ನವದೆಹಲಿ: ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಗೃಹ ಬಳಕೆಯ ಸಬ್ಸಿಡಿ ಸಹಿತ ಹಾಗೂ ಸಬ್ಸಿಡಿ ರಹಿತ ಅಡುಗೆ ಅನಿಲದಲ್ಲಿ ದರ ಏರಿಕೆ ಆಗಲಿದ್ದು, ಪರಿಷ್ಕೃತ ಬೆಲೆಯು ಜೂನ್ 1ರಿಂದಲೇ ಜಾರಿಗೆ ಬರುತ್ತಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ಮೂಲಕ ವಿತರಿಸುವ 14.2 ಕೆ.ಜಿ. ಸಿಲಿಂಡರ್ ಮೇಲೆ ₹ 1.23 ಏರಿಕೆಯಾಗಿ ಸದ್ಯ ₹ 497.37ಕ್ಕೆ ಫಲಾನುಭವಿಗಳಿಗೆ ದೊರೆಯಲಿದೆ. ಸಬ್ಸಿಡಿ ರಹಿತ ಸಿಲಿಂಡರ್ ಮೇಲೆ ₹ 25 ಏರಿಕೆಯಾಗಿ ಈ ಹಿಂದೆ ₹ 712.50 ಇದ್ದದ್ದು ₹ 737.50ಕ್ಕೆ ಸಿಗಲಿದೆ.
ಸಬ್ಸಿಡಿ ಸಹಿತ 14.2 ಕೆ.ಜಿ. ಅಡುಗೆ ಅನಿಲವು ಕೋಲ್ಕತ್ತಾ- ₹ 500.52, ಮುಂಬೈ- ₹ 495.09 ಮತ್ತು ಚೆನ್ನೈ- ₹ 485.25 ಮಟ್ಟದಲ್ಲಿ ಮಾರಾಟ ಆಗುತ್ತಿದೆ.
ಸಬ್ಸಿಡಿ ರಹಿತ 14.2 ಕೆ.ಜಿ. ಅಡುಗೆ ಅನಿಲವು ಕೋಲ್ಕತ್ತಾ- ₹ 738.50, ಮುಂಬೈ- ₹ 684.50 ಮತ್ತು ಚೆನ್ನೈ- ₹ 728.00 ದರದಲ್ಲಿ ಸಿಗುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 14.2ಕೆ.ಜಿ.ಯ ಸಬ್ಸಿಡಿ ರಹಿತ ಸಿಲಿಂಡರ್ ಈ ಹಿಂದೆ ₹ 714.00ನಲ್ಲಿ ಲಭ್ಯವಾಗುತ್ತಿತ್ತು. ಜೂನ್ 1ರ ಬಳಿಕ ₹ 739.00ರಲ್ಲಿ ಮಾರಾಟ ಆಗಲಿದೆ.