ನವದೆಹಲಿ: ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ರಾಷ್ಟ್ರಪತಿ ಭವನದ ಸುತ್ತಮುತ್ತಲಿನ 25 ಕುಟುಂಬಗಳನ್ನು ಐಸೋಲೇಟ್ ಮಾಡಲು ನಿರ್ಧರಿಸಲಾಗಿದೆ.
ಇತ್ತೀಚೆಗೆ ರಾಷ್ಟ್ರಪತಿ ಭವನದ ಸಮೀಪದ ನಿವಾಸಿಯ ಸಂಬಂಧಿಕನೊಬ್ಬ ಸಾವನ್ನಪ್ಪಿದ್ದ. ಬಳಿಕ ಮೃತನ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರಪತಿ ಭವನದ ಸುತ್ತಮುತ್ತಲಿನ ಕುಟುಂಬಗಳನ್ನು ಐಸೋಲೇಟ್ ಮಾಡಲು ತೀರ್ಮಾನಿಸಲಾಗಿದೆ.
ಸದ್ಯ ಪಾಸಿಟಿವ್ ಬಂದ ವ್ಯಕ್ತಿಯನ್ನು ನಗರದ ಬಿರ್ಲಾ ಮಂದಿರ ಬಳಿ ಐಸೋಲೇಶನ್ನಲ್ಲಿ ಇಡಲಾಗಿದೆ.