ಕೋಲ್ಕತಾ : ಲಾಕ್ಡೌನ್ನಲ್ಲಿ ಜನ ಮನರಂಜನೆಗಾಗಿ ಹಾಗೂ ಸಮಯ ಕಳೆಯಲು ಹೊಸ ಹೊಸ ವಿಧಾನಗಳನ್ನು ಕಂಡು ಹಿಡಿಯುತ್ತಿದ್ದಾರೆ. ಮಕ್ಕಳಿಗಾಗಿ ಆನ್ಲೈನ್ ಮೂಲಕವೇ ಭಾಷಣ, ಚಿತ್ರಕಲೆ, ಕವಿತೆ ಬರೆಯುವುದು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುತ್ತಿರುವುದು ಹೊಸ ಲಾಕ್ಡೌನ್ ಟ್ರೆಂಡ್ ಆಗಿದೆ.
ಕೋಲ್ಕತಾದ ನ್ಯೂಟೌನ್ ಕೋಲ್ಕತಾ ಅಭಿವೃದ್ಧಿ ಪ್ರಾಧಿಕಾರ ಮಕ್ಕಳಿಗಾಗಿ ಆನ್ಲೈನ್ ಡ್ರಾಯಿಂಗ್, ಮ್ಯೂಸಿಕ್, ಕವನ ಬರಹ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಿದೆ. 4 ರಿಂದ 17 ವರ್ಷದ ಮಕ್ಕಳು ಭಾಗವಹಿಸಬಹುದಾಗಿದೆ. ಕೆಎನ್ಡಿಎ ವೆಬ್ಸೈಟ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದೆಂದು ಪ್ರಾಧಿಕಾರ ತಿಳಿಸಿದೆ. ಹೆಸರು ನೋಂದಾಯಿಸಿಕೊಂಡ ನಂತರ ದಿನಾಂಕವೊಂದನ್ನು ತಿಳಿಸಿ ಅಂದು ಲಿಂಕ್ ಮೂಲಕ ಸ್ಪರ್ಧಿಗಳು ತಮ್ಮ ಭಾಷಣ ಅಥವಾ ಕವನವನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
ಇದೇ ಮಾದರಿಯಲ್ಲಿ ಡಂ ಡಂ ಪಾರ್ಕ್ ತರುಣ ದುರ್ಗಾ ಪೂಜಾ ಕಮೀಟಿ ಡ್ರಾಯಿಂಗ್, ಕವನ ವಾಚನ, ಹಾಡುಗಾರಿಕೆ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಿದೆ. ಕೋಲ್ಕತಾದ ದಿ ಕ್ರುಸಿಬಲ್ ಎಂಬ ಯುವಕರ ಗುಂಪು ಯೂಟ್ಯೂಬ್ ಮೂಲಕ ರಂಗಭೂಮಿ ಚಟುವಟಿಕೆಗಳನ್ನು ಪ್ರಸಾರ ಮಾಡುತ್ತಿದೆ. ಮನೆಯಲ್ಲಿದ್ದುಕೊಂಡು ಸಾಮಾಜಿಕ ಅಂತರ ಪಾಲಿಸುತ್ತಲೇ ಈ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯುತ್ತಿರುವುದು ಹೊಸ ಲಾಕ್ಡೌನ್ ಟ್ರೆಂಡ್ ಆಗಿದೆ ಎನ್ನಬಹುದು.