ETV Bharat / bharat

ಇಂಟರ್​ ನೆಟ್​ ಸಮಸ್ಯೆ: ಮರದ ಮೇಲೆ ಮನೆ ಮಾಡಿ ವಿದ್ಯಾರ್ಥಿಗಳಿಗೆ ಆನ್ ​ಲೈನ್ ಪಾಠ ಮಾಡುತ್ತಿರುವ ಶಿಕ್ಷಕ - ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ

ಹಳ್ಳಿ ಪ್ರದೇಶಗಳಲ್ಲಿ ಇಂಟರ್​ ನೆಟ್​ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ, ಈ ಸಮಸ್ಯೆಯನ್ನು ಪರಿಹರಿಸಲು ಪಶ್ಚಿಮ ಬಂಗಾಳದ ಶಿಕ್ಷಕನೋರ್ವ ವಿನೂತನ ಐಡಿಯಾ ಮಾಡಿದ್ದು, ಮರದ ಮೇಲೆ ಮನೆ ಮಾಡಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ ಮಾಡುತ್ತಿದ್ದಾರೆ.

lockdown-effect-bengal-teacher-makes-tent-on-tree-to-take-online-classes

author img

By

Published : Apr 21, 2020, 12:44 PM IST

ಕೊಲ್ಕತ್ತಾ (ಪಶ್ಚಿಮ ಬಂಗಾಳ) : ಇಂಟರ್ ನೆಟ್​​ ಸಮಸ್ಯೆಯನ್ನು ಪರಿಹರಿಸಲು ಶಿಕ್ಷಕನೊಬ್ಬ ಮನೆಯ ಪಕ್ಕದ ಬೇವಿನ ಮರದ ಮೇಲೆ ಬಿದಿರಿನ ಮನೆ ಮಾಡಿ ತನ್ನ ವಿದ್ಯಾರ್ಥಿಗಳಿಗೆ ಆನ್​ಲೈನ್ ಪಾಠ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಅಡಮಾಸ್​ ಮತ್ತು ರೈಸ್​ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕನಾಗಿರುವ ಪಾಟಿ ಈ ವಿನೂತನ ಪ್ರಯತ್ನ ಮಾಡಿದ ಶಿಕ್ಷಕ. ಕೊಲ್ಕತ್ತಾ ನಗರದಲ್ಲಿ ವಾಸವಾಗಿದ್ದ ಶಿಕ್ಷ ಪಾಟಿ, ಲಾಕ್ ಡೌನ್​ ಹಿನ್ನೆಲೆ ತನ್ನ ಸ್ವಂತ ಊರಾದ ಬಂಕಾಪುರ ಜಿಲ್ಲೆಯ ಜಂಗಲ್ ಮಲಾಲ್ ಗ್ರಾಮಕ್ಕೆ ತೆರಳಿದ್ದ. ಇತಿಹಾಸ ಶಿಕ್ಷಕನಾಗಿರುವ ಈತನಿಗೆ, ಮನೆಯಲ್ಲೇ ಕೂತು ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ ಮಾಡಬೇಕಾದ ಅನಿವಾರ್ಯತೆ ಇತ್ತು. ಆದರೆ, ಹಳ್ಳಿಯಲ್ಲಿ ಇಂಟರ್​ ನೆಟ್​ ಸಮಸ್ಯೆ ಕಾಡುತ್ತಿತ್ತು. ಹೀಗಾಗಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಿಕ್ಷಕ ಈ ವಿನೂತನ ಐಡಿಯಾ ಮಾಡಿದ್ದಾರೆ.

ಆಹಾರ ಮತ್ತು ನೀರಿನೊಂದಿಗೆ ಮರ ಹತ್ತುವ ಶಿಕ್ಷಕ ಪಾಟಿ, ಅಲ್ಲೇ ಕೂತು ವಿದ್ಯಾರ್ಥಿಗಳಿಗೆ ಎರಡರಿಂದ ಮೂರು ತರಗತಿಗಳನ್ನು ನಡೆಸುತ್ತಾರೆ. ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಅವರು, ಕೆಲವೊಮ್ಮೆ ಬಿರುಗಾಳಿಗೆ ಮನೆ ಹಾನಿಗೊಳಗಾಗುತ್ತದೆ. ಆದರೆ, ನಾನದನ್ನು ಮತ್ತೆ ಸರಿಪಡಿಸುತ್ತೇನೆ. ಯಾವುದೇ ರೀತಿಯಲ್ಲೂ ನನ್ನ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗಬಾರದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.