ವರಂಗಲ್: ಇಲ್ಲಿನ ಎಸ್ಆರ್ಎಸ್ಪಿ ಕೆನಾಲ್ನಲ್ಲಿ ಕಾರೊಂದು ಕೊಚ್ಚಿ ಹೋಗಿರುವ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಸಂಭವಿಸಿದೆ.
ನಡೆದಿದ್ದೇನು?
ವರಂಗಲ್ನಿಂದ ತೋರ್ರೂರ್ ಗ್ರಾಮಕ್ಕೆ ಮೂವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಕ್ರಮದಲ್ಲಿ ಸಂಗಂ ತಾಲೂಕಿನ ತಿಗರಾಜು ಪಲ್ಲಿ ಗ್ರಾಮದ ಬಳಿ ಸರ್ಕಾರಿ ಶಾಲೆಯ ಶಿಕ್ಷಕಿ ಸರಸ್ವತಿ ಲಿಫ್ಟ್ ಕೇಳಿ ಕಾರಿನಲ್ಲಿ ಹತ್ತಿದ್ದಾರೆ.
ಪರ್ವತಗಿರಿ ತಾಲೂಕಿನ ಕೊಂಕಪಾಕ ಬಳಿ ಪ್ರಯಾಣಿಸುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಕೆನಾಲ್ಗೆ ಉರುಳಿ ಬಿದ್ದಿದೆ. ತುಂಬಿ ಹರಿಯುತ್ತಿದ್ದ ಕೆನಾಲ್ನಲ್ಲಿ ಕಾರು ಕೊಚ್ಚಿಕೊಂಡು ಹೋಗಿದೆ. ಈ ವೇಳೆ ಕಾರಿನಲ್ಲಿದ್ದ ಶಿಕ್ಷಕಿ ಸರಸ್ವತಿ, ಶ್ರೀಧರ್ ಮತ್ತು ಚಾಲಕ ರಾಕೇಶ್ ಕಾರಿನಲ್ಲೇ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಆದ್ರೆ ವಿಜಯ ಭಾಸ್ಕರ್ನನ್ನು ಸ್ಥಳೀಯರು ಕಾಪಾಡುವಲ್ಲಿ ಯಶಸ್ಸಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹಗಳನ್ನು ಕೆನಾಲ್ನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.
ಘಟನೆಗೆ ತಕ್ಷಣ ಸ್ಪಂದಿಸಿದ ಪಂಚಾಯತಿ ರಾಜ್ ಸಚಿವ ಎರ್ರಾಬೆಲ್ಲಿ ದಯಾಕರ್ ರಾವ್ ಸ್ಥಳಕ್ಕೆ ಭೇಟಿ ನೀಡಿ ಪ್ರಯಾಣಿಕರ ಸಾವಿನ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ಸರ್ಕಾರ ಅವರಿಗೆ ಬೆಂಬಲ ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.