ಇಂದು ವಿರಾಟ್ ಕೊಹ್ಲಿ ತಮ್ಮ 31ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಸಂತೋಷದಲ್ಲಿದ್ದಾರೆ. ಈ ವೇಳೆ, ತಮ್ಮ ಜೀವನ ಹೇಗೆ ನಡೆಯಬೇಕು ಎಂಬುದರ ಬಗ್ಗೆ ಕೊಹ್ಲಿ ತಮ್ಮ ಬಗ್ಗೆಯೇ ತಾವು ಪತ್ರ ಬರೆದುಕೊಂಡಿದ್ದಾರೆ.
ಕೊಹ್ಲಿ ಬರೆದ ಪತ್ರದ್ಲಲೇನಿದೆ : ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಬರೆದಿರುವ ಈ ಪತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಮೊದಲಿಗೆ ತಮಗೆ ಹ್ಯಾಪಿ ಬರ್ತ್ ಡೆ ಹೇಳಿಕೊಂಡಿರುವ ಕಿಂಗ್ ಕೊಹ್ಲಿ, ಜೀವನದಲ್ಲಿ ನಡೆದ ಏಳು ಬೀಳುಗಳು, ಬೇಸರದ ಸಂಗತಿಗಳಿಂದ ಪಾಠ ಕಲಿತಿರುವೆ. ಹಾಗೂ ಈ ಹಿಂದೆ ನಡೆದಿರುವ ಘಟನೆಗಳನ್ನು ನೆನೆದರೆ ಸಂತೋಷವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಜೀವನವು ಹಲವಾರು ಅಂಶಗಳನ್ನು ಒಳಗೊಂಡಿರುತ್ತದೆ. ನಿನ್ನ ಜೀವನದಲ್ಲಿ ಬರುವ ಘಟನೆಯನ್ನು ಲಘುವಾಗಿ ಪರಿಗಣಿಸಬೇಡ. ಕೆಲವೊಂದನ್ನು ನೀನು ಪಡೆಯಲು ಸಾಧ್ಯವಾಗದೇ ಇರಬಹುದು. ಇದು ಎಲ್ಲರ ಜೀವನದಲ್ಲಿಯೂ ನಡೆಯುತ್ತೆ. ನಿನ್ನ ಮೇಲೆ ನಿನಗೆ ನಂಬಿಕೆ ಹಾಗೂ ಭರವಸೆಗಳಿರಲಿ. ಯಾವಾತ್ತೂ ನಿರಾಸಕ್ತಿ ತೋರಬೇಡ.
ಸದ್ಯ ನೀದು ಮೆಟ್ಟಿರುವ ಶೂಗಳು ನಿನ್ನ ತಂದೆ ಕೊಡಿಸಿದ್ದಲ್ಲ ಎಂಬುದು ನಿನಗೆ ಗೊತ್ತಿದೆ. ಇಂದು ಬೆಳಗ್ಗೆ ಮಾಡಿದ ಅವರ ಅಪ್ಪುಗೆ ಮತ್ತು ನಿನ್ನ ಎತ್ತರದ ಬಗ್ಗೆ ಮಾಡಿದ ತಮಾಷೆಗಳು ಕೇವಲ ತಮಾಷೆಗಳು ಅಷ್ಟೆ. ಕೆಲವೊಮ್ಮೆ ಅವರು ನಿನ್ನ ಮೇಲೆ ಕಟ್ಟುನಿಟ್ಟಾಗಿ ಇರಬಹುದು. ಆದರೆ, ಅದು ನಿನ್ನ ಒಳಿತಿಗಾಗಿ ಎಂಬುದನ್ನು ಮರೆಯಬೇಡ.
-
My journey and life's lessons explained to a 15-year old me. Well, I tried my best writing this down. Do give it a read. 😊 #NoteToSelf pic.twitter.com/qwoEiknBvA
— Virat Kohli (@imVkohli) November 5, 2019 " class="align-text-top noRightClick twitterSection" data="
">My journey and life's lessons explained to a 15-year old me. Well, I tried my best writing this down. Do give it a read. 😊 #NoteToSelf pic.twitter.com/qwoEiknBvA
— Virat Kohli (@imVkohli) November 5, 2019My journey and life's lessons explained to a 15-year old me. Well, I tried my best writing this down. Do give it a read. 😊 #NoteToSelf pic.twitter.com/qwoEiknBvA
— Virat Kohli (@imVkohli) November 5, 2019
ಹೀಗೆ ತಮ್ಮ ಜೀವನದ ಬಗ್ಗೆಯೇ ತಾವೇ ಹಲವಾರು ಅಂಶಗಳನ್ನು ಈ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಈ ಪತ್ರ ಇದೀಗ ಸಾಮಾಜಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕೊಹ್ಲಿಯ ಪತ್ರಕ್ಕೆ ಪಾಸಿಟೀವ್ ಕಮೆಂಟ್ಗಳು ಬರುತ್ತಿವೆ.
ಇನ್ನು ಹುಟ್ಟಿದಬ್ಬ ಆಚರಿಸಿಕೊಳ್ಳುತ್ತಿರುವ ಬರ್ತ್ ಡೇ ಬಾಯ್ ಸದ್ಯ ವಿಶ್ರಾಂತಿಯಲ್ಲಿದ್ದು, ಇದೇ ತಿಂಗಳ 14ರಂದು ನಡೆಯುವ ಬಾಂಗ್ಲಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟ್ ಹಿಡಿಯಲಿದ್ದಾರೆ.