ETV Bharat / bharat

ಕೃಷಿ ಕ್ಷೇತ್ರದ ಪುನಶ್ಚೇತನಕ್ಕಾಗಿ 3 ಸಾವಿರ ಕೋಟಿ ವ್ಯಯಿಸಲು ಮುಂದಾದ ಕೇರಳ ಸರ್ಕಾರ..

ಇದಕ್ಕಾಗಿ ಕೃಷಿ ಇಲಾಖೆ ಕರಡು ಯೋಜನೆ ಸಿದ್ಧಪಡಿಸಿದೆ ಮತ್ತು ಅದನ್ನು ಅಂತಿಮಗೊಳಿಸಿದೆ. ಶೀಘ್ರದಲ್ಲಿ ಇದನ್ನ ಅನುಷ್ಠಾನಗೊಳಿಸಲಾಗುವುದು ಎಂದು ಸಿಎಂ ಹೇಳಿದರು.

Kerala govt allots Rs 3,000 cr to revive agriculture sector

author img

By

Published : Apr 30, 2020, 10:13 AM IST

ತಿರುವನಂತಪುರಂ: ರಾಜ್ಯದ ಕೃಷಿ ಕ್ಷೇತ್ರದ ಪುನಶ್ಚೇತನಕ್ಕಾಗಿ ಕೇರಳ ಸರ್ಕಾರ ಬುಧವಾರ 3 ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದೆ.

ಕೋವಿಡ್-19​ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡುವ ವೇಳೆ ಈ ಬಗ್ಗೆ ತಿಳಿಸಿರುವ ಸಿಎಂ ಪಿಣರಾಯಿ ವಿಜಯನ್, ಆಹಾರ ಉತ್ಪಾದನೆ ಹೆಚ್ಚಿಸಲು ಮತ್ತು ಕೃಷಿಯನ್ನು ಪುನಶ್ಚೇತನಗೊಳಿಸಲು ಮುಂದಿನ ಒಂದು ವರ್ಷದಲ್ಲಿ ರಾಜ್ಯ ಸರ್ಕಾರ 3 ಸಾವಿರ ಕೋಟಿ ರೂ. ವ್ಯಯಿಸಲಿದೆ. ಇದರಲ್ಲಿ 1,500 ಕೋಟಿ ರೂ.ಗಳನ್ನು ಸ್ಥಳೀಯ ಸಂಸ್ಥೆಗಳು ಮತ್ತು ವಿವಿಧ ಇಲಾಖೆಗಳ ಯೋಜನೆಗಳ ಹಂಚಿಕೆಯಿಂದ ಸಂಗ್ರಹಿಸಲಾಗುವುದು ಮತ್ತು ಉಳಿದ 1,500 ಕೋಟಿ ರೂ.ಗಳನ್ನು ನಬಾರ್ಡ್ ಮತ್ತು ಸಹಕಾರ ವಲಯದಿಂದ ಸಾಲವಾಗಿ ನೀಡಲಾಗುವುದು ಎಂದು ಹೇಳಿದರು.

ಮುಂದಿನ ತಿಂಗಳಿನಿಂದ ಪಾಳು ಬಿದ್ದ ಭೂಮಿಯನ್ನು ಕೃಷಿಗೆ ಬಳಸಿಕೊಳ್ಳಲು ಕೃಷಿ ಇಲಾಖೆ ಬೃಹತ್ ಕಾರ್ಯಕ್ರಮ ರೂಪಿಸಿದೆ. ಆಯಾ ಪ್ರದೇಶಗಳಲ್ಲಿನ ಬಂಜರು ಭೂಮಿಯನ್ನು ಬಳಸಿ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು. ಕೃಷಿ ಇಲಾಖೆಯ ಗುರಿ, ಕೃಷಿಯನ್ನು ಪುನಶ್ಚೇತನಗೊಳಿಸುವುದು, ರೈತರ ಆದಾಯ ಹೆಚ್ಚಿಸುವುದು, ಯುವಕರನ್ನು ಕೃಷಿಯತ್ತ ಆಕರ್ಷಿಸುವುದು ಮತ್ತು ಉದ್ಯೋಗ ಕಳೆದುಕೊಂಡಿರುವ ವಲಸಿಗರಿಗೆ ಪುನರ್ವಸತಿ ಕಲ್ಪಿಸುವುದಾಗಿದೆ. ಇದಕ್ಕಾಗಿ ಕೃಷಿ ಇಲಾಖೆ ಕರಡು ಯೋಜನೆ ಸಿದ್ಧಪಡಿಸಿದೆ ಮತ್ತು ಅದನ್ನು ಅಂತಿಮಗೊಳಿಸಿದೆ. ಶೀಘ್ರದಲ್ಲಿ ಇದನ್ನ ಅನುಷ್ಠಾನಗೊಳಿಸಲಾಗುವುದು ಎಂದು ಸಿಎಂ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.