ETV Bharat / bharat

ರೋಡ್ ರೋಲರ್ ಬಳಸಿ 72 ಲಕ್ಷ ರೂ. ಮೌಲ್ಯದ ಮದ್ಯ ನಾಶಪಡಿಸಿದ ಪೊಲೀಸರು! - ರೋಲರ್ ಬಳಸಿ ಮದ್ಯ ನಾಶಪಡಿಸಿದ ಪೊಲೀಸರು

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ತೆಲಂಗಾಣದಿಂದ ಕಳ್ಳಸಾಗಣೆ ಮಾಡುತ್ತಿದ್ದ 72 ಲಕ್ಷ ರೂ. ಮೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದು ನಾಶಪಡಿಸಿದ್ದಾರೆ.

Liquor worth Rs 72 lakh destroyed under road roller in Andhra Pradesh
ರೋಡ್ ರೋಲರ್ ಬಳಸಿ 72 ಲಕ್ಷ ರೂ.ಗಳ ಮದ್ಯ ನಾಶಪಡಿಸಿದ ಪೊಲೀಸರು
author img

By

Published : Jul 18, 2020, 6:56 AM IST

ವಿಜಯವಾಡ (ಆಂಧ್ರಪ್ರದೇಶ): ತೆಲಂಗಾಣದಿಂದ ಕಳ್ಳಸಾಗಣೆ ಮಾಡುತ್ತಿದ್ದ 72 ಲಕ್ಷ ರೂ. ಮೌಲ್ಯದ ಮದ್ಯವನ್ನು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದು ನಾಶಪಡಿಸಿದ್ದಾರೆ. ಮಚಿಲಿಪಟ್ನಂ ಪಟ್ಟಣದಲ್ಲಿ ರೋಡ್ ರೋಲರ್ ಬಳಸಿ 14,000 ಕ್ಕೂ ಹೆಚ್ಚು ಮದ್ಯದ ಬಾಟಲಿಗಳನ್ನು ದ್ವಂಸ ಮಾಡಲಾಯಿತು.

ರೋಡ್ ರೋಲರ್ ಬಳಸಿ ಮದ್ಯ ನಾಶಪಡಿಸಿದ ಪೊಲೀಸರು

ಲಾಕ್‌ಡೌನ್‌ನಲ್ಲಿ ತೆರವಿನ ಬಳಿಕ ಜಿಲ್ಲೆಯ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 3,207 ಲೀಟರ್ ಮದ್ಯದ ಬಾಟಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೆಲಂಗಾಣದ ಗಡಿಯಲ್ಲಿರುವ ಕೃಷ್ಣ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ವೇಳೆ ಈ ಮದ್ಯವನ್ನ ವಶಕ್ಕೆ ಪಡೆಯಲಾಗಿದೆ ಎಂದು ಕೃಷ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ರವೀಂದ್ರನಾಥ್ ತಿಳಿಸಿದ್ದಾರೆ.

ಮದ್ಯ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 312 ಪ್ರಕರಣಗಳು ದಾಖಲಾಗಿದ್ದು, ಎಲ್ಲ ಕಾನೂನಿನ ಪ್ರಕ್ರಿಯೆಗಳನ್ನ ಪೂರ್ಣಗೊಳಿಸಿದ ನಂತರ, ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳು ಅದನ್ನು ನಾಶಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.