ಬಾಲಸೋರ್ (ಒಡಿಶಾ): ಕಾರ್ತಿಕ ಪೂರ್ಣಿಮೆ ಹಿನ್ನೆಲೆ ಬಾಲಸೋರ್ನಲ್ಲಿ ಸ್ಥಳೀಯರು 150 ಅಡಿ ಉದ್ದದ ದೋಣಿಯಲ್ಲಿ ಪ್ರಯಾಣಿಸಿ ಪೂಜೆ ಸಲ್ಲಿಸಿದರು.
ಕೋವಿಡ್ ಹಿನ್ನೆಲೆ ಒಡಿಶಾ ಸರ್ಕಾರ ನದಿಗಳ ಬಳಿ ತೆರಳದಂತೆ ಆದೇಶ ಹೊರಡಿಸಿ, ಪೊಲೀಸರನ್ನು ನಿಯೋಜಿಸಿತ್ತು. ಈ ಮಧ್ಯೆಯೂ ಜನರು, ಸಾಂಪ್ರದಾಯಿಕ ಪೂಜೆ ನೆರವೇರಿಸಿದ್ದಾರೆ. ಬಿಂದು ಸಾಗರ್ ಸರೋವರದ ಬಳಿ ಜನರು ದೋಣಿಗಳಲ್ಲಿ ಸಾಗದಂತೆ ಪೊಲೀಸರು ತಡೆದರು.
ಪುರಿಯಲ್ಲಿ ಭಗವಾನ್ ಜಗನ್ನಾಥ್ ಮತ್ತು ರಾಜರಾಜೇಶ್ವರಿ ದೇಗುಲದಲ್ಲಿ ಜನತೆ ಸಾಗರೋಪಾದಿಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.