ETV Bharat / bharat

ಯೋಗಿ ಸರ್ಕಾರದಿಂದ ಲವ್ ಜಿಹಾದ್ ವಿರುದ್ಧ 'ವಿಧಿ ವಿರುಧ್ ಧರ್ಮಾಂತರನ್' ಸುಗ್ರೀವಾಜ್ಞೆ

yogi adityanath
ಯೋಗಿ ಆದಿತ್ಯನಾಥ್
author img

By

Published : Nov 24, 2020, 6:43 PM IST

Updated : Nov 24, 2020, 8:27 PM IST

18:38 November 24

ಲವ್ ಜಿಹಾದ್ ವಿರುದ್ಧ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿದ ಉತ್ತರ ಪ್ರದೇಶ ಕ್ಯಾಬಿನೆಟ್​

ಲಖನೌ (ಉತ್ತರ ಪ್ರದೇಶ): ಬಲವಂತದ ಮತಾಂತರದ ವಿರುದ್ಧ ಕ್ರಮ ಕೈಗೊಂಡಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಕ್ಯಾಬಿನೆಟ್​​ ಸುಗ್ರೀವಾಜ್ಞೆಯೊಂದಕ್ಕೆ ಅಂಕಿತ ಹಾಕಿದೆ.

'ವಿಧಿ ವಿರುಧ್ ಧರ್ಮಾಂತರನ್-2020' ಎಂಬ ಹೆಸರಿನಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಲಾಗಿದ್ದು, ಲವ್ ಜಿಹಾದ್ ಅನ್ನು ಕಾನೂನು ಬಾಹಿರ ಮತಾಂತರ ಎಂದು ಈ ಸುಗ್ರೀವಾಜ್ಞೆಯಲ್ಲಿ ಘೋಷಿಸಲಾಗಿದೆ.

ಈ ಸುಗ್ರೀವಾಜ್ಞೆ ಪ್ರಕಾರ ಬಲವಂತದ ಮತದಾನ ಹಾಗೂ ಲವ್ ಜಿಹಾದ್​, ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡವರಿಗೆ ಸುಮಾರು 5ರಿಂದ 10 ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದಾಗಿದೆ.

ಇದರ ಜೊತೆಗೆ ಬೇರೆ ಧರ್ಮದವರೊಂದಿಗೆ ವಿವಾಹವಾಗಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ವಿವಾಹಕ್ಕೆ ಮೊದಲು 2 ತಿಂಗಳ ಪೂರ್ವಾನುಮತಿ ಪಡೆಯಬೇಕಾಗುತ್ತದೆ ಹಾಗೂ ಜಿಲ್ಲಾಧಿಕಾರಿಯ ಅನುಮತಿ ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂಬ ನಿಯಮವಿದೆ.

Last Updated : Nov 24, 2020, 8:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.