ETV Bharat / bharat

ಕಿಸಾನ್​ ಸಮ್ಮಾನ್​ನಲ್ಲಿ ಗೂಗಲ್​ ಟ್ರಾನ್ಸ್​ಲೇಶನ್​ ತರಲೆ... ಬೆಸ್ಟ್​ ಆದ ಉತ್ತಮ್​, ಲಾರ್ಡ್​ ಆದ ಭಗವಾನ್​ - ಗೂಗಲ್​​ ಟ್ರಾನ್ಸ್​​ಲೇಶನ್ ನಿಂದ ರೈತರಿಗೆ ತೊಂದರೆ ಸುದ್ದಿ

ಗೂಗಲ್​​​ ಟ್ರಾನ್ಸ್​​ಲೇಶನ್​​ ಎಡವಟ್ಟಿನಿಂದಾಗಿ ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​​ ಯೋಜನೆಯಲ್ಲಿ ಹೆಸರು ಬದಲಾಗಿ ಮಹಾರಾಷ್ಟ್ರದ ರೈತರು ತೊಂದರೆ ಅನುಭವಿಸುವಂತಾಗಿದೆ.

farmer
ಫಜೀತಿಗೆ ಸಿಲುಕಿದ ರೈತರು
author img

By

Published : Jan 13, 2020, 11:49 PM IST

ಮಹಾರಾಷ್ಟ್ರ/ಸಾಂಘ್ವಿ: ಗೂಗಲ್​​​ ಟ್ರಾನ್ಸ್​​ಲೇಶನ್​​ ಯಡವಟ್ಟಿನಿಂದಾಗಿ ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​​ ಯೋಜನೆಯಡಿ ಸರ್ಕಾರದಿಂದ ಹಣ ಪಡೆಯಬೇಕಿದ್ದ ರೈತರು ಫಜೀತಿಗೆ ಸಿಲುಕುವಂತಾಗಿದೆ.

ಹೌದು ಮಹಾರಾಷ್ಟ್ರದ ಸಾಂಘ್ವಿ ಜಿಲ್ಲೆಯ ಕೆಲವು ರೈತರು ತಮ್ಮ ಹೆಸರನ್ನ ಕಿಸಾನ್​ ಪಿಎಂ ಯೋಜನೆಗೆ ಸೇರಿಸುವ ಸಮಯದಲ್ಲಿ ಮರಾಠಿಯಿಂದ ಇಂಗ್ಲಿಷ್​​ ಭಾಷೆಗೆ ಭಾಷಾಂತರಗೊಂಡ ಪರಿಣಾಮ, ಉತ್ತಮ್​​ ಎಂಬುವರ ಹೆಸರು 'ಬೆಸ್ಟ್'​​ ಎಂದಾಗಿದೆ. ಅದೇ ರೀತಿ ಸುತಾರ್​ ಎಂಬುವವರ ಹೆಸರು 'ಕಾರ್ಪೆಂಟರ್​' ಎಂದಾಗಿದೆ. ಅಷ್ಟೇ ಅಲ್ಲ ಭಗವಾನ್​ ಎಂಬ ಮತ್ತೊಬ್ಬ ರೈತನ ಹೆಸರು 'ಲಾರ್ಡ್'​​ ಎಂದಾಗಿದ್ದು, ಇದ್ರಿಂದ ಫಲಾನುಭವಿಗಳ ಖಾತೆಗೆ ಕೃಷಿ ಹಣ ಜಮೆಯಾಗಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ ಯೋಜನೆಯ ಪ್ರಥಮ ಹಂತದಲ್ಲಿ ಹೆಸರು ನೋಂದಣಿ ವೇಳೆ ಈ ಪ್ರಮಾದ ಜರುಗಿದ್ದು, ಗೂಗಲ್​ ಅನುವಾದದಿಂದ ಈ ರೀತಿ ಹೆಸರುಗಳು ತಪ್ಪಾಗಿ ನಮೂದಾಗಿವೆ. ಯೋಜನೆಯ ಅರ್ಹ ಫಲಾನುಭವಿ ರೈತರ ಹೆಸರಿನ ಪಟ್ಟಿಯನ್ನು ಮರಾಠಿ ಭಾಷೆಯಲ್ಲಿ ತಯಾರಿಸಿ ಗ್ರಾಮಸೇವಕರು ಕಂದಾಯ ಇಲಾಖೆಗೆ ನೀಡಿದ್ದಾರೆ. ಈ ವೇಳೆ ಅಲ್ಲಿನ ಅಧಿಕಾರಿಗಳು ರೈತರ ಹೆಸರುಗಳ ಉದ್ದುದ್ದ ಇರುವ ಕಾರಣ ಗೂಗಲ್​​ ಟ್ರಾನ್ಸ್​​ಲೇಟರ್​​ ಮೊರೆ ಹೋಗಿದ್ದು, ಇದರಿಂದ ಈ ರೀತಿ ಹೆಸರುಗಳು ತಪ್ಪಾಗಿ ನಮೂದಾಗಿವೆ ಎಂದು ಸಾಂಘ್ವಿ ಜಿಲ್ಲೆಯ ಪಿಎಂ ಕಿಸಾನ್​​ ಯೋಜನೆಯ ಸಂಯೋಜಕರಾದ ಯಾಸಿನ್​​ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಇದು ಸಂಪೂರ್ಣವಾಗಿ ಡಾಟಾ ಎಂಟ್ರಿಯಿಂದ ಉಂಟಾದ ಸಮಸ್ಯೆ ಇದನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ಉಳಿದ ರೈತರಿಗೆ ಬ್ಯಾಂಕ್​​ ಖಾತೆ ಸಂಖ್ಯೆ ಮತ್ತು ಆಧಾರ್ ವಿವರಗಳನ್ನು ಬಳಸಿಕೊಂಡು ಹಣ ಜಮಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಉತ್ತಮ್​ ನನ್ನ ಹೆಸರು ಬೆಸ್ಟ್​ ಎಂದಾಗಿತ್ತು. ಹೀಗಾಗಿ ನನಗೆ ಹಣ ಪಡೆಯಲು ಸಾಧ್ಯವಾಗಿರಲಿಲ್ಲ, ಇನ್ನು ಈ ಘಟನೆ ಬೆಳಕಿಗೆ ಬಂದ ನಂತರ ಹೆಸರು ಸರಿಪಡಿಸಲಾಗಿದ್ದು, ನನ್ನ ಖಾತೆಗೆ ಹಣ ಜಮಾವಣೆಯಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಗೂಗಲ್​​ ಅನುವಾದದ ಎಡವಟ್ಟಿನಿಂದ ನಾಲ್ಕೈದು ಫಲಾನುಭವಿ ರೈತರು ಈ ರೀತಿ ಫಜೀತಿ ಪಡುವಂತಾಗಿದ್ದು, ತಾಂತ್ರಿಕತೆಯ ಪರಿಣಾಮ ಅನ್ನದಾತನನ್ನು ಕೂಡ ಸಂಕಷ್ಟಕ್ಕೆ ದೂಡಿದೆ.

