ETV Bharat / bharat

ಆ್ಯಂಬುಲೆನ್ಸ್​​ ಸಿಗದೆ ಮೂರು ಕಿ.ಮೀ. ದೂರ ತಾಯಿ-ಮಗಳ ಮೃತದೇಹ ಹೊತ್ತು ಸಾಗಿದ ಜನ! - ಆ್ಯಂಬುಲೆನ್ಸ್​ ಸಿಗದ ಕಾರಣ ಮೂರು ಕಿ.ಮೀ ಮೃತ ದೇಹ ಹೊತ್ತು ಸಾಗಿದ ಜನ...

ಆ್ಯಂಬುಲೆನ್ಸ್​ ಸಿಗದ ಕಾರಣ ಎರಡು ಮೃತದೇಹಗಳನ್ನು 3 ಕಿಲೋ ಮೀಟರ್​ ಹೊತ್ತೊಕೊಂಡು ನಡೆದ ಘಟನೆ ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯ ಸಿಲೋಡ್​ ತಾಲೂಕಿನ ಡರ್​ಗಾಂವ್​ ಗ್ರಾಮದಲ್ಲಿ ನಡೆದಿದೆ.

lake of Ambulance
ಮೃತ ದೇಹ ಹೊತ್ತು ಸಾಗಿದ ಜನ...
author img

By

Published : Feb 18, 2020, 7:12 PM IST

ಔರಂಗಬಾದ್​ (ಮಹಾರಾಷ್ಟ್ರ): ಆ್ಯಂಬುಲೆನ್ಸ್​ ಸಿಗದ ಕಾರಣ ಎರಡು ಮೃತದೇಹಗಳನ್ನು 3 ಕಿಲೋ ಮೀಟರ್​ ಹೊತ್ತೊಕೊಂಡು ನಡೆದ ಘಟನೆ ಸಿಲೋಡ್​ ತಾಲೂಕಿನ ಡರ್​ಗಾಂವ್​ ಗ್ರಾಮದಲ್ಲಿ ನಡೆದಿದೆ.

ಮೃತದೇಹ ಹೊತ್ತು ಸಾಗಿದ ಜನ...

ಡರ್​ಗಾಂವ್​ ಗ್ರಾಮದ ತೋಟದ ಮಧ್ಯದಲ್ಲಿನ ಬಾವಿಯಲ್ಲಿ ವಂದನಾ ಬನ್ಕರ್ (30) ಮತ್ತು ಆಕೆಯ ಪುತ್ರಿ ಭಾರತಿ (7) ಎಂಬುವರ ಶವಗಳು ಪತ್ತೆಯಾಗಿದ್ದವು. ಮೃತದೇಹಗಳನ್ನು ಬಾವಿಯಿಂದ ಮೇಲೆತ್ತಿದ ಸಂಬಂಧಿಕರು, ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದಾರೆ. ಮೃತದೇಹ ಪತ್ತೆಯಾದ ಸ್ಥಳ ತೋಟದ ಮಧ್ಯೆ ಇದ್ದಿದ್ದರಿಂದ ಆ್ಯಂಬುಲೆನ್ಸ್ ​ ತಲುಪಲು ಅಸಾಧ್ಯವಾಗಿತ್ತು. ಹೀಗಾಗಿ ಸಂಬಧಿಕರು ಸುಮಾರು 3 ಕಿಲೋ ಮೀಟರ್​ ದೂರ ಎರಡು ಮೃತದೇಹಗಳನ್ನು ಹೊತ್ತು ಸಾಗಿದ್ದು, ಸ್ಥಳಕ್ಕೆ ಆ್ಯಂಬುಲೆನ್ಸ್​ ತಲುಪದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತ ತಾಯಿ-ಮಗಳು ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಸದ್ಯ ಅವರ ಮೃತದೇಹಗಳು ಬಾವಿಯಲ್ಲಿ ಪತ್ತೆಯಾಗಿವೆ. ಮೇಲ್ನೋಟಕ್ಕೆ ಅಕಸ್ಮಿಕವಾಗಿ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆಯಿಂದ ನಿಜವಾದ ಕಾರಣ ತಿಳಿದು ಬರಲಿದೆ ಎಂದು ಪೊಲೀಸ್​ ಅಧಿಕಾರಿ ಕಿರಣ್​ ಬಿಡ್ವೆ ತಿಳಿಸಿದ್ದಾರೆ. ಮೃತರ ಸಂಬಂಧಿಗಳು ಇದು ಕೊಲೆ ಎಂದು ಆರೋಪಿಸಿದ್ದು, ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ. ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.