ಗುರುದಾಸ್‌ಪುರ: ಮದುವೆಯಾಗಲು ಯುವತಿ ನಿರಾಕರಿಸಿದ್ದಕ್ಕೆ ಯುವಕನೊಬ್ಬ ಆಕೆಯ ಮೇಲೆ ಆಸಿಡ್ ದಾಳಿ ಮಾಡಿ ಅಮಾನವೀಯ ವರ್ತನೆ ತೋರಿರುವ ಘಟನೆ ಟಿಬ್ರಾ ಗ್ರಾಮದಲ್ಲಿ ಜರುಗಿದೆ.
ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಗುರುದಾಸ್‌ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ನಡೆದು ಹತ್ತು ದಿನಗಳು ಕಳೆದರೂ ಪೊಲೀಸರು ಈವರೆಗೂ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಈ ಯುವತಿಗೆ ಮಾತ್ರವಲ್ಲದೇ ಈಕೆಯ ಪೋಷಕರ ಮೇಲೂ ಯುವಕ ಹಲ್ಲೆ ಮಾಡಿದ್ದಾನೆ. ಯುವತಿಯ ತಂದೆಯ ಕಾಲು ಮುರಿದಿದ್ದು, ಆಸಿಡ್ ದಾಳಿ ಪರಿಣಾಮ ಯುವತಿಯ ಕಾಲು ಮತ್ತು ತೋಳುಗಳಿಗೆ ಗಾಯಗಳಾಗಿವೆ.
ಕುಟುಂಬದ ಪ್ರಕಾರ, ಬಾಲಕನ ಸಂಬಂಧಿಯೊಬ್ಬ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆ 10 ದಿನ ಕಳೆದರೂ ಆರೋಪಿಗಳ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಆರೋಪಿಸಿದ್ದಾರೆ.