಾರ್ಬಲ್​ ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ ಪ್ರತಿವರ್ಷ 32 ಕೋಟಿ ರೂಪಾಯಿ ರಾಜಸ್ವ ಆದಾಯವಿದೆ.
  • - ಗಣಿ ಮಾಲೀಕರು ಹಾಗೂ ಉದ್ಯೋಗಿಗಳಿಗೆ ಲಾಕ್​ಡೌನ್​ನಿಂದ 50 ಕೋಟಿ ರೂ. ನಷ್ಟ ಉಂಟಾಗಿದೆ.

ಲಾಕ್​ಡೌನ್ ವಿಸ್ತರಣೆಯಿಂದಾಗಿ ಇಲ್ಲಿನ ಗಣಿ ಮಾಲೀಕರು ಹಾಗೂ ಕಾರ್ಮಿಕರು ಮತ್ತಷ್ಟು ಆತಂಕಕ್ಕೀಡಾಗಿದ್ದು, ಉದ್ಯಮದ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.