ETV Bharat / bharat

ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು... ನಾಳೆಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್​​​ - ಮಹಾರಾಷ್ಟ್ರ ಸರ್ಕಾರದ ಬಗ್ಗೆ ಸುಪ್ರೀಂ ತೀರ್ಪು

ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಸುದೀರ್ಘ ವಿಚಾರಣೆ ನಡೆಸಿದ್ದು, ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ. ಭಾನುವಾರ ವಾದ - ಪ್ರತಿವಾದ ನಡೆದಿದ್ದು, ಅರ್ಜಿಯ ವಿಚಾರಣೆ ಹಾಗೂ ತೀರ್ಪು ಇಂದಿಗೆ ಕಾಯ್ದಿರಿಸಿತ್ತು. ಜಸ್ಟೀಸ್ ಎನ್​​.ವಿ.ರಮಣ, ಅಶೋಕ್ ಭೂಷಣ್ ಹಾಗೂ ಸಂಜೀವ್ ಖನ್ನಾ ಪೀಠ ಸದ್ಯ ಎರಡು ಕಡೆ ವಾದ- ಪ್ರತಿವಾದವನ್ನು ಆಲಿಸಿ ತೀರ್ಪು ಕಾಯ್ದಿರಿಸಿದೆ.

'ಮಹಾ' ರಾಜಕಾರಣ
author img

By

Published : Nov 25, 2019, 11:11 AM IST

Updated : Nov 25, 2019, 12:01 PM IST

ನವದೆಹಲಿ: ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಸುದೀರ್ಘ ವಿಚಾರಣೆ ನಡೆಸಿದ್ದು, ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.

ಮಹಾರಾಷ್ಟ್ರ ಸರ್ಕಾರ ರಚನೆಯನ್ನು ಆಕ್ಷೇಪಿಸಿ ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಕೆ ಮಾಡಿರುವ ರಿಟ್ ಅರ್ಜಿ ವಿಚಾರಣೆ ಸಂಬಂಧ ಸುಪ್ರೀಂಕೋರ್ಟ್​ ತ್ರೀಸದಸ್ಯಪೀಠದಲ್ಲಿ ಸುದೀರ್ಘ ವಾದ- ಪ್ರತಿವಾದ ಇಂದು ನಡೆಯಿತು. ಭಾನುವಾರ ವಾದ - ಪ್ರತಿವಾದ ನಡೆದಿದ್ದು, ಅರ್ಜಿಯ ವಿಚಾರಣೆ ಹಾಗೂ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಜಸ್ಟೀಸ್ ಎನ್​​.ವಿ.ರಮಣ, ಅಶೋಕ್ ಭೂಷಣ್ ಹಾಗೂ ಸಂಜೀವ್ ಖನ್ನಾ ಪೀಠ ಸದ್ಯ ವಾದವನ್ನು ಆಲಿಸಿ ನಾಳೆಗೆ ತೀರ್ಪು ಕಾಯ್ದಿರಿಸಿದೆ.

ತುಷಾರ್ ಮೆಹ್ತಾ ವಾದ:
ಸರ್ಕಾರ ರಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಬಿಜೆಪಿಯಿಂದ ಆರಂಭವಾಗಿ ವಿವಿಧ ಪಕ್ಷಕ್ಕೆ ಆಹ್ವಾನ ನೀಡಿದ್ದನ್ನು ಹೇಳುತ್ತಾ ವಾದ ಮಂಡನೆ ಆರಂಭಿಸಿದರು.

ನ.22ರಂದು ಅಜಿತ್ ಪವಾರ್ ನೀಡಿರುವ ಪತ್ರದಲ್ಲಿ ಚುನಾಯಿತರಾದ ಎಲ್ಲ ಶಾಸಕರು(54) ಬಿಜೆಪಿಗೆ ಬೆಂಬಲ ನೀಡುತ್ತಿದೆ ಎಂದು ಉಲ್ಲೇಖ ಮಾಡಲಾಗಿದೆ.

ಅಜಿತ್ ಪವಾರ್ ಹೇಳಿದಂತೆ ಎನ್​​ಸಿಪಿಯ ಎಲ್ಲ ಚುನಾಯಿತ ಶಾಸಕರು ತಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ ಎನ್ನುವುದನ್ನು ಸಿಎಂ ದೇವೇಂದ್ರ ಫಡ್ನವೀಸ್ ಸಹ ತಾವು ಸಲ್ಲಿಸಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದೇ ಆಧಾರದಲ್ಲಿ ಫಡ್ನವೀಸ್ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ಮಾಡಿಕೊಟ್ಟಿದ್ದಾರೆ.

ನ.30ರವರೆಗೆ ಬಿಜೆಪಿ ಸರ್ಕಾರಕ್ಕೆ ಬಹುಮತ ಸಾಬೀತಿಗೆ ಸಮಯಾವಕಾಶವಿದೆ. ಆದರೆ ಚುನಾವಣೆ ವೇಳೆ ಮೈತ್ರಿ ಮಾಡಿಕೊಂಡಿದ್ದ ಪಕ್ಷ ಶಿವಸೇನೆ ತಕ್ಷಣವೇ ಬಹುಮತ ಸಾಬೀತಿಗೆ ಪಟ್ಟುಹಿಡಿದಿದೆ.

ಮುಕುಲ್ ರೋಹ್ಟಗಿ ವಾದ:

ವಾರಾಂತ್ಯದಲ್ಲಿ ಬಿಜೆಪಿ ಹಾಗೂ ಅಜಿತ್ ಪವಾರ್ ಅವರಿಗೆ ನಿಷ್ಠೆ ತೋರಿದ್ದ ಎನ್​​ಸಿಪಿ ಶಾಸಕರು ಸದ್ಯ ಶರದ್ ಪವಾರ್ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ.

ರಾಜ್ಯಪಾಲರು ತಮ್ಮ ಮುಂದೆ ಪ್ರಸ್ತುತಪಡಿಸಲಾದ ಕೆಲ ದಾಖಲೆಗಳಿಗೆ ಸೂಕ್ತವಾಗಿ ನಡೆದುಕೊಂಡಿದ್ದಾರೆ. ರಾಜ್ಯಪಾಲರ ನಡೆಯನ್ನು ಉಳಿದ ಪಕ್ಷಗಳು ಪ್ರಶ್ನಿಸಿದ್ದವು. ರಾಜ್ಯಪಾಲರು ತಮ್ಮ ಪರಿಧಿಯಲ್ಲೇ ಕಾರ್ಯನಿರ್ವಹಿಸಿದ್ದಾರೆ. ಪತ್ರದಲ್ಲಿ ಎನ್​ಸಿಪಿ ಶಾಸಕರ ಬೆಂಬಲದ ಸಹಿ ಇದೆ.

ಈ ವೇಳೆ ಮಧ್ಯ ಪ್ರವೇಶಿಸಿದ ಜಸ್ಟೀಸ್ ಸಂಜೀವ್ ಖನ್ನಾ, ಆದರೆ ಸಿಎಂ ವಿಧಾನಸಭೆಯಲ್ಲಿ ಬಹುಮತ ಹೊಂದಿದ್ದಾರೆಯೇ ಎನ್ನುವ ಪ್ರಶ್ನೆ ಇದೆ ಎಂದರು. ಬಳಿಕ ವಾದ ಮುಂದುವರೆಸಿದ ರೋಹ್ಟಗಿ, ಮುಖ್ಯ ವಿಚಾರದಲ್ಲಿ ಮಧ್ಯಂತರ ಆದೇಶ ನೀಡಲು ಸಾಧ್ಯವಿದೆಯೇ ಎಂದು ಪೀಠದ ಮುಂದೆ ಕೇಳಿದ್ದಾರೆ.

ಆರಂಭದಲ್ಲಿ ಶಾಸಕರು ಪ್ರಮಾಣವಚನ ಮಾಡಲಿದ್ದಾರೆ. ನಂತರ ಸ್ಪೀಕರ್ ಆಯ್ಕೆಯಾಗಲಿದೆ. ಆ ಬಳಿಕವಷ್ಟೇ ಬಹುಮತ ಸಾಬೀತು ಪ್ರಕ್ರಿಯೆ ನಡೆಯಲು ಸಾಧ್ಯ.

ಮಣಿಂದರ್ ಸಿಂಗ್ ವಾದ ಮಂಡನೆ:

ಅಜಿತ್ ಪವಾರ್ ಪರ ಹಿರಿಯ ವಕೀಲ ಮಣಿಂದರ್ ಸಿಂಗ್ ವಾದ ಮಂಡನೆ ಮಾಡಿದ್ದಾರೆ. ಅಜಿತ್ ಪವಾರ್ ಅವರು ಎನ್​ಸಿಪಿ ನಾಯಕನಾಗಿಯೇ ಎಲ್ಲ ಕಾರ್ಯನಿರ್ವಹಿಸಿದ್ದಾರೆ. ನ.22ರ ಬಳಿಕ ಎನ್​​ಸಿಪಿ ನಾಯಕನಲ್ಲ ಎನ್ನುವುದನ್ನು ಸಾಬೀತುಪಡಿಸಲು ಏನೂ ಸಾಕ್ಷ್ಯವಿಲ್ಲ.

ಪತ್ರ ಹಾಗೂ ಸೂಕ್ತ ದಾಖಲೆಗಳನ್ನು ಕೋರ್ಟ್​ ಪರಿಗಣಿಸುತ್ತದೆಯೋ ಎನ್ನುವುದು ಸ್ಪಷ್ಟಪಡಿಸಬೇಕಿದೆ ಎಂದು ಮಣಿಂದರ್ ಸಿಂಗ್ ಪೀಠಕ್ಕೆ ಪ್ರಶ್ನೆ ಮಾಡಿದ್ದಾರೆ.

ಕಪಿಲ್ ಸಿಬಲ್ ಪ್ರತಿವಾದ:

ಶುಕ್ರವಾರ,ಶನಿವಾರ ನಡೆದ ಎಲ್ಲ ಮಹತ್ವದ ಬೆಳವಣಿಗೆಯನ್ನು ಸಿಬಲ್ ಕೋರ್ಟ್​ ಗಮನಕ್ಕೆ ತಂದರು. ಸಿಎಂ ಹಾಗೂ ಡಿಸಿಎಂ ಪ್ರಮಾಣ ವಚನದ ತರಾತುರಿಯನ್ನೂ ಈ ವೇಳೆ ಉಲ್ಲೇಖಿಸಿದ್ದಾರೆ.

ಸರ್ಕಾರ ರಚನೆಗೆ ಆರಂಭದಲ್ಲಿ ಅಷ್ಟೊಂದು ದಿನಗಳ ಕಾಲ ರಾಜ್ಯಪಾಲರು ಕಾದಿದ್ದರು. ಆದರೆ ನಸುಕಿನ ಜಾವ 54.7ರ ವೇಳೆ ರಾಷ್ಟ್ರಪತಿ ಆಳ್ವಿಕೆ ಹಿಂತೆಗೆದು, ಬೆಳಗ್ಗೆ 8 ಗಂಟೆಗೆ ಸರ್ಕಾರ ರಚನೆಗೆ ಅನುಮತಿ ನೀಡುವ ತರಾತುರಿ ಏನಿತ್ತು..?

ಎಲ್ಲ ಘಟನಾವಳಿಗಳು ಶುಕ್ರವಾರ ಸಂಜೆ 7ರಿಂದ ಶನಿವಾರ ನಸುಕಿನ ಜಾವ 5ರ ನಡುವೆ ನಡೆದಿದೆ. ಇದು ಮೂರು ಪಕ್ಷ ಸರ್ಕಾರ ರಚಿಸುವುದನ್ನು ತಡೆಯಲು ನಡೆಸಿದ ಹುನ್ನಾರ ಎಂಬುದನ್ನ ನ್ಯಾಯಪೀಠದ ಗಮನಕ್ಕೆ ತಂದರು.

ಚುನಾವಣೆಗೂ ಮುನ್ನ ಮಾಡಿಕೊಂಡಿದ್ದ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲವಾದ ಕಾರಣ ಬಿಜೆಪಿ-ಶಿವಸೇನೆ ಮೈತ್ರಿ ಮುರಿದುಬಿತ್ತು. ಇದರಲ್ಲಿ ಕಾಂಗ್ರೆಸ್ ಅಥವಾ ಎನ್​ಸಿಪಿ ಹಸ್ತಕ್ಷೇಪವಿಲ್ಲ. ಮೈತ್ರಿ ಮುರಿದುಬಿದ್ದ ಹಿನ್ನೆಲೆಯಲ್ಲಿ ಮೂರು ಪಕ್ಷ ಸೇರಿ ಸರ್ಕಾರ ರಚನೆಗೆ ಮುಂದಾಗಿದ್ದವು.

ಇಂದು ಅಜಿತ್ ಪವಾರ್ ತಮ್ಮೊಂದಿಗೆ 54 ಶಾಸಕರ ಬೆಂಬಲವಿದೆ ಎನ್ನುತ್ತಿದ್ದಾರೆ. ಆದರೆ ಅವರನ್ನು ಎನ್​ಸಿಪಿಯಿಂದ ಉಚ್ಛಾಟಿಸಲಾಗಿದೆ. ಸರ್ಕಾರ ಬಹುಮತ ಇದೆ ಎಂದಾದರೆ ಅದರ ಸಾಬೀತಿಗೆ ಹಿಂಜರಿಕೆ ಏಕೆ..?

ಸಿಂಘ್ವಿ ಪ್ರತಿವಾದ:

ಎಲ್ಲರೂ ಬಹುಮತ ಸಾಬೀತಿಗೆ ಪಟ್ಟುಹಿಡಿದ್ದಾರೆ. ಆದರೆ ಇದು ಯಾವಾಗ ಎನ್ನುವುದೇ ಸದ್ಯದ ಪ್ರಶ್ನೆ..! ಎನ್​​ಸಿಪಿ ಶಾಸಕರ ಸಹಿ ಇರುವ ಪತ್ರ ಇದ್ದಿದ್ದು ನಿಜ, ಆದರೆ ಅವರೆಲ್ಲರೂ ಬಿಜೆಪಿ ಬೆಂಬಲ ಸೂಚಿಸುತ್ತಿದ್ದಾರೆ ಎನ್ನುವುದಕ್ಕೆ ಸ್ಪಷ್ಟತೆ ಇಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ..!
- ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ಅಭಿಷೇಕ್​ ಮನುಸಿಂಘ್ವಿ

- ಎನ್​​ಸಿಪಿಯ ಒಬ್ಬನೇ ಒಬ್ಬ ಶಾಸಕ ಬಿಜೆಪಿ ಬೆಂಬಲಿಸಿ ಸಹಿ ಮಾಡಿಲ್ಲ

- ತಕ್ಷಣವೇ ಬಹುಮತ ಸಾಬೀತುಮಾಡಲು ಅವಕಾಶ ಮಾಡಿಕೊಡಿ

- ಎನ್​​ಸಿಪಿ- ಕಾಂಗ್ರೆಸ್​- ಶಿವಸೇನೆ ಬೆಂಬಲ ಪತ್ರ ಸ್ವೀಕರಿಸಲು ಕೋರ್ಟ್​ ನಕಾರ

- ಅಭಿಷೇಕ್​ ಮನುಸಿಂಘ್ವಿ ನೀಡಿದ ಬೆಂಬಲಪತ್ರ ತಳ್ಳಿ ಹಾಕಿದ ಕೋರ್ಟ್​

- ಇಂದೇ ಬಹುಮತ ಸಾಬೀತಿಗೆ ಅವಕಾಶ ಮಾಡಿಕೊಡಬೇಕು - ಸಿಂಘ್ವಿ

ವಾದ-ಪ್ರತಿವಾದ ಮಂಡಿಸುವ ವಕೀಲರು:

  • ಕಪಿಲ್​ ಸಿಬಲ್ - ಶಿವಸೇನೆ ಪರ
  • ಅಭಿಷೇಕ್ ಮನುಸಿಂಘ್ವಿ - ಕಾಂಗ್ರೆಸ್-ಎನ್​​ಸಿಪಿ ಪರ
  • ಮುಕುಲ್ ರೋಹ್ಟಗಿ - ಮಹಾರಾಷ್ಟ್ರ ಬಿಜೆಪಿ ಪರ
  • ಸಾಲಿಸಿಟರ್ ಜನರಲ್​​ ತುಷಾರ್ ಮೆಹ್ತಾ - ರಾಜ್ಯಪಾಲರ ಕಾರ್ಯದರ್ಶಿ ಪರ
  • ಮಣಿಂದರ್ ಸಿಂಗ್ - ಅಜಿತ್ ಪವಾರ್ ಪರ

Intro:Body:

ಮುಂಬೈ: 

Conclusion:
Last Updated : Nov 25, 2019, 12:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.