ಮಲಪ್ಪುರಂ (ಕೇರಳ) : ಕೊರೊನಾ ಹಿನ್ನೆಲೆ ಎಲ್ಲಾ ಶಾಲಾ-ಕಾಲೇಜುಗಳಿಗೆ ಬೀಗ ಹಾಕಲಾಗಿವೆ. ಈ ವೇಳೆ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಮಾಡಲಾಗುತ್ತಿದೆ. ಕೇರಳದಲ್ಲಿ ಈ ಪುಟ್ಟ ಟೀಚರ್ ಪಾಠ ಮಾತ್ರ ಸಖತ್ ವೈರಲ್ ಆಗಿದೆ.
ಮಲಪ್ಪುರಂನ ನುಸ್ರತ್ ಮತ್ತು ತಾಹಿರ್ ದಂಪತಿಯ ಪುತ್ರಿ 6 ವರ್ಷದ ದಿಯಾ ಫಾತಿಮಾ ಎಂಬ ಪುಟ್ಟ ಬಾಲಕಿಯ ಪಾಠದ ಪರಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ತಾಯಿ ನಿತ್ಯ ಆನ್‌ಲೈನ್‌ನಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಅವರು ಅನಾರೋಗ್ಯಕ್ಕೆ ಒಳಗಾದಾಗ ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳಿಗೆ ಅವರ ಪುತ್ರಿ ದಿಯಾ ಪಾಠಗಳನ್ನು ತೆಗೆದುಕೊಂಡಳು.
ದಿಯಾ ತನ್ನ ತಾಯಿ ಕೆಲಸ ನಿರ್ವಹಿಸುವ ಅಂಬಲಕ್ಕದ ಎಎಮ್‌ಎಲ್‌ಪಿ ಶಾಲೆಯಲ್ಲಿ ಪ್ರಥಮ ದರ್ಜೆ ವಿದ್ಯಾರ್ಥಿನಿಯಾಗಿದ್ದಾರೆ. ದಿಯಾ ಅವರ ಗಣಿತ ತರಗತಿಗಳು ಇತರ ಶಿಕ್ಷಕರನ್ನು ಸಹ ಆಶ್ಚರ್ಯಚಕಿತಗೊಳಿಸಿದೆ. ಮನೆಯಲ್ಲಿ ಲಭ್ಯವಿರುವ ಟೊಮೆಟೊ ಮತ್ತು ಬೀನ್ಸ್ ಬಳಸಿ ಅಂಕಿ-ಸಂಖ್ಯೆಗಳನ್ನು ಹೇಗೆ ಎಣಿಸಬೇಕು ಎಂದು ದಿಯಾ ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟಿದ್ದಾಳೆ.
ತರಬೇತಿ ಪಡೆದ ಶಿಕ್ಷಕರಂತೆ ದಿಯಾ ‘ಟೀಚರ್’ ಆನ್‌ಲೈನ್‌ನಲ್ಲಿ ತರಗತಿಗಳನ್ನು ನಿರ್ವಹಿಸಿದ ರೀತಿ ಹಲವು ಜನರನ್ನು ಚಕಿತಗೊಳಿಸಿದೆ. ಲಿಟಲ್ ದಿಯಾ ಟೀಚರ್ ದೊಟ್ಟವರಾದ ಮೇಲೆ ಶಿಕ್ಷಕರಾಗಲು ನಿರ್ಧರಿಸಿದ್ದಾರೆ.