ETV Bharat / bharat

'ಮಹಾ' ಕಣದಲ್ಲಿ ಘಟಾನುಘಟಿಗಳ ಜಿದ್ದಾಜಿದ್ದಿ: ರೇಸ್‌ನಲ್ಲಿ ಹಾಲಿ ಸಿಎಂ, ಠಾಕ್ರೆ ಕುಡಿ ಸೇರಿ ಹಲವರು.. - ಹರಿಯಾಣ ಚುನಾವಣೆ ಫಲಿತಾಂಶ ಸುದ್ದಿ

ಬಿಜೆಪಿ ಆಡಳಿತದಲ್ಲಿರುವ ಮಹಾರಾಷ್ಟ್ರದಲ್ಲಿ ಶೇ.63ರಷ್ಟು ಮತದಾನ ನಡೆದಿದೆ. 2014ರಲ್ಲಿ ಶೇ.63.38ರಷ್ಟು ವೋಟಿಂಗ್ ದಾಖಲಾಗಿತ್ತು.ರಾಜ್ಯದ ಚುನಾವಣಾ ಕಣದಲ್ಲಿ ಹಲವು ಘಟಾನುಘಟಿಗಳಿದ್ದು, ಅವರು ಯಾರು ಎನ್ನುವ ಮಾಹಿತಿ ಇಲ್ಲಿದೆ.

'ಮಹಾ' ಕಣದಲ್ಲಿ ಘಟಾನುಘಟಿಗಳು
author img

By

Published : Oct 24, 2019, 8:36 AM IST

ನವದೆಹಲಿ: ಅ.21ರಂದು ನಡೆದಿದ್ದ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯ ಮತಎಣಿಕೆ ಇಂದು ನಡೆಯಲಿದ್ದು, ಮಹಾರಾಷ್ಟ್ರದ 3,237 ಹಾಗೂ ಹರಿಯಾಣದ 1,169 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಬಿಜೆಪಿ ಆಡಳಿತದಲ್ಲಿರುವ ಮಹಾರಾಷ್ಟ್ರದಲ್ಲಿ ಶೇ.63ರಷ್ಟು ಮತದಾನ ನಡೆದಿದೆ. 2014ರಲ್ಲಿ ಶೇ.63.38ರಷ್ಟು ವೋಟಿಂಗ್ ದಾಖಲಾಗಿತ್ತು. ಮಹಾರಾಷ್ಟ್ರ ಚುನಾವಣಾ ಕಣದಲ್ಲಿ ಹಲವು ಘಟಾನುಘಟಿಗಳಿದ್ದು, ಅವರು ಯಾರು ಎನ್ನುವ ಮಾಹಿತಿ ಇಲ್ಲಿದೆ.

LIVE: ಮಹಾರಾಷ್ಟ್ರ, ಹರಿಯಾಣದಲ್ಲಿ ಮತಎಣಿಕೆ ಆರಂಭ

ನಾಗ್ಪುರ(ನೈಋತ್ಯ):
ದೇವೇಂದ್ರ ಫಡ್ನವೀಸ್(ಬಿಜೆಪಿ) Vs ಆಶಿಶ್ ದೇಶ್​ಮುಖ್​(ಕಾಂಗ್ರೆಸ್)

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಕಣದಲ್ಲಿರುವ ಈ ಕ್ಷೇತ್ರ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರ. ಈ ಕ್ಷೇತ್ರದ ಮೊತ್ತೊಂದು ವಿಶೇಷವೆಂದರೆ ಬಿಜೆಪಿಯ ಮಾಜಿ ಶಾಸಕ ಆಶಿಶ್ ದೇಶ್​ಮುಖ್​​ರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ವರ್ಲಿ:

ಆದಿತ್ಯ ಠಾಕ್ರೆ(ಶಿವಸೇನೆ) Vs ಸುರೇಶ್ ಮಾನೆ(ಎನ್​ಸಿಪಿ)

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಪುತ್ರ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಕದನ ಕುತೂಹಲ ಮೂಡಿಸಿದೆ. ಠಾಕ್ರೆ ಕುಟುಂಬದ ಮೊದಲ ಚುನಾವಣೆ ಇದಾಗಿದ್ದು 29 ವರ್ಷದ ಆದಿತ್ಯ ಗೆಲುವು ಅತ್ಯಂತ ಅಗತ್ಯವಾಗಿದೆ. ದಲಿತ ನಾಯಕ ಸುರೇಶ್ ಮಾನೆ ಎನ್​ಸಿಪಿಯಿಂದ ಠಾಕ್ರೆಗೆ ಟಕ್ಕರ್ ನೀಡಲು ಸಿದ್ಧರಾಗಿದ್ದಾರೆ.

ಅಹೇರಿ:

ಧರ್ಮರಾವ್​ ಬಾಬ ಅತ್ರಮ್​(ಎನ್​ಸಿಪಿ) Vs ದೀಪಕ್ ದಾದ ಅತ್ರಮ್​(ಕಾಂಗ್ರೆಸ್) Vs ಅಂಬರೀಶ್​ ರಾವ್ ಸತ್ಯವಾನ್​ರಾವ್​(ಬಿಜೆಪಿ)

ಬೌಗೋಳಿಕವಾಗಿ ರಾಜ್ಯದ ಅತಿದೊಡ್ಡ ಕ್ಷೇತ್ರವಾದ ಅಹೇರಿಯಲ್ಲಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್​-ಎನ್​ಸಿಪಿ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ. ಈ ಲಾಭವನ್ನು ಪಡೆಯಲು ಬಿಜೆಪಿ ಹವಣಿಸುತ್ತಿದೆ.

ಕೊತ್ರಡ್:

ಚಂದ್ರಕಾಂತ್ ಪಾಟೀಲ್(ಬಿಜೆಪಿ) Vs ಕಿಶೋರ್ ಶಿಂಧೆ(ಎಂಎನ್​ಎಸ್​)

ಈ ಕ್ಷೇತ್ರದಲ್ಲಿ ಮಹಾರಾಷ್ಟ್ರ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಕಣಕ್ಕಿಳಿದಿದ್ದಾರೆ. ಎನ್​ಸಿಪಿ ಕೊತ್ರಡ್​ನಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಗೆ(ಎಂಎನ್​ಎಸ್​) ತನ್ನ ಬೆಂಬಲ ಸೂಚಿಸಿದೆ.

ಕರಾಡ್(ದಕ್ಷಿಣ):

ಪೃಥ್ವಿರಾಜ್ ಚವ್ಹಾಣ್(ಕಾಂಗ್ರೆಸ್) Vs ಅತುಲ್ ಸುರೇಶ್ ಭೋಸಾಲೆ(ಬಿಜೆಪಿ)

ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಹಾಗೂ ಬಿಜೆಪಿಯ ಪ್ರಬಲ ಅಭ್ಯರ್ಥಿ ಅತುಲ್ ಸುರೇಶ್ ಭೋಸಾಲೆ ನಡುವೆ ತೀತ್ರ ಸ್ಪರ್ಧೆ ಏರ್ಪಟ್ಟಿದೆ. 1962ರಿಂದ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸೋಲನ್ನೇ ಕಂಡಿಲ್ಲ ಎನ್ನುವುದು ಗಮನಾರ್ಹ ಸಂಗತಿ.

ಭೋಕರ್​:

ಬಾಪುಸಾಹೇಬ್​ ಗೋರ್ತೆಕರ್​(ಬಿಜೆಪಿ) Vs ಅಶೋಕ್​ ಚವ್ಹಾಣ್​(ಶಿವಸೇನಾ)

ರಾಜ್ಯ ಬರಪೀಡಿತ ಕ್ಷೇತ್ರ ಎಂದೇ ಕರೆಸಿಕೊಳ್ಳುವ ಭೋಕರ್​ನಲ್ಲಿ ಬಿಜೆಪಿಯ ಬಾಪುಸಾಹೇಬ್​ ಗೋರ್ತೆಕರ್, ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಚವ್ಹಾಣ್ ವಿರುದ್ಧ ಸ್ಪರ್ಧೆ ನಡೆಸುತ್ತಿದೆ.

