ನವದೆಹಲಿ: ಲೋಕಪಾಲ್ ಸದಸ್ಯ ಅಜಯ್ ಕುಮಾರ್ ತ್ರಿಪಾಠಿಯವರ ಕೊರೊನಾ ಪರೀಕ್ಷೆ ಪಾಸಿಟಿವ್ ಬಂದಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಛತ್ತೀಸ್ಗಢ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ತ್ರಿಪಾಠಿ (62) ಅವರು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಜೈ ಪ್ರಕಾಶ್ ನಾರಾಯಣ್ ಅಪೆಕ್ಸ್ ಅಪಘಾತದ ಕೇಂದ್ರದ ತೀವ್ರ ನಿಗಾ ಘಟಕದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಅವರನ್ನು ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ಪರೀಕ್ಷೆಯ ನಂತರ ಅವರನ್ನು ಅಪಘಾತ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಈ ಅಪಘಾತ ಕೇಂದ್ರದಲ್ಲಿ ಹೆಚ್ಚಾಗಿ ರಸ್ತೆ ಅಪಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಇದನ್ನು COVID-19 ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ.