ತಿರುವನಂತಪುರಂ (ಕೇರಳ): ಡಿಸೆಂಬರ್ 1 ರಿಂದ ರಾಜ್ಯದಲ್ಲಿ ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ಸರ್ಕಾರ ಘೋಷಿಸಿದ ನಂತರ ಕೇರಳ ಪೊಲೀಸರು ಇಂದಿನಿಂದ ತಮ್ಮ ಫೇಸ್‌ಬುಕ್ ಪೇಜ್ನಲ್ಲಿ 'ಹೆಲ್ಮೆಟ್ ಚಾಲೆಂಜ್' ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಈ ಸವಾಲಿನಲ್ಲಿ ಬೈಕ್ ಸವರಾರರು ಹೆಲ್ಮೆಟ್ ಧರಿಸಿರುವ ತಮ್ಮ ಫೋಟೋಗಳನ್ನು ಶೇರ್ ಮಾಡಲು ಕೇಳಿ ಕೊಳ್ಳಲಾಗಿದೆ. ಮಲಯಾಳಂನ ಪ್ರಸಿದ್ಧ ಸಿನಿಮಾವೊಂದರ ಫೋಟೋವನ್ನು ಪೋಸ್ಟ್ ಮಾಡಿದ ಕೇರಳ ಪೊಲೀಸರು, ''ನಿಮ್ಮ ಅತ್ಯುತ್ತಮ ಚಿತ್ರಗಳು ಹೀಗೆ ಫೇಸ್‌ಬುಕ್ ಪುಟದಲ್ಲಿ ಕಾಣಿಸಿಕೊಳ್ಳಲಿವೆ" ಎಂದು ತಿಳಿಸಿದ್ದಾರೆ.
ನವೆಂಬರ್ 1 ರಂದು ಕೇರಳ ಸರ್ಕಾರ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಹೈಕೋರ್ಟ್ ನಿರ್ದೇಶನಗಳನ್ನು ಜಾರಿಗೆ ತಂದಿದ್ದು, ಇದರ ಪ್ರಕಾರ ದ್ವಿಚಕ್ರ ವಾಹನ ಸವಾರರು ಹೊಸ ನೀತಿಗೆ ಬದ್ಧರಾಗಿದ್ದಾರಾ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ವಾಹನ ತಪಾಸಣೆ ನಡೆಸಲಿದ್ದಾರೆ. ಹೆಲ್ಮೆಟ್ ಧರಿಸದಿದ್ದಲ್ಲಿ 500 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ. ಹೀಗಾಗಿ ದಂಡ ವಿಧಿಸುವ ಮೊದಲು ಆರಂಭಿಕ ಹಂತದಲ್ಲೇ ಹೆಲ್ಮೆಟ್ ಧರಿಸಲು ಹಿಂಬದಿ ಸವಾರರಿಗೆ 'ಹೆಲ್ಮೆಟ್ ಚಾಲೆಂಜ್' ಮೂಲಕ ಸಲಹೆ ನೀಡುತ್ತಿದ್ದಾರೆ.