ಸಂಗಮ್ನೇರ್​:

ಬಾಳಾಸಾಹೇಬ್​ ತ್ರೋಟ್(ಕಾಂಗ್ರೆಸ್) Vs ಸಾಹೇಬ್​ರಾವ್ ನವಲೆ(ಶಿವಸೇನಾ)

ಸಂಗಮ್ನೇರ್ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಬಾಳಾಸಾಹೇಬ್​ ತ್ರೋಟ್ ಹಾಗೂ ಶಿವಸೇನೆಯ ಸಾಹೇಬ್​ರಾವ್ ನವಲೆ ನಡುವೆ ನೇರ ಪೈಪೋಟಿ ಇದೆ.

ಬಾರಾಮತಿ:

ಅಜಿತ್ ಪವಾರ್​(ಕಾಂಗ್ರೆಸ್) Vs ಗೋಪಿಚಂದ್ ಪಡಲ್ಕರ್​(ಬಿಜೆಪಿ)

ಎನ್​ಸಿಪಿ ಮುಖಂಡ ಹಾಗೂ ಪ್ರಬಲ ಹುರಿಯಾಳು ಅಜಿತ್ ಪವಾರ್ ಬಾರಾಮತಿಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇಲ್ಲಿ ದಂಗರ್ ಸಮುದಾಯದ ನಾಯಕ ಗೋಪಿಚಂದ್​ರನ್ನು ಬಿಜೆಪಿ ಕಣಕ್ಕಿಳಿಸಿದೆ.

ಪರ್ಲಿ:

ಪಂಕಜಾ ಮುಂಡೆ(ಬಿಜೆಪಿ) Vs ಧನಂಜಯ್ ಮುಂಡೆ(ಎನ್​ಸಿಪಿ)

ಮುಂಡೆ ಕುಟುಂಬದ ಜಿದ್ದಾಜಿದ್ದಿನ ಹೋರಾಟಕ್ಕೆ ಪರ್ಲಿ ಕ್ಷೇತ್ರ ಸಾಕ್ಷಿಯಾಗಿದೆ. ಬಿಜೆಪಿಯ ಹಿರಿಯ ನಾಯಕ ಗೋಪಿನಾಥ್ ಮುಂಡೆ ಪುತ್ರಿ ಪಂಕಜಾ ಮುಂಡೆ ಬಿಜೆಪಿಯಿಂದ ಹಾಗೂ ಎನ್​ಸಿಪಿಯಿಂದ ಧನಂಜಯ್ ಮುಂಡೆ ಸ್ಪರ್ಧೆ ನಡೆಸುತ್ತಿದ್ದಾರೆ.

Intro:Body:

ಬಿಜೆಪಿ ಆಡಳಿತದಲ್ಲಿರುವ ಮಹಾರಾಷ್ಟ್ರದಲ್ಲಿ ಶೇ.63ರಷ್ಟು ಮತದಾನ ನಡೆದಿದೆ. 2014ರಲ್ಲಿ ಶೇ.63.38ರಷ್ಟು ವೋಟಿಂಗ್ ದಾಖಲಾಗಿತ್ತು. ಮಹಾರಾಷ್ಟ್ರ ಚುನಾವಣಾ ಕಣದಲ್ಲಿ ಹಲವು ಘಟಾನುಘಟಿಗಳಿದ್ದು, ಅವರು ಯಾರು ಎನ್ನುವ ಮಾಹಿತಿ ಇಲ್ಲಿದೆ...

