ETV Bharat / bharat

ಪ್ರಶ್ನೆಗಳಿಗೆ ಉತ್ತರಿಸದ ಮಾತ್ರಕ್ಕೆ ಉತ್ತರಗಳಿಲ್ಲ ಎಂಬ ಅರ್ಥವಲ್ಲ: ಠಾಕ್ರೆ ಕಿಡಿ - ಮಹಾರಾಷ್ಟ್ರ ರಾಜಕೀಯ

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಜೊತೆಗೆ ರಾಜಕೀಯದ ವಾಕ್ಸಮರ ಜೋರಾಗಿದ್ದು, ಪ್ರತಿಪಕ್ಷಗಳು ಹಾಗೂ ಕೆಲವು ವಿಚಾರಗಳ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.

Uddhav Thackeray
ಉದ್ಧವ್ ಠಾಕ್ರೆ
author img

By

Published : Sep 13, 2020, 5:10 PM IST

ಮುಂಬೈ: ಕೆಲವು ದಿನಗಳಿಂದ ರಾಜಕೀಯ ಟೀಕೆಗಳನ್ನು ಎದುರಿಸಿದ್ದು, ಕೊರೊನಾ ವೈರಸ್ ವಿರುದ್ಧವೂ ಹೋರಾಡುತ್ತೇವೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಭಾಷಣವೊಂದರಲ್ಲಿ ಮಾತನಾಡಿದ ಅವರು ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಮುಂಬೈ ಕಚೇರಿ ವಿಚಾರ ಹಾಗೂ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರವಾಗಿ ತಮ್ಮ ವಿರುದ್ಧ ಬಂದ ಟೀಕೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

ಇದರ ಜೊತೆಗೆ ರಾಜಕೀಯ ಬಿಕ್ಕಟ್ಟಿನ ಬಗ್ಗೆಯೂ ಉಲ್ಲೇಖಿಸಿದ ಅವರು ರಾಜಕೀಯದ ಬಗ್ಗೆ ಮಾತನಾಡಬೇಕೆಂದರೆ ಮುಖ್ಯಮಂತ್ರಿಯ ಮುಖವಾಡವನ್ನು ತೆಗೆಯಬೇಕು. ನಾನು ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲವೆಂದರೆ ನನ್ನ ಬಳಿ ಉತ್ತರಗಳಿಲ್ಲ ಎಂಬುದಲ್ಲ' ಎಂದು ಪ್ರತಿಪಕ್ಷಗಳಿಗೆ ಮಾರ್ಮಿಕವಾಗಿ ಟಾಂಗ್ ನೀಡಿದರು.

ಸ್ವಾಭಾವಿಕವಾಗಿ ಅಥವಾ ರಾಜಕೀಯವಾಗಿ ಯಾವುದೇ ಬಿರುಗಾಳಿ ಬಂದರೂ ಎದುರಿಸಲು ಸಿದ್ಧವಿದ್ದೇವೆ ಎಂದ ಅವರು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನೇತೃತ್ವದ ಬಿಜೆಪಿಯು ಶಿವಸೇನೆ ವಿರುದ್ಧ ಮಾಡುತ್ತಿರುವ ಆರೋಪಗಳ ವಿರುದ್ಧ ಕಿಡಿಕಾರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.