ETV Bharat / bharat

ವಕೀಲನ ಮೇಲೆ ಗುಂಡಿನ ದಾಳಿ: ಭೀಕರ ಹತ್ಯೆ..!

ತಮಿಳುನಾಡಿನ ಕಂಬಂನಲ್ಲಿ ವಕೀಲನನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ಗುಂಡಿನ ಮಳೆಗೆರೆದು ಅಮಾನುಷವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

tamilnadu
ವಕೀಲ ರಂಜಿತ್
author img

By

Published : Mar 7, 2020, 8:27 AM IST

ತಮಿಳುನಾಡು: ಇಲ್ಲಿನ ಕಂಬಂನಲ್ಲಿ ವಕೀಲರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ.

ಉತ್ತಮಾ ಪಾಲ್ಯಂನ ವಕೀಲ ರಂಜಿತ್ (42) ಮೃತಪಟ್ಟವರಾಗಿದ್ದು, ರಂಜಿತ್ ನ್ಯಾಯಾಲಯದಿಂದ ಮನೆಗೆ ಬೈಕ್​ನಲ್ಲಿ ತೆರಳುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಮೊದಲು ಕಾರಿನಲ್ಲಿ ಬಂದು ವಕೀಲರ ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ಅಮಾನುಷವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆಯು ಕೊಟ್ಟಾರಕಾರ - ದಿಂಡುಂಕಲ್ ಹೆದ್ದಾರಿಯ ಕಂಬಂ ಬಳಿ ಸಂಭವಿಸಿದೆ. ಇನ್ನು ಹಲವು ಬಾರಿ ಗುಂಡು ಹಾರಿಸಿದ್ದರಿಂದ ವಕೀಲ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

tamilunadu
ಕಂಬಂನಲ್ಲಿ ವಕೀಲರ ಹತ್ಯೆ

ಫೋನ್ ಕರೆಗಳ ಮೂಲಕ ಯಾರೋ ಬೆದರಿಕೆ ಹಾಕಿದ್ದಾರೆ ಎಂದು ವಕೀಲರು ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ. ಇನ್ನು ಸ್ಥಳಕ್ಕೆ ಟೆನಿ ಎಸ್‌ಐ ಭೇಟಿ ನೀಡಿದ್ದು, ತನಿಖೆಗಾಗಿ ಸದಸ್ಯರ ತಂಡವನ್ನು ನಿಯೋಜಿಸಲಾಗಿದೆ. ಇನ್ನು ತನಿಖೆಗಾಗಿ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪೋಲಿಸರು ಪರಿಶೀಲನೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.