ಮುಂಬೈ: ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಪ್ರತಿಷ್ಠಿತ ಕೌನ್ ಬನೇಗಾ ಕರೋಡ್ ಪತಿ ಟಿವಿ ಶೋನಲ್ಲಿ ಮಹಿಳೆವೋರ್ವರು 1 ಕೋಟಿ ಬಹುಮಾನದ ಪ್ರಶ್ನೆ ಎದುರಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಲೇಬರ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚರಣ ಗುಪ್ತಾ ಎಂಬ ಎಂಬ ಮಹಿಳೆ ಕೆಬಿಕೆ ಶೋನಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಅಂತಿಮ 1 ಕೋಟಿ ಬಹುಮಾನದ ಪ್ರಶ್ನೆ ಎದುರಿಸಿದ್ದಾರೆ.
ಕೌನ್ ಬನೇಗಾ ಕರೋಡ್ಪತಿ ಸೀಸನ್ 11 ರಲ್ಲಿ 1 ಕೋಟಿ ಪ್ರಶ್ನೆ ಮೊತ್ತದ ಎದುರಿಸಿದ ಮೊದಲ ಸ್ಪರ್ಧಿಯಾದ ಚರಣ ಗುಪ್ತಾ ಅದಕ್ಕೆ ಉತ್ತರಿಸಲಾಗದೇ 50 ಲಕ್ಷ ರೂಪಾಯಿ ಪಡೆದು ಆಟದಿಂದ ಹೊರಬಂದಿದ್ದಾರೆ.
ಹಾಗಿದ್ರೆ 1 ಕೋಟಿಯ ಪ್ರಶ್ನೆ ಏನು ಗೊತ್ತಾ?
1944 ರಲ್ಲಿ ನಡೆದ ಕಾಂಗ್ಲಾ ಟೋಂಗ್ಬಿ ಕದನವನ್ನು ಇಂದಿನ ಭಾರತದ ಯಾವ ರಾಜ್ಯದ ರಾಜಧಾನಿ ಬಳಿ ನಡೆಸಲಾಯಿತು?
ಉತ್ತರ: ಇಂಫಾಲ್