ETV Bharat / bharat

ಮುಂಬೈ ತಲುಪಿದ ಕೈ-ತೆನೆ ಅತೃಪ್ತ ಶಾಸಕರಿಗೆ ತಟ್ಟಿದ ಪ್ರತಿಭಟನೆ ಬಿಸಿ

author img

By

Published : Jul 7, 2019, 5:16 PM IST

ಮೈತ್ರಿ ಸರ್ಕಾರದಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ 10ಕ್ಕೂ ಅಧಿಕ ಶಾಸಕರು ಸಿಎಂ ವಿರುದ್ಧ ಅಸಮಾಧಾನಗೊಂಡು ರಾಜೀನಾಮೆಯ ಬಳಿಕ ಮುಂಬೈನ ಸೋಫಿಟಲ್​ ಹೋಟೆಲ್​ನಲ್ಲಿ ತಂಗಿದ್ದಾರೆ. ಶಾಸಕರ ನಡೆಯನ್ನು ಖಂಡಿಸಿ ಹೋಟೆಲ್​ ಮುಂಭಾಗದಲ್ಲಿ ಮಹಾರಾಷ್ಟ್ರ ಯುವ ಕಾಂಗ್ರೆಸ್​ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಮಹಾರಾಷ್ಟ್ರ ಯುವ ಕಾಂಗ್ರೆಸ್​ ಘಟಕದ ಕಾರ್ಯಕರ್ತರ ಪ್ರತಿಭಟನೆ

ಮುಂಬೈ: ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದು ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್​-ಜೆಡಿಎಸ್​ನ ಶಾಸಕರಿಗೆ ಮುಂಬೈನಲ್ಲಿ ಪ್ರತಿಭಟನೆಯ ಬಿಸಿ ತಟ್ಟಿದೆ.

ಮೈತ್ರಿ ಸರ್ಕಾರದಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ 10ಕ್ಕೂ ಅಧಿಕ ಶಾಸಕರು ಸಿಎಂ ವಿರುದ್ಧ ಅಸಮಾಧಾನಗೊಂಡು ರಾಜೀನಾಮೆಯ ಬಳಿಕ ಮುಂಬೈನ ಸೋಫಿಟಲ್​ ಹೋಟೆಲ್​ನಲ್ಲಿ ತಂಗಿದ್ದಾರೆ. ಶಾಸಕರ ನಡೆಯನ್ನು ಖಂಡಿಸಿ ಹೋಟೆಲ್​ ಮುಂಭಾಗದಲ್ಲಿ ಮಹಾರಾಷ್ಟ್ರ ಯುವ ಕಾಂಗ್ರೆಸ್​ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

  • Maharashtra Youth Congress workers including its vice-president
    Suraj Singh Thakur have been detained by police during their protest outside Sofitel hotel asking #Karnataka Congress MLAs to take back their resignation. pic.twitter.com/qLuXQVSqBF

    — ANI (@ANI) July 7, 2019 " class="align-text-top noRightClick twitterSection" data=" ">

ಶಾಸಕರ ರಾಜೀನಾಮೆಯ ನಡೆ ಖಂಡನಾರ್ಹವಾದದ್ದು. ಕೂಡಲೇ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದು ಮೈತ್ರಿ ಸರ್ಕಾರದ ಪರ ನಿಲ್ಲುವಂತೆ ಪಟ್ಟು ಹಿಡಿದರು. ಈ ವೇಳೆ ಯುವ ಕಾಂಗ್ರೆಸ್​ ಘಟಕದ ಉಪಾಧ್ಯಕ್ಷ ಸುರಜ್ ಸಿಂಗ್ ಠಾಕೂರ್ ಸೇರಿದಂತೆ ಇತರರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ ಸೋಫಿಟಲ್​ ಹೋಟೆಲ್​ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ 3ಕ್ಕೂ ಹೆಚ್ಚು ತುಕುಡಿಗಳನ್ನು ನೇಮಕ ಮಾಡಲಾಗಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.