ವೆಲ್ಲಿಂಗ್ಟನ್: ಟೀಂ ಇಂಡಿಯಾ ವಿರುದ್ಧದ 4ನೇ ಟಿ-20 ಪಂದ್ಯದಲ್ಲಿ ಸುಲಭ ಗೆಲುವಿನ ಉತ್ಸುಕದಲ್ಲಿದ್ದ ನ್ಯೂಜಿಲ್ಯಾಂಡ್ ತಂಡಕ್ಕೆ ವಿಲನ್ ಆಗಿದ್ದು ಶಾರ್ದೂಲ್ ಠಾಕೂರ್. ಎಸೆದ ಕೊನೆ ಓವರ್ನಲ್ಲಿ 4ವಿಕೆಟ್ ಪಡೆದುಕೊಂಡು ಕೇವಲ 6ರನ್ ನೀಡಿ ಕಿವೀಸ್ ಪಡೆಗೆ ಮಾರಕವಾಗಿ ಕಾಡಿದರು.
4ನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 165 ರನ್ಗಳಿಕೆ ಮಾಡ್ತು. ಇದರ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡ 20 ಓವರ್ಗಳಲ್ಲಿ ನ್ಯೂಜಿಲೆಂಡ್ ತಂಡ 165ರನ್ಗಳಿಕೆ ಮಾಡಿದ್ದರಿಂದ ಸೂಪರ್ ಓವರ್ ನಡೆಯಿತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ 13ರನ್ಗಳಿಕೆ ಮಾಡಿ ಕೊಹ್ಲಿ ಪಡೆ ಗೆಲುವಿಗೆ 14ರನ್ ಟಾರ್ಗೆಟ್ ನೀಡ್ತು. ಈ ವೇಳೆ ಆರಂಭಿಕ ಕೆಎಲ್ ರಾಹುಲ್ ಜತೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದು ತಂಡಕ್ಕೆ ಗೆಲುವು ತಂದಿಟ್ಟರು. ಆದರೆ ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಬದಲಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ ಸೂಪರ್ ಓವರ್ನಲ್ಲಿ ಕಣಕ್ಕಿಳಿಯಬೇಕಿತು. ಅವರಿಗೆ ಪ್ಯಾಡ್ ಮಾಡುವಂತೆ ಕೊಹ್ಲಿ ಸೂಚನೆ ಸಹ ನೀಡಿದರು.
ಆದರೆ ರಾಹುಲ್ ಸೂಚನೆಯಂತೆ ಮೈದಾನದಲ್ಲಿ ನನ್ನೊಂದಿಗೆ ಒತ್ತಡ ನಿಭಾಯಿಸುವ ಜತೆಗೆ ಅನುಭವಿ ಆಟಗಾರನ ಅವಶ್ಯಕತೆವಿದೆ ಎಂದು ಹೇಳಿದ್ದರಿಂದ ತಾವು ಮೈದಾನಕ್ಕೆ ಇಳಿದಿದ್ದಾಗಿ ಹೇಳಿಕೊಂಡಿದ್ದಾರೆ.