ಮಿಯಾಮಿ: ಜಗತ್ತಿಗೆ ಮಿಂಚಿನ ವೇಗದ ಓಟಗಾರ ಉಸೈನ್ ಬೋಲ್ಟ್ ತವರೂರು ಕೆರಿಬಿಯನ್ ಸಮುದ್ರತೀರದ ಸಣ್ಣ ದ್ವೀಪರಾಷ್ಟ್ರ ಜಮೈಕಾ ಭೂಕಂಪನಕ್ಕೆ ನಡುಗಿದೆ. ಅಮೆರಿಕ ಭೂಗರ್ಭಶಾಸ್ತ್ರ ಸರ್ವೆ ಪ್ರಕಾರ, ಭೂಕಂಪನವನ್ನು ಅಳೆಯುವ ರಿಕ್ಟರ್ ಮಾಪಕದಲ್ಲಿ 7.7 ರಷ್ಟು ತೀವ್ರತೆ ದಾಖಲಾಗಿದೆ.
-
Yikes! #jamaicaearthquake pic.twitter.com/eBcqe5GaW9
— TheREALWaitWhat? (@TheRealWhatWait) January 28, 2020 " class="align-text-top noRightClick twitterSection" data="
">Yikes! #jamaicaearthquake pic.twitter.com/eBcqe5GaW9
— TheREALWaitWhat? (@TheRealWhatWait) January 28, 2020Yikes! #jamaicaearthquake pic.twitter.com/eBcqe5GaW9
— TheREALWaitWhat? (@TheRealWhatWait) January 28, 2020
ಜಮೈಕಾದ ಲೂಸಿಯಾದ ವಾಯುವ್ಯ ದಿಕ್ಕಿನಲ್ಲಿ 125 ಕಿಲೋಮೀಟರ್ ದೂರದ ಸಮುದ್ರದಲ್ಲಿ ಮಂಗಳವಾರ 10 ಕಿಲೋಮೀಟರ್ (ಆರು ಮೈಲಿ) ಆಳದಲ್ಲಿ ಭೂಕಂಪ ಸಂಭವಿಸಿದೆ. ಜಮೈಕಾದ ಮಾಧ್ಯಮವೊಂದರ ವರದಿ ಪ್ರಕಾರ, ಇಡೀ ದ್ವೀಪರಾಷ್ಟ್ರದಲ್ಲಿ ಭೂಮಿ ನಡುಗಿದ ಅನುಭವವಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಘಟನೆಯಲ್ಲಿ ಸಾವು-ನೋವು, ಕಷ್ಟ-ನಷ್ಟದ ಬಗ್ಗೆ ಇದುವರೆಗೂ ಯಾವುದೇ ರೀತಿಯ ವರದಿಯಾಗಿಲ್ಲ.
ಘಟನೆ ನಡೆದ ಬಳಿಕ ಜಮೈಕನ್ನರು ಸಾಮಾಜಿಕ ಜಾಲತಾಣಗಳಲ್ಲಿ ಸ್ವಿಮ್ಮಿಂಗ್ ಫೂಲ್ ನಡುಗಿದ ದೃಶ್ಯಗಳನ್ನು ಟ್ವಿಟರ್ ಮೂಲಕ ಶೇರ್ ಮಾಡಿದ್ದಾರೆ.
ಭೂಕಂಪನವನ್ನು ಅಳೆಯುವ ರಿಕ್ಟರ್ ಸ್ಕೇಲ್ ನಲ್ಲಿ 7.7 ಅಂದ್ರೆ ದೊಡ್ಡ ಮಟ್ಟದ ಕಂಪನ(Major) ಎಂದು ಅರ್ಥೈಸಲಾಗುತ್ತದೆ.