ETV Bharat / bharat

ಮಹಾರಾಷ್ಟ್ರದ 26 ಅಣೆಕಟ್ಟೆಗಳು ಖಾಲಿ ಖಾಲಿ... ಕೃಷ್ಣೆ ಕೊಳದಲ್ಲಿ ಆತಂಕ..!

ಇಲ್ಲಿಯವರೆಗೆ (ಮೇ 18) ಮಹಾರಾಷ್ಟ್ರದ 26 ಅಣೆಕಟ್ಟೆಗಳಲ್ಲಿನ ನೀರಿನ ಸಂಗ್ರಹ ಸಾಮರ್ಥ್ಯ ಶೂನ್ಯಕ್ಕೆ ತಲುಪಿದೆ. ಈ ಬಗ್ಗೆ ಸಾಂಖಿಕ ಇಲಾಖೆ ಆಧರಿಸಿದ ಅಣೆಕಟ್ಟೆಗಳಲ್ಲಿನ ನೀರಿನ ಸಂಗ್ರಹದ ಅಂಕಿಅಂಶಗಳನ್ನು ಜಲ ಸಂರಕ್ಷಣೆ ಇಲಾಖೆಯು ತನ್ನ ವೆಬ್​ ಸೈಟ್​ನಲ್ಲಿ ಪ್ರಕಟಿಸಿದೆ.

ಆಣೆಕಟ್ಟೆ
author img

By

Published : May 19, 2019, 12:37 AM IST

Updated : May 19, 2019, 1:39 PM IST

ಮುಂಬೈ: ಕಳೆದ ವರ್ಷದ ಬರಗಾಲದ ಛಾಯೆಗೆ ತತ್ತರಿಸಿದ್ದ ಮಹಾರಾಷ್ಟ್ರಕ್ಕೆ ಈ ವರ್ಷವೂ ಭೀಕರ ಬರಗಾಲದ ಪರಿಸ್ಥಿತಿ ತಲೆದೋರಿದೆ.

ಇಲ್ಲಿಯವರೆಗೆ (ಮೇ 18) ಮಹಾರಾಷ್ಟ್ರದ 26 ಅಣೆಕಟ್ಟೆಗಳಲ್ಲಿನ ನೀರಿನ ಸಂಗ್ರಹ ಸಾಮರ್ಥ್ಯ ಶೂನ್ಯಕ್ಕೆ ತಲುಪಿದೆ. ಈ ಬಗ್ಗೆ ಸಾಂಖಿಕ ಇಲಾಖೆ ಆಧರಿಸಿದ ಅಣೆಕಟ್ಟೆಗಳಲ್ಲಿನ ನೀರಿನ ಸಂಗ್ರಹದ ಅಂಕಿ ಅಂಶಗಳನ್ನು ಜಲ ಸಂರಕ್ಷಣೆ ಇಲಾಖೆಯು ತನ್ನ ವೆಬ್​ ಸೈಟ್​ನಲ್ಲಿ ಪ್ರಕಟಿಸಿದೆ.

ಔರಂಗಬಾದ್​, ಬೇದ್​, ಹಿಂಗೋಲಿ, ಪ್ರಭಾನಿ ಹಾಗೂ ಒಸ್ಮಾನಬಾದ್​ ಜಿಲ್ಲೆಗಳಲ್ಲಿನ ಅಣೆಕಟ್ಟೆಗಳಲ್ಲಿ ಶೇ 0.43ರಷ್ಟು ಮಾತ್ರವೇ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಅಣೆಕಟ್ಟೆಗಳಲ್ಲಿ ಶೇ 23.44ರಷ್ಟು ನೀರು ಶೇಖರಣೆ ಆಗಿತ್ತು.

ಔರಂಗಬಾದ್​ ವಿಭಾಗದ ಪೈಥಾನ್, ಮಂಜಾರ, ಮಜಲ್ಗಾಂವ್, ಯೆಲ್ಡಾರಿ, ಸಿದ್ದೇಶ್ವರ್, ಲೋವರ್ ತೆರ್ನಾ, ಸಿನಾ ಕೋಲೆಗಾಂವ್ ಮತ್ತು ಲೋವರ್ ಧುಡ್​ನಾ ಆಣೆಕಟ್ಟೆಗಳಲ್ಲಿ ನೀರಿನ ಮಟ್ಟ ಶೂನ್ಯ ಮಟ್ಟ ತಲುಪಿದೆ. ಕಳೆದ ವರ್ಷ ಮೇ 18ರಂದು ಪೈಥಾನ್​- ಶೇ 34.95ರಷ್ಟು ಮಂಜಾರ- ಶೇ 21.24 ರಷ್ಟು, ಮಜಲ್ಗಾಂವ್​- ಶೇ 17.5ರಷ್ಟು ಹಾಗೂ ತರ್ನಾ- ಶೇ 52.03 ರಷ್ಟು ನೀರು ಶೇಖರಣೆ ಆಗಿತ್ತು.

ಸಂಪೂರ್ಣವಾಗಿ ಬತ್ತಿರುವ ಕೃಷ್ಣಾ ನದಿಗೆ ನೀರು ಹರಿಸುವಂತೆ ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ನೀರು ನೀಡಲು ಷರತ್ತು ಬದ್ಧವಾಗಿ ಒಪ್ಪಿಕೊಂಡ ಮಹಾ ಸರ್ಕಾರ, ನೀರಿಗೆ ನೀರು ಕೊಡುವಂತೆ ಕೇಳಿತ್ತ. ಈ ಹಿಂದೆ ಹಣ ಪಡೆದು ಕೃಷ್ಣಾ ನದಿಗೆ ನೀರು ಹರಿಸುತ್ತಿತ್ತು. ಈ ವರ್ಷ ಮಹಾರಾಷ್ಟ್ರದ 26 ಆಣೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಶೂನ್ಯಕ್ಕೆ ತಲುಪಿದ್ದು, ಮಾಹಾ ಹಾಗೂ ಕೃಷ್ಣಾ ನದಿ ತೀರದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

Intro:Body:Conclusion:
Last Updated : May 19, 2019, 1:39 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.