ಛರ್ತಪುರ್ (ಮಧ್ಯಪ್ರದೇಶ): ಮದುವೆ ಸಮಾರಂಭದ ವೇಳೆ ದಲಿತ ವರನೊಬ್ಬ ಕುದುರೆ ಮೇಲೆ ಕುಳಿತುಕೊಂಡು ಮೆರವಣಿಗೆ ಹೋಗಿದ್ದು, ಆತನ ಮೇಲೆ ಮೇಲ್ಜಾತಿಯವರು ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ವರನ ಮೇಲೆ ಯಾದವ ಸಮುದಾಯದ ನಾಲ್ವರು ಹಲ್ಲೆ ಮಾಡಿದ್ದು, ಕೆಳ ಜಾತಿಯವನಾದ ನೀನು ಈ ರೀತಿಯಾಗಿ ನಡೆದುಕೊಳ್ಳುವಂತಿಲ್ಲ ಎಂದು ವಾರ್ನ್ ಮಾಡದ್ದಾರೆ ಎಂದು ಪೊಲೀಸ್ ಅಧಿಕಾರಿ ದೀಪಕ್ ಯಾದವ್ ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವರನ ಕುಟುಂಬಸ್ಥರು ದೂರು ದಾಖಲು ಮಾಡಿದ್ದು, ಹಲ್ಲೆ ನಡೆಸಿರುವ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.