ETV Bharat / bharat

ಪ್ರೀತಿ ನಿರಾಕರಿಸಿದ್ದ ಶಿಕ್ಷಕಿಗೆ ಬೆಂಕಿ ಹಚ್ಚಿ ಶಿಕ್ಷೆ​: ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಟೀಚರ್​! - ಶಿಕ್ಷಕಿ ಮೇಲೆ ಪೆಟ್ರೋಲ್​

ಪ್ರೀತಿ ಮಾಡಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡು ಶಿಕ್ಷಕಿಯೊಬ್ಬಳ ಮೇಲೆ ವ್ಯಕ್ತಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು.

Woman lecturer set on fire
Woman lecturer set on fire
author img

By

Published : Feb 10, 2020, 10:13 AM IST

ನಾಗ್ಪುರ್​(ಮಹಾರಾಷ್ಟ್ರ): ಪ್ರೀತಿಸಲು ನಿರಾಕರಿಸಿದ್ದಕ್ಕಾಗಿ ಶಿಕ್ಷಕಿ ಮೇಲೆ ನಡು ರಸ್ತೆಯಲ್ಲಿಯೇ ಯುವಕನೊಬ್ಬ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದ ಘಟನೆ ಮಹಾರಾಷ್ಟ್ರದ ವಿದರ್ಭದಲ್ಲಿ ನಡೆದಿತ್ತು.

ಫೆ.3ರಂದು ವಾರ್ಧಾ ಜಿಲ್ಲೆಯ ಹಿಂಗನ್​ ಘಾಟ್​ ಪ್ರದೇಶದಲ್ಲಿ ಶಿಕ್ಷಕಿ ಮೇಲೆ ವ್ಯಕ್ತಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದನು. ಶೇ.40ರಷ್ಟು ಗಾಯಗೊಂಡಿದ್ದ ಮಹಿಳೆಯನ್ನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ಯುವತಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ವಿಕ್ಕಿ ನಗ್ರಾಲೆ(27) ಎಂಬ ಭಗ್ನ ಪ್ರೇಮಿ ಈ ಕೃತ್ಯ ಎಸೆಗಿದ್ದ. ಬೈಕ್​ ಮೇಲೆ ಆಗಮಿಸಿದ್ದ ಈತ ಶಿಕ್ಷಕಿ ಮೇಲೆ ಏಕಾಏಕಿಯಾಗಿ ಪೆಟ್ರೋಲ್​ ಸುರಿದು ಪರಾರಿಯಾಗಿದ್ದನು. ಈಗಾಗಲೇ ಪೊಲೀಸರು ಆತನನ್ನು ಬಂಧನ ಮಾಡಿದ್ದಾರೆ. ಈಗಾಗಲೇ ಮದುವೆಯಾಗಿರುವ ನಗ್ರಾಲೆಗೆ 7 ತಿಂಗಳ ಮಗುವಿದೆ. ಕಳೆದ ವರ್ಷ ಈತ ಆತ್ಮಹತ್ಯೆ ಮಾಡಿಕೊಳ್ಳಲು ಸಹ ಯತ್ನಿಸಿದ್ದನು ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.