ಅಮರಿಯಾ(ಉತ್ತರ ಪ್ರದೇಶ): ಇಲ್ಲಿನ ಪಿಲಿಬಿತ್ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇಲ್ಲಿನ ಜನನಿಬಿಡ ಪ್ರದೇಶದಲ್ಲಿ ಹಿರಿ ವಯಸ್ಸಿನ ಚಿರತೆ ಓಡಾಡುತ್ತಿರುವುದು ಪತ್ತೆಯಾಗಿದೆ.
ಸ್ಮಶಾನವನ್ನು ಚಿರತೆ ತನ್ನ ವಾಸ ಸ್ಥಾನವನ್ನಾಗಿಸಿಕೊಂಡಿದ್ದು, ಆಗಾಗ್ಗೆ ಕಾಣಿಸಿಕೊಳ್ಳುತ್ತಿದೆ. ಆದಷ್ಟು ಬೇಗ ಅರಣ್ಯ ಇಲಾಖೆ ಸಿಬ್ಬಂದಿಯು ಈ ಕುರಿತು ಕ್ರಮಕ್ಕೆ ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ವಿಭಾಗೀಯ ಅರಣ್ಯ ಅಧಿಕಾರಿ ಸಂಜೀವ್ ಕುಮಾರ್, ಅಮರಿಯಾ ಜಿಲ್ಲೆಯಲ್ಲಿ ಚಿರತೆಯೊಂದು ಪತ್ತೆಯಾಗಿದೆ. ಅದನ್ನು ಹಿಡಿಯುಲು ಈಗಾಗಲೇ ಟ್ರ್ಯಾಕಿಂಗ್ ನಡೆಸಲಾಗುತ್ತಿದೆ. ಈ ಚಿರತೆಯು ಪಿಲಿಬಿತ್ ಹುಲಿ ಸಂರಕ್ಷಿತಾ ಅರಣ್ಯದಿಂದ 18 ಕಿಲೋ ಮೀಟರ್ ದೂರದವರೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ ಎಂದಿದ್ದಾರೆ.
ಚಿರತೆ ಓಡಾಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ.