ETV Bharat / bharat

ಮೋಹಕ ಕಣಿವೆಯ ಕಣ್ಣೀರಿನ ಕಥೆ: ಟೀ ಎಸ್ಟೇಟ್​ ಕಾರ್ಮಿಕರ ಜೀವನ ವ್ಯಥೆ..!

ಕೇರಳದ ಅಗಸ್ತ್ಯಮಲೈ ಶ್ರೇಣಿಯ ಬೊನಾಕಾಡ್, ಯುನೆಸ್ಕೋದಿಂದ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದೆ. ಇದು ಪ್ರವಾಸಿಗರ ಸ್ವರ್ಗವಾಗಿದ್ದು, ಸಮುದ್ರ ಮಟ್ಟದಿಂದ ಸುಮಾರು 1,868 ಮೀಟರ್ ಎತ್ತರದಲ್ಲಿರುವ ಈ ಮೋಹಕ ಕಣಿವೆಯು ಕಣ್ಣೀರಿನ ನೈಜ ಕಥೆಗಳನ್ನು ಹೇಳುತ್ತದೆ. ಟೀ ಎಸ್ಟೇಟ್​ಗಳಲ್ಲಿ ಚಹಾ ಎಲೆಗಳನ್ನು ಕೀಳುವುದು ಹಾಗೂ ಸ್ವಚ್ಛಗೊಳಿಸುವುದು ಸೇರಿದಂತೆ ಎಲ್ಲ ಕೆಲಸಗಳನ್ನು ಅವರು ಮಾಡುತ್ತಿದ್ದರು. ಹೀಗೆ ಸಮಯ ಕಳೆದಂತೆ ಅವರು ಬೊನಾಕಾಡ್‌ನ ಸ್ಥಳೀಯರಾದರು.

ಟೀ ಎಸ್ಟೇಟ್​ ಕಾರ್ಮಿಕರ ಜೀವನ ವ್ಯಥೆ..!
ಟೀ ಎಸ್ಟೇಟ್​ ಕಾರ್ಮಿಕರ ಜೀವನ ವ್ಯಥೆ..!
author img

By

Published : Nov 29, 2020, 6:03 PM IST

ಕೇರಳ: ದೇವರನಾಡು ಎಂದು ಪ್ರಸಿದ್ಧಿ ಪಡೆದ ಕೇರಳದ ಪ್ರಕೃತಿಯ ಸೊಬಗು ಎಂತಹವರನ್ನೂ ಸೆಳೆಯುತ್ತದೆ. ಹಸಿರ ಸಿರಿಯನ್ನೇ ಹೊದ್ದು ಮಲಗಿರುವ ಈ ಮಣ್ಣಿನಲ್ಲಿ, ಅದೆಷ್ಟೋ ಪ್ರವಾಸಿ ತಾಣಗಳಿವೆ. ಕೇರಳದ ಅಗಸ್ತ್ಯಮಲೈ ಶ್ರೇಣಿಯ ಬೊನಾಕಾಡ್, ಯುನೆಸ್ಕೋದಿಂದ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದೆ. ಇದು ಪ್ರವಾಸಿಗರ ಸ್ವರ್ಗವಾಗಿದ್ದು, ಸಮುದ್ರ ಮಟ್ಟದಿಂದ ಸುಮಾರು 1,868 ಮೀಟರ್ ಎತ್ತರದಲ್ಲಿರುವ ಈ ಮೋಹಕ ಕಣಿವೆಯು ಕಣ್ಣೀರಿನ ನೈಜ ಕಥೆಗಳನ್ನು ಹೇಳುತ್ತದೆ. ಅಲ್ಲಿನ ಟೀ ಎಸ್ಟೇಟ್​ನಲ್ಲಿರುವ ಕಾರ್ಮಿಕರ ಜೀವನದ ಪುಟಗಳನ್ನು ತೆರೆದಿಡುತ್ತದೆ.

ಟೀ ಎಸ್ಟೇಟ್​ ಕಾರ್ಮಿಕರ ಜೀವನ ವ್ಯಥೆ..!

1850 ರಲ್ಲಿ ಬ್ರಿಟಿಷರು ಇಲ್ಲಿಯ ಚಹಾ ತೋಟಗಳಲ್ಲಿ ಕೆಲಸ ಮಾಡಲು, ತಮಿಳುನಾಡಿನ ಕಾರ್ಮಿಕರನ್ನು ಕರೆತಂದರು. ಅಲ್ಲಿ ತಮಿಳು ಕಾರ್ಮಿಕರಿಗೆ ವಾಸಿಸಲು ಅವರು ಉದ್ದನೆಯ ಸಂಕೀರ್ಣಗಳಲ್ಲಿ ಅನೇಕ ಕೋಣೆಗನ್ನು ನಿರ್ಮಾಣ ಮಾಡಿದರು. ಅವುಗಳನ್ನೇ ಸ್ಥಳೀಯವಾಗಿ ಲಯಮ್ಸ್ ಎಂದು ಕರೆಯಲಾಗುತ್ತದೆ. ಇಲ್ಲಿಗೆ ಕುಟುಂಬ ಸಮೇತ ಬಂದ ಕಾರ್ಮಿಕರು, ಈ ಲಯಮ್​ಗಳಲ್ಲಿ ನೆಲೆಸಿದರು. ಟೀ ಎಸ್ಟೇಟ್​ಗಳಲ್ಲಿ ಚಹಾ ಎಲೆಗಳನ್ನು ಕೀಳುವುದು ಹಾಗೂ ಸ್ವಚ್ಛಗೊಳಿಸುವುದು ಸೇರಿದಂತೆ ಎಲ್ಲ ಕೆಲಸಗಳನ್ನು ಅವರು ಮಾಡುತ್ತಿದ್ದರು. ಹೀಗೆ ಸಮಯ ಕಳೆದಂತೆ ಅವರು ಬೊನಾಕಾಡ್‌ನ ಸ್ಥಳೀಯರಾದರು.

ಮುಂದೆ ಬ್ರಿಟಿಷರು ಚಹಾ ತೋಟಗಳನ್ನು ತೊರೆದಾಗ ಮಾಲೀಕತ್ವ ಮತ್ತು ನಿರ್ವಹಣೆ ಕೂಡ ಹಲವು ಬಾರಿ ಬದಲಾಯಿತು. ಕೊನೆಯದಾಗಿ ಮಾಲೀಕರಾಗಿದ್ದ ಮಹಾವೀರ್ ಪ್ಲಾಂಟೇಶನ್ಸ್ 2001 ರಲ್ಲಿ ಈ ಎಸ್ಟೇಟ್​​​ಗಳನ್ನು ತೊರೆದಾಗಿನಿಂದ, ಇಲ್ಲಿನ ಕಾರ್ಮಿಕರಿಗೆ ಜೀವನವು ಶೋಚನೀಯವಾಗಿದೆ. 300 ಕ್ಕೂ ಹೆಚ್ಚು ಕಾರ್ಮಿಕರು ಮತ್ತು ಅವರ ಕುಟುಂಬಗಳು ನಿರುದ್ಯೋಗಿಗಳಾಗಿದ್ದು, ಅವರ ಜೀವನಕ್ಕೆ ಯಾವುದೇ ಆದಾಯ ಮೂಲಗಳಿಲ್ಲ. ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಗೆ ತಲುಪಿದ್ದಾರೆ. ಎಸ್ಟೇಟ್ ಮಾಲೀಕರು ಕಾರ್ಮಿಕರಿಗೆ ಭವಿಷ್ಯ ನಿಧಿಯನ್ನೂ ಸಹ ಪಾವತಿಸಿಲ್ಲ. ಯಾವುದೇ ಸಮಯದಲ್ಲಿ ತಾವು ಇರುವ ಸೂರು ಬೀಳಬಹುದೆಂಬ ಭಯದಲ್ಲಿ ಇದ್ದಾರೆ ಇಲ್ಲಿನ ಕಾರ್ಮಿಕರು. ಇಂತಹ ಶಿಥಿಲಾವಸ್ಥೆಯಲ್ಲಿ ತಮ್ಮ ಶೋಚನೀಯ ಜೀವನವನ್ನು ಮುಂದುವರೆಸಿದ್ದಾರೆ ಕೂಡಾ.

ಕಳೆದ 39 ವರ್ಷಗಳಿಂದ ಎಸ್ಟೇಟ್​​​ನಲ್ಲಿ ಕೆಲಸ ಮಾಡುತ್ತಿರುವ ಪುಷ್ಪಥಾಯಿ ಎಂಬ ಮಹಿಳೆ, ತನ್ನ 36 ತಿಂಗಳ ಕೆಲಸದ ವೇತನವನ್ನು ಇನ್ನೂ ಸಹ ಪಡೆದುಕೊಂಡಿಲ್ಲ. ತನ್ನ 58 ವರ್ಷ ವಯಸ್ಸಿನವರೆಗೆ ಎಸ್ಟೇಟ್​​​ನಲ್ಲಿ ಕೆಲಸ ಮಾಡಿರುವ ಅರವಿಂದನ್, ಈಗ ಜೀವನ ಸಾಗಿಸಲು ದನಗಳನ್ನು ಸಾಕಿದ್ದಾರೆ. ತಾತ್ಕಾಲಿಕ ಆಧಾರದ ಮೇಲೆ ಎಸ್ಟೇಟ್​​​​ನಲ್ಲಿ ಕೆಲಸ ಮಾಡುತ್ತಿರುವ ರಾಜು, ಈಗ ‘ಮನ್ನೂಮ್ ವೀಡಮ್’ ಯೋಜನೆಯ ಕೆಲಸದ ಮೇಲೆ ಭರವಸೆ ಇಟ್ಟುಕೊಂಡಿದ್ದಾನೆ.

ಇಲ್ಲಿನ ಅನೇಕ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಆಸರೆಯಾಗಿದೆ. ಏಕೆಂದರೆ ಇದು ಅವರ ಏಕೈಕ ಆದಾಯದ ಮೂಲವಾಗಿದ್ದು, ಹೀಗೆ ಅವರು ಆ ಲಯಮ್ಸ್ ಎಂಬ ಕುಟೀರಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರವು ಅವರ ಕಷ್ಟಕ್ಕೆ ಸ್ಪಂದಿಸಬೇಕಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.