ETV Bharat / bharat

ಇಂದು ನೂತನ ಸಂಸತ್​ ಭವನಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ..

author img

By

Published : Dec 9, 2020, 8:09 PM IST

Updated : Dec 10, 2020, 4:17 AM IST

ಸಂಸತ್ತಿನ ನೂತನ ಕಟ್ಟಡವನ್ನು ಹೊಸದಾಗಿ ಈಗಿರುವ ಸಂಸತ್ ಭವನದ 118ನೇ ಫ್ಲಾಟ್​ನಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. 2022ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯನ್ನು ಭಾರತ ಸರ್ಕಾರ ಇಟ್ಟುಕೊಂಡಿದೆ.

Laying of Foundation Stone of New Parliament Building
ನೂತನ ಸಂಸತ್​ ಭವನಕ್ಕೆ ಶಂಕುಸ್ಥಾಪನೆ

ನವದೆಹಲಿ : ನೂತನ ಸಂಸತ್​ ಭವನಕ್ಕೆ ಪ್ರಧಾನಿ ಮೋದಿ ಡಿಸೆಂಬರ್ 10ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಪಾರ್ಲಿಮೆಂಟ್​ ಹೌಸ್ ಸಂಕೀರ್ಣದಲ್ಲಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಂದೇಶ ನೀಡಲಿದ್ದಾರೆ. ಪ್ರಧಾನಿ ಮೋದಿ ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಈ ವೇಳೆ ಭಾಷಣ ಮಾಡಲಿದ್ದಾರೆ.

971 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಸಂಸತ್​ ಭವನವನ್ನು 64,500 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಇದು ಹಳೆಯ ಸಂಸತ್ತಿನ ಕಟ್ಟಡಕ್ಕಿಂತ 17,000 ಚ. ಮೀ ದೊಡ್ಡದಾಗಿರಲಿದೆ.

ಇದನ್ನೂ ಓದಿ: ಹೀಗಿರಲಿದೆ ನೂತನ ಸಂಸತ್​ ಭವನ... ಡಿ.10ಕ್ಕೆ ಶಂಕುಸ್ಥಾಪನೆ

ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್‌ಗೆ ಸಂಸತ್ ನಿರ್ಮಾಣ ಯೋಜನೆಯ ಗುತ್ತಿಗೆ ನೀಡಲಾಗಿದೆ. ಕಟ್ಟಡದ ವಿನ್ಯಾಸವನ್ನು ಹೆಚ್​ಸಿಪಿ ಡಿಸೈನ್ಸ್​, ಪ್ಲಾನಿಂಗ್​ & ಮ್ಯಾನೇಜ್​ಮೆಂಟ್​ ರಚಿಸಿದೆ ಎಂದು ಸ್ಪೀಕರ್ ಮಾಹಿತಿ ನೀಡಿದ್ದಾರೆ.

Last Updated : Dec 10, 2020, 4:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.