ನಾಗ್ಪುರ(ನೈಋತ್ಯ): 

ದೇವೇಂದ್ರ ಫಡ್ನವೀಸ್(ಬಿಜೆಪಿ) Vs ಆಶಿಶ್ ದೇಶ್​ಮುಖ್​(ಕಾಂಗ್ರೆಸ್)

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಕಣದಲ್ಲಿರುವ ಈ ಕ್ಷೇತ್ರ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರ. ಈ ಕ್ಷೇತ್ರದ ಮೊತ್ತೊಂದು ವಿಶೇಷವೆಂದರೆ ಬಿಜೆಪಿಯ ಮಾಜಿ ಶಾಸಕ ಆಶಿಶ್ ದೇಶ್​ಮುಖ್​​ರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ವರ್ಲಿ:

ಆದಿತ್ಯ ಠಾಕ್ರೆ(ಶಿವಸೇನೆ) Vs  ಸುರೇಶ್ ಮಾನೆ(ಎನ್​ಸಿಪಿ)

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಪುತ್ರ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಕದನ ಕುತೂಹಲ ಮೂಡಿಸಿದೆ. ಠಾಕ್ರೆ ಕುಟುಂಬದ ಮೊದಲ ಚುನಾವಣೆ ಇದಾಗಿದ್ದು 29 ವರ್ಷದ ಆದಿತ್ಯ ಗೆಲುವು ಅತ್ಯಂತ ಅಗತ್ಯವಾಗಿದೆ. ದಲಿತ ನಾಯಕ ಸುರೇಶ್ ಮಾನೆ ಎನ್​ಸಿಪಿಯಿಂದ ಠಾಕ್ರೆಗೆ ಟಕ್ಕರ್ ನೀಡಲು ಸಿದ್ಧರಾಗಿದ್ದಾರೆ.

ಅಹೇರಿ:

ಧರ್ಮರಾವ್​ ಬಾಬ ಅತ್ರಮ್​(ಎನ್​ಸಿಪಿ) Vs ದೀಪಕ್ ದಾದ ಅತ್ರಮ್​(ಕಾಂಗ್ರೆಸ್) Vs ಅಂಬರೀಶ್​ ರಾವ್ ಸತ್ಯವಾನ್​ರಾವ್​(ಬಿಜೆಪಿ)

ಬೌಗೋಳಿಕವಾಗಿ ರಾಜ್ಯದ ಅತಿದೊಡ್ಡ ಕ್ಷೇತ್ರವಾದ ಅಹೇರಿಯಲ್ಲಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್​-ಎನ್​ಸಿಪಿ ನಡುವಯೇ ಸ್ಪರ್ಧೆ ಏರ್ಪಟ್ಟಿದೆ. ಈ ಲಾಭವನ್ನು ಪಡೆಯಲು ಬಿಜೆಪಿ ಹವಣಿಸತ್ತಿದೆ.

ಕೊತ್ರಡ್:

ಚಂದ್ರಕಾಂತ್ ಪಾಟೀಲ್(ಬಿಜೆಪಿ) Vs ಕಿಶೋರ್ ಶಿಂಧೆ(ಎಂಎನ್​ಎಸ್​)

ಈ ಕ್ಷೇತ್ರದಲ್ಲಿ ಮಹಾರಾಷ್ಟ್ರ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಕಣಕ್ಕಿಳಿದಿದ್ದಾರೆ. ಎನ್​ಸಿಪಿ ಕೊತ್ರಡ್​ನಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಗೆ(ಎಂಎನ್​ಎಸ್​) ತನ್ನ ಬೆಂಬಲ ಸೂಚಿಸಿದೆ.

ಕರಾಡ್(ದಕ್ಷಿಣ):

ಪೃಥ್ವಿರಾಜ್ ಚವ್ಹಾಣ್(ಕಾಂಗ್ರೆಸ್) Vs ಅತುಲ್ ಸುರೇಶ್  ಭೋಸಾಲೆ(ಬಿಜೆಪಿ)

ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಹಾಗೂ ಬಿಜೆಪಿಯ ಪ್ರಬಲ ಅಭ್ಯರ್ಥಿ ಅತುಲ್ ಸುರೇಶ್  ಭೋಸಾಲೆ ನಡುವೆ ತೀತ್ರ ಸ್ಪರ್ಧೆ ಏರ್ಪಟ್ಟಿದೆ. 1962ರಿಂದ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸೋಲನ್ನೇ ಕಂಡಿಲ್ಲ ಎನ್ನುವುದು ಗಮನಾರ್ಹ ಸಂಗತಿ.

ಭೋಕರ್​:

ಬಾಪುಸಾಹೇಬ್​ ಗೋರ್ತೆಕರ್​(ಬಿಜೆಪಿ) Vs ಅಶೋಕ್​ ಚವ್ಹಾಣ್​(ಶಿವಸೇನಾ)

ರಾಜ್ಯ ಬರಪೀಡಿತ ಕ್ಷೇತ್ರ ಎಂದೇ ಕರೆಸಿಕೊಳ್ಳುವ ಭೋಕರ್​ನಲ್ಲಿ ಬಿಜೆಪಿಯ ಬಾಪುಸಾಹೇಬ್​ ಗೋರ್ತೆಕರ್, ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಚವ್ಹಾಣ್ ವಿರುದ್ಧ ಸ್ಪರ್ಧೆ ನಡೆಸುತ್ತಿದೆ.

ಸಂಗಮ್ನೇರ್​:

ಬಾಳಾಸಾಹೇಬ್​ ತ್ರೋಟ್(ಕಾಂಗ್ರೆಸ್) Vs ಸಾಹೇಬ್​ರಾವ್ ನವಲೆ(ಶಿವಸೇನಾ)

ಸಂಗಮ್ನೇರ್ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಬಾಳಾಸಾಹೇಬ್​ ತ್ರೋಟ್ ಹಾಗೂ ಶಿವಸೇನೆಯ 

ಸಾಹೇಬ್​ರಾವ್ ನವಲೆ ನಡುವೆ ನೇರ ಪೈಪೋಟಿ ಇದೆ. 

ಬಾರಾಮತಿ:

ಅಜಿತ್ ಪವಾರ್​(ಕಾಂಗ್ರೆಸ್) Vs ಗೋಪಿಚಂದ್ ಪಡಲ್ಕರ್​(ಬಿಜೆಪಿ)

ಎನ್​ಸಿಪಿ ಮುಖಂಡ ಹಾಗೂ ಪ್ರಬಲ ಹುರಿಯಾಳು ಅಜಿತ್ ಪವಾರ್ ಬಾರಾಮತಿಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇಲ್ಲಿ ದಂಗರ್ ಸಮುದಾಯದ ನಾಯಕ ಗೋಪಿಚಂದ್​ರನ್ನು ಬಿಜೆಪಿ ಕಣಕ್ಕಳಿಸಿದೆ.

ಪರ್ಲಿ:

ಪಂಕಜಾ ಮುಂಡೆ(ಬಿಜೆಪಿ) Vs ಧನಂಜಯ್ ಮುಂಡೆ(ಎನ್​ಸಿಪಿ)

ಮುಂಡೆ ಕುಟುಂಬದ ಜಿದ್ದಾಜಿದ್ದಿನ ಹೋರಾಟಕ್ಕೆ ಪರ್ಲಿ ಕ್ಷೇತ್ರ ಸಾಕ್ಷಿಯಾಗಿದೆ. ಬಿಜೆಪಿಯ ಹಿರಿಯ ನಾಯಕ ಗೋಪಿನಾಥ್ ಮುಂಡೆ ಪುತ್ರಿ ಪಂಕಜಾ ಮುಂಡೆ ಬಿಜೆಪಿಯಿಂದ ಹಾಗೂ ಎನ್​ಸಿಪಿಯಿಂದ ಧನಂಜಯ್ ಮುಂಡೆ ಸ್ಪರ್ಧೆ ನಡೆಸುತ್ತಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.