ETV Bharat / bharat

ಕೇಂದ್ರ ಲಾಕ್​ಡೌನ್​ ತೆರವು ಮಾಡುತ್ತಾ ..? : ದಿಗ್ಬಂಧನವೋ..? ನಿರ್ಬಂಧವೋ..?

ಲಾಕ್​​ಡೌನ್​ ಇರಬೇಕೋ..? ತೆರವಾಗಬೇಕೋ? ಎಂಬ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಬಹುಪಾಲು ರಾಜ್ಯಗಳು ಈಗಾಗಲೇ ಲಾಕ್​ಡೌನ್​ ಅನ್ನು ತೆರವು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ಧಾರ ಏನಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.

lockdown
ಲಾಕ್​ಡೌನ್​
author img

By

Published : Apr 7, 2020, 5:13 PM IST

ನವದೆಹಲಿ: ಏಪ್ರಿಲ್​ 14ರವರೆಗೆ ಇರುವ ಲಾಕ್​ಡೌನ್​ ಅನ್ನು ಮತ್ತಷ್ಟು ದಿನಗಳ ಕಾಲ ಮುಂದೂಡಿಕೆ ಮಾಡಬೇಕೆಂದು ಬಹುಪಾಲು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ. ಲಾಕ್​ಡೌನ್​ ವಿಸ್ತರಣೆಯಾದರೆ ಮಾತ್ರ ಕೊರೊನಾ ಹರಡೋದನ್ನು ತಡೆಯಬಹುದೆಂದು ಅಭಿಪ್ರಾಯಪಟ್ಟಿವೆ.

ರಾಜ್ಯಗಳ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಲಾಕ್​​​​ಡೌನ್​ ವಿಸ್ತರಣೆ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ವಿಶ್ವದ ಅತಿ ದೊಡ್ಡ ಲಾಕ್​ಡೌನ್​ ಮತ್ತೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಿನ್ನೆಯಷ್ಟೇ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್​ ''ಏಪ್ರಿಲ್​ 15ಕ್ಕೆ ಲಾಕ್​​ಡೌನ್​ ಅಂತ್ಯಗೊಳಿಸದೇ ಇನ್ನೂ ಕೆಲವು ಕಾಲ ಮುಂದುವರೆಸಬೇಕು. ಏಕೆಂದರೆ ನಾವು ಆರ್ಥಿಕ ಸಂಕಷ್ಟದಿಂದ ಹೊರಬರಬಹುದು. ಆದರೆ, ಹೋದ ಪ್ರಾಣಗಳು ಮತ್ತೆ ವಾಪಸ್​ ಬರೋದಿಲ್ಲ. ಹೀಗಾಗಿ ನಾನು ಜೂನ್​ 3ರವರೆಗೆ ಲಾಕ್​ ಡೌನ್​ ಮುಂದುವರೆಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ'' ಎಂದಿದ್ದರು.

ಇಂದು ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಕೂಡಾ ಲಾಕ್​ಡೌನ್​ ಅನ್ನು ಏಕಾಏಕಿ ಹಿಂದೆಗೆದುಕೊಳ್ಳಲು ಸಾಧ್ಯವಿಲ್ಲ. ಹಂತಹಂತವಾಗಿ ಲಾಕ್​ಡೌನ್​ ಹಿಂತೆಗೆದುಕೊಳ್ಳಬೇಕೆಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.

ಅಸ್ಸೋಂ ಹಾಗೂ ಛತ್ತೀಸ್​ಗಢದ ನಾಯಕರೂ ಕೂಡಾ ರಾಜ್ಯಗಳ ಗಡಿರಸ್ತೆಗಳನ್ನು ಮುಚ್ಚುವುದಾಗಿ ಹೇಳಿಕೆ ನೀಡಿದ್ದರು. ಅಸ್ಸಾಂ ಆರೋಗ್ಯ ಸಚಿವ ಹಿಮವಂತ ಬಿಸ್ವಾ ಶರ್ಮಾ ಲಾಕ್​ ಡೌನ್​ ತೆರವು ಮಾಡಿದ್ರೆ ಅಸ್ಸೋಂಗೆ ಬರುವವರನ್ನು ನಿಯಂತ್ರಿಸಬೇಕು ಎಂದು ಸೂಚನೆ ನೀಡಿದ್ದರು.

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವ ಕಾರಣದಿಂದ ಲಾಕ್​ಡೌನ್​ ಮುಂದುವರೆಯುವ ಸಾಧ್ಯತೆ ಇದೆ. ಲಾಕ್​ಡೌನ್​ ಅನ್ನು ಬಿಗಿಗೊಳಿಸುವ ಸಲುವಾಗಿ ಈಗಾಗಲೇ ಎಲ್ಲಾ ಜಿಲ್ಲೆಗಳನ್ನು ಡ್ರೋನ್​ಗಳನ್ನು ಬಳಸಲು ಸರ್ಕಾರ ಆದೇಶ ನೀಡಿದೆ.

ಕರ್ನಾಟಕದಲ್ಲಿ ಕೂಡಾ ಲಾಕ್​ಡೌನ್​ ಅನ್ನು ಮುಂದುವರೆಸಬೇಕೆಂದು ಐದು ಮಂದಿ ಆರೋಗ್ಯ ಪರಿಣಿತರ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ. ಕನಿಷ್ಠ ಪಕ್ಷ ಶಾಲಾ-ಕಾಲೇಜುಗಳಿಗೆ ರಜೆ, ಹೋಟೆಲ್​, ರೆಸ್ಟೋರೆಂಟ್​ಗಳನ್ನು ಬಂದ್ ಮಾಡಬೇಕು ಹಾಗೂ ಕೊರೊನಾ ಹಾಟ್​ಸ್ಪಾಟ್​​​ಗಳನ್ನು ಗುರ್ತಿಸಿ ಅವುಗಳಲ್ಲಿ ಕಠಿಣ ಲಾಕ್​ಡೌನ್ ಜಾರಿಗೊಳಿಸಬೇಕೆಂದು ಮನವಿ ಮಾಡಿದೆ.

ಇದರ ಹೊರತಾಗಿ ಪ್ರಧಾನಿ ಮೋದಿ ನಿನ್ನೆಯ ಕ್ಯಾಬಿನೆಟ್ ​ಸಭೆಯಲ್ಲಿ ಕೇಂದ್ರ ಸಚಿವರಿಗೆ ತಮ್ಮ ತಮ್ಮ ರಾಜ್ಯಗಳ ಕಡೆ ಗಮನ ಹರಿಸಲು ಹಾಗೂ ಜಿಲ್ಲಾಡಳಿತಗಳೊಂದಿಗೆ ನಿರಂತರ ಸಂಪರ್ಕಕ್ಕೆ ಸೂಚಿಸಿದ್ದಾರೆ. ಕಡಿಮೆ ಹಾಗೂ ಹೆಚ್ಚು ಅಪಾಯಕಾರಿಯಾದ ಪ್ರದೇಶಗಳನ್ನು ಗುರ್ತಿಸುವಂತೆ ಕೇಳಿಕೊಂಡಿದ್ದಾರೆ. ಇದೆಲ್ಲರ ಮೂಲಕ ಲಾಕ್​ಡೌನ್​ ಮತ್ತೆ ವಿಸ್ತರಣೆಯಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.

ಇನ್ನೊಂದು ಆಯಾಮದಲ್ಲಿ ದೇಶಾದ್ಯಂತ ಕೊರೊನಾ ರೆಡ್​ ಝೋನ್​ಗಳನ್ನು ಗುರ್ತಿಸಿ ಅವುಗಳ ಮೇಲೆ ನಿಗಾ ಇರಿಸಿ, ಲಾಕ್​ಡೌನ್​ ಅನ್ನು ತೆರವುಗೊಳಿಸದೇ ಕೆಲವು ನಿಯಮಗಳನ್ನು ಸಡಿಲಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.