ETV Bharat / bharat

ಉತ್ತರಪ್ರದೇಶದಲ್ಲಿ 5 ವರ್ಷ ಬಾಲಕನ ಅಪಹರಣ : ₹30 ಲಕ್ಷಕ್ಕೆ ಬೇಡಿಕೆ ಇಟ್ಟ ಕಿಡ್ನ್ಯಾಪರ್ಸ್‌ - kidnapped

ಮನೆಯ ಹೊರಗೆ ಆಡುತ್ತಿದ್ದ ಬಾಲಕ ಕಾಣೆಯಾಗಿದ್ದ. ಆತನನ್ನು ಹುಡುಕುವಾಗ ಅಪಹರಣದ ಕರೆ ಬಂದಿದೆ. ಆದರೆ, ಅದಕ್ಕೂ ಮೊದಲೇ ಮಗು ಕಾಣೆಯಾದ ಕುರಿತು ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದರು..

A five-year-old boy was allegedly kidnapped
ಅಪಹರಣವಾದ ಬಾಲಕ
author img

By

Published : Aug 8, 2020, 12:31 PM IST

ಮೊರದಾಬಾದ್​(ಉತ್ತರಪ್ರದೇಶ) : ಜಿಲ್ಲೆಯ ಲೈನ್‌ಪರಾ ಪ್ರದೇಶದಲ್ಲಿ ಮನೆಯೊಂದರ ಹೊರಗೆ ಆಟವಾಡುತ್ತಿದ್ದ 5 ವರ್ಷದ ಬಾಲಕನನ್ನು ಕಿಡಿಗೇಡಿಗಳು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.

ಮಜೌಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲೈನ್‌ಪರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ₹30 ಲಕ್ಷ ನೀಡಿ ಮಗನನ್ನು ಬಿಡಿಸಿಕೊಂಡು ಹೋಗಲು ಅಪಹರಣಕಾರರು ಸೂಚಿಸಿರುವುದಲ್ಲದೆ, ಈ ಘಟನೆ ಕುರಿತು ಪೊಲೀಸರಿಗೆ ವಿಷಯ ಮುಟ್ಟಿಸಿದರೆ, ಮಗನನ್ನು ಕೊಲ್ಲುತ್ತೇವೆ ಎಂದು ಬಾಲಕನ ತಂದೆಗೆ ಬೆದರಿಕೆ ಹಾಕಿದ್ದಾರೆ.

ಮನೆಯ ಹೊರಗೆ ಆಡುತ್ತಿದ್ದ ಬಾಲಕ ಕಾಣೆಯಾಗಿದ್ದ. ಆತನನ್ನು ಹುಡುಕುವಾಗ ಅಪಹರಣದ ಕರೆ ಬಂದಿದೆ. ಆದರೆ, ಅದಕ್ಕೂ ಮೊದಲೇ ಮಗು ಕಾಣೆಯಾದ ಕುರಿತು ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಪ್ರಭಾಕರ್ ಚೌಧರಿ ಅವರು ಬಾಲಕನ ಕುಟುಂಬಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಗ ತಂದೆ ಅಪಹರಣವಾಗಿರುವ ಕುರಿತು ಮಾಹಿತಿ ನೀಡಿದ್ದಾರೆ. ಅಪಹರಣಕಾರರನ್ನು ಭೇಟೆಯಾಗಲು ಮೊರಾದಾಬಾದ್‌ನ ಪೊಲೀಸರು ತಂಡಗಳನ್ನು ರಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.