ETV Bharat / bharat

3 ನಿಮಿಷದಲ್ಲಿ 53 ಯೋಗ ಭಂಗಿ ಪ್ರದರ್ಶನ: ಐದನೇ ತರಗತಿ ಬಾಲಕಿಯಿಂದ ವಿಶ್ವ ದಾಖಲೆ

author img

By

Published : Oct 11, 2020, 11:02 AM IST

ಮೂರು ನಿಮಿಷಗಳಲ್ಲಿ 53 ಯೋಗ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ಕೇರಳ ಮೂಲದ ಬಾಲಕಿ ವಿಶ್ವ ದಾಖಲೆ ಬರೆದಿದ್ದಾಳೆ.

Kerala girlin the yoga competitions
3 ನಿಮಿಷದಲ್ಲಿ 53 ಯೋಗ ಭಂಗಿ ಪ್ರದರ್ಶಿಸಿ ದಾಖಲೆ ಬರೆದ ಬಾಲಕಿ

ಕಾಸರಗೋಡು: ಕೇರಳದ ಕಾಸರಗೋಡಿನ ಐದನೇ ತರಗತಿ ವಿದ್ಯಾರ್ಥಿನಿ ಅಭಿಜ್ಞಾ, ಮೂರು ನಿಮಿಷಗಳಲ್ಲಿ 53 ಯೋಗ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ಯೋಗದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಈ ಹಿಂದೆ 3 ನಿಮಿಷಗಳಲ್ಲಿ 34 ಯೋಗ ಭಂಗಿಗಳನ್ನು ಪ್ರದರ್ಶಿಸಿದ್ದು ದಾಖಲೆಯಾಗಿತ್ತು. ಈ ರೆಕಾರ್ಡ್ ಬ್ರೇಕ್​ ಮಾಡಿರುವ ಅಭಿಜ್ಞಾ ‘ಅಮೆರಿಕದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ನಲ್ಲಿ ಸ್ಥಾನ ಪಡೆದಿದ್ದಾರೆ.

ಕಾರಂತಕ್ಕಾಡು ಹರೀಶ್ ಮತ್ತು ತೇಜ ಕುಮಾರಿ ಅವರ ಪುತ್ರಿ ಅಭಿಜ್ಞಾ, ಗೂಗಲ್ ಮೀಟ್ ಆ್ಯಪ್​ ಬಳಸಿ ಆನ್‌ಲೈನ್ ಯೋಗ ಪ್ರದರ್ಶನದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಭಿಜ್ಞಾ 4 ನೇ ವಯಸ್ಸಿನಿಂದ ತಾಯಿ ತೇಜ ಕುಮಾರಿ ಅವರ ಮಾರ್ಗದರ್ಶನದಲ್ಲಿ ಯೋಗ ಅಭ್ಯಾಸ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಅಭಿಜ್ಞಾ ಕರ್ನಾಟಕದ ಮಡಿಕೇರಿ ಮತ್ತು ಪಾಂಡಿಚೇರಿಯಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಮತ್ತು ಪ್ರಶಸ್ತಿಗಳನ್ನು ಪಡೆದಿದ್ದರು.

ಭಾರತ ವಿದ್ಯಾ ಭವನ ದ್ವಾರಕಾನಗರ ವೆಂಕಟೇಶ ವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳ ಅಡಿಯಲ್ಲಿ ಆಕೆಗೆ ಯೋಗದ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ಶಾಸ್ತ್ರೀಯ ನೃತ್ಯವನ್ನೂ ಕಲಿಯುತ್ತಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.