ನವದೆಹಲಿ: ಸದಾ ಬಿಜೆಪಿ ಮೇಲೆ ಮುಗಿಬೀಳುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ.
ತಮ್ಮ ಪಕ್ಷ ಆಮ್ ಆದ್ಮಿ ಹೊಸ ಸಮೀಕ್ಷೆಯೊಂದನ್ನು ಮಾಡಿದ್ದು, ಅದರಲ್ಲಿ ಪುಲ್ವಾಮ ದಾಳಿ ಹಾಗೂ ಆನಂತರ ಉಂಟಾದ ಭಾರತ-ಪಾಕಿಸ್ತಾನದ ಉದ್ವಿಗ್ನತೆಯಿಂದಾಗಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಸೋಲಲಿದೆ ಎಂದು ಶೇ 56 ಜನರು ಅಭಿಪ್ರಾಯಪಟ್ಟಿದ್ದಾರೆ ಎಂದಿದೆ.
56% people said BJP will suffer losses becoz of its conduct https://t.co/gLO8ffPiQV
— Arvind Kejriwal (@ArvindKejriwal) March 12, 2019 " class="align-text-top noRightClick twitterSection" data="
">56% people said BJP will suffer losses becoz of its conduct https://t.co/gLO8ffPiQV
— Arvind Kejriwal (@ArvindKejriwal) March 12, 201956% people said BJP will suffer losses becoz of its conduct https://t.co/gLO8ffPiQV
— Arvind Kejriwal (@ArvindKejriwal) March 12, 2019
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದ ಕೇಜ್ರಿವಾಲ್, ಪುಲ್ವಾಮ ದಾಳಿ ನಂತರ ಭಾರತ-ಪಾಕ್ ಸಂಕಷ್ಟ ಜನರ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಆನಂತರ ಟ್ವಿಟ್ಟರ್ನಲ್ಲಿಯೂ ಹೀಗೇ ಟೀಕಿಸಿದ್ದಾರೆ.
No. That was not the question. The question was - will BJP gain or lose becoz of Pulwama and subsequent Indo-Pak tensions? https://t.co/LR6tgTWFbT
— Arvind Kejriwal (@ArvindKejriwal) March 12, 2019 " class="align-text-top noRightClick twitterSection" data="
">No. That was not the question. The question was - will BJP gain or lose becoz of Pulwama and subsequent Indo-Pak tensions? https://t.co/LR6tgTWFbT
— Arvind Kejriwal (@ArvindKejriwal) March 12, 2019No. That was not the question. The question was - will BJP gain or lose becoz of Pulwama and subsequent Indo-Pak tensions? https://t.co/LR6tgTWFbT
— Arvind Kejriwal (@ArvindKejriwal) March 12, 2019
ಟ್ವಿಟ್ಟಿಗನೋರ್ವ, ಭಾರತ-ಪಾಕ್ ಉದ್ವಿಗ್ನತೆಯಿಂದ ಬಿಜೆಪಿಗೆ ಲಾಭವೋ? ನಷ್ಟವೋ? ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ವಿಜಯೇಂದ್ರ ಗುಪ್ತ, ಯೋಧರ ಧೀರ ಕ್ರಮವನ್ನು ರಾಜಕೀಯ ಲಾಭ, ನಷ್ಟಕ್ಕೆ ತಳುಕು ಹಾಕಿರುವ ಕೇಜ್ರಿವಾಲ್ರಿಗೆ ನಾಚಿಕೆಯಾಗಬೇಕು ಎಂದಿದ್ದಾರೆ. ಸುಳ್ಳು ಸಮೀಕ್ಷೆ ಮೂಲಕ ಜನರ ಹಾದಿ ತಪ್ಪಿಸುತ್ತಿದೆ ಎಂದೂ ಕುಟುಕಿದೆ.