ನವದೆಹಲಿ: ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ರದ್ದುಗೊಳಿಸಲಾಗಿದ್ದು, ಬಾಲಿವುಡ್ ಸ್ಟಾರ್ಸ್ ಸೇರಿ ಅನೇಕರು ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಟೀಂ ಇಂಡಿಯಾ ಆರಂಭಿಕ ಮಾಜಿ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್, ಯಾರು ಮಾಡಲು ಸಾಧ್ಯವಾಗದೇ ಇರುವುದನ್ನ ನಾವು ಮಾಡಿ ತೋರಿಸಿದ್ದೇವೆ. ಕಾಶ್ಮೀರದಲ್ಲೂ ಇನ್ಮುಂದೆ ನಮ್ಮ ತ್ರಿವರ್ಣ ಧ್ವಜ ಹಾರಾಡಲಿದೆ. ಜೈ ಹಿಂದೆ, ಅಭಿನಂಧನೆಗಳು ಭಾರತ, ಕಾಶ್ಮೀರ್ ಮುಬಾರಕ್ ಎಂದು ಬರೆದುಕೊಂಡಿದ್ದಾರೆ.
-
जो कोई ना कर सका वो हमने कर दिखाया है।
— Gautam Gambhir (@GautamGambhir) August 5, 2019 " class="align-text-top noRightClick twitterSection" data="
कश्मीर में भी अपना तिरंगा लहराया हैं 🇮🇳🇮🇳
जय हिंद ! Congratulations India ! कश्मीर मुबारक!@narendramodi @AmitShah
">जो कोई ना कर सