ETV Bharat / bharat

ಹಲ್ಲೆ ಪ್ರಕರಣದಲ್ಲಿ ಜೈಲು ಶಿಕ್ಷೆ... ಬಿಜೆಪಿ ಶಾಸಕನನ್ನ ಅನರ್ಹಗೊಳಿಸಿದ ಸ್ಪೀಕರ್​​! - ಬಿಜೆಪಿ ಶಾಸಕನನ್ನ ಅನರ್ಹ ಗೊಳಿಸಿದ ಸ್ಪೀಕರ್

ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಪ್ರಹ್ಲಾದ್ ಸಿಂಗ್ ಲೋಧಿಗೆ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಬಿಜೆಪಿ ಶಾಸಕ ತಮ್ಮ ವಿಧಾನಸಭೆ ಸದಸ್ಯತ್ವ ಕಳೆದುಕೊಂಡಿದ್ದಾರೆ.

ಬಿಜೆಪಿ ಶಾಸಕ ಪ್ರಹ್ಲಾದ್ ಸಿಂಗ್ ಲೋಧಿ
author img

By

Published : Nov 2, 2019, 10:52 PM IST

ಭೋಪಾಲ್ (ಮಧ್ಯಪ್ರದೇಶ): ಜ್ಹಭುವಾ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಸೋಲು ಕಂಡು ಒಂದು ಸ್ಥಾನ ಕಳೆದುಕೊಂಡಿದ್ದ ಬಿಜೆಪಿ ಪಕ್ಷಕ್ಕೆ ಮತ್ತೆ ಹಿನ್ನಡೆಯಾಗಿದ್ದು, ಕಮಲ ಪಕ್ಷದ ಶಾಸಕನೋರ್ವನನ್ನು ಅನರ್ಹಗೊಳಿಸಲಾಗಿದೆ.

ಬಿಜೆಪಿ ಪಕ್ಷದ ಶಾಸಕ ಪ್ರಹ್ಲಾದ್ ಸಿಂಗ್ ಲೋಧಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ ಶಾಸಕ ಪ್ರಹ್ಲಾದ್ ಸಿಂಗ್ ಲೋಧಿಗೆ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹೀಗಾಗಿ ಪ್ರಹ್ಲಾದ್ ಸಿಂಗ್ ಅವರ ಶಾಸಕತ್ವ ಸ್ಥಾನವನ್ನ ರದ್ದುಗೊಳಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಎನ್​.ಪಿ.ಪ್ರಜಾಪತಿ, ಈ ಹಿಂದೆ ಸುಪ್ರೀಂಕೋರ್ಟ್ 2 ವರ್ಷ ಅಥವಾ 2 ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾದರೆ ಅಂಥವರು ವಿಧಾನಸಭೆ ಸದಸ್ಯತ್ವವನ್ನ ಕಳೆದುಕೊಳ್ಳಲಿದ್ದಾರೆ ಎಂದು ತೀರ್ಪು ನೀಡಿತ್ತು.

ಪ್ರಹ್ಲಾದ್ ಸಿಂಗ್ ಲೋಧಿ ಅವರಿಗೆ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿರುವ ಆದೇಶ ಇಂದು ನನಗೆ ತಲುಪಿದೆ. ಸುಪ್ರೀಂಕೊರ್ಟ್​ನ ತೀರ್ಪಿನಂತೆ ನಾನು ಪ್ರಹ್ಲಾದ್ ಸಿಂಗ್ ಲೋಧಿ ಅವರ ವಿಧಾನಸಭೆ ಸದಸ್ಯತ್ವ ರದ್ದುಗೊಳಿಸಿದ್ದೇನೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆಯಲ್ಲಿ 109 ಸ್ಥಾನ ಹೊಂದಿದ್ದ ಬಿಜೆಪಿ ಜ್ಹಭುವಾ ವಿಧಾನಸಭೆ ಉಪ ಚುನಾವಣೆಯಲ್ಲಿ ಸೋಲು ಕಂಡು ಒಂದು ಸ್ಥಾನ ಕಳೆದುಕೊಂಡಿತ್ತು. ಇದೀಗ ಮತ್ತೊಬ್ಬ ಶಾಸಕ ಅನರ್ಹಗೊಂಡಿರುವುದರಿಂದ ಬಿಜೆಪಿ ಬಲ 107ಕ್ಕೆ ಕುಸಿದಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.