ಇನ್ನು ಈ ಪಿಎಂ ಕಿಸಾನ್​​ ಯೋಜನೆಯನ್ನು ಸಣ್ಣ ರೈತರ ಅನುಕೂಲಕ್ಕಾಗಿ ಜಾರಿಗೊಳಿಸಲಾಗಿದ್ದು, ಈ ಯೋಜನೆಯಡಿ ವರ್ಷಕ್ಕೆ 6 ಸಾವಿರ ರೂಪಾಯಿಗಳನ್ನು, 2000 ರೂ ನಂತೆ 3 ಕಂತುಗಳಲ್ಲಿ ಅರ್ಹ ಫಲಾನುಭವಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.

ZCZC
URG GEN NAT
.PUNE BOM15
MH-FARMERS-TRANSLATION
Lost in translation: Maha farmers bear brunt of tech trouble
         Pune, Jan 13 (PTI) Several farmers in Sangli district
of western Maharashtra had to face hardships after their names
got translated into English while enrolling for the Pradhan
Mantri Kisan Samman Nidhi Yojana, commonly known as the PM-
Kisan Yojana.
         A farmer whose name is Uttam, appeared in the online
form as 'Best', the surname Sutar got turned into 'Carpenter',
Bhagwan was translated as 'Lord', and a farmer with Mali as
surname was included as 'Gardener'.
         The goof-ups came to light after the administration
uploaded the list of the scheme beneficiaries. Under this
scheme, farmers are given Rs 6,000 per year in 3 installments
of Rs 2,000 each. The purpose of the scheme is to provide
financial support to small and marginal farmers.
         The erroneous translation took place at the ground
level during the enrollment of farmers for the scheme, a
district administration official said.
         "Last year, ground level officials like talathis and
gram sevaks were tasked with enrolling names of farmers for
the scheme. They were given a list of farmers from the revenue
department's website which was in Marathi.
         "As the number of farmers was large, the ground staff
and operators used the Google translation tool, got it (list)
translated into Marathi and sent it for further processing,"
said Yasin Patel, the scheme co-ordinator in Sangli district.
         Google's free service instantly translates words,
phrases, and web pages between English and over 100 other
languages.
         The input language for the PM-Kisan portal is English,
he said. The scheme benefits were given using account numbers
and Aadhar details and many farmers got money in their
accounts, he added.
         "This (auto translation) was purely a data entry issue
and it is being rectified," he said.
         A farmer beneficiary whose name is Uttam Maruti Talap
said he has received his installments but his name in the list
of the beneficiaries was translated as 'Best'.
         "I have received three installments and the fourth one
did not come due to the change in the name. We have now
rectified the name in the system," he said.
         Popat Sutar, another farmer from Bawachi village
narrated a similar tale. He said that last year, he received
his installments on time. "This time, as there was a mistake
in my surname, I have not received my installment," he said.
         There are four to five farmers whose surnames are
Sutar and all of them have suffered due to this goof-up, he
said. PTI COR/SPK
VT
VT
01131940
NNNN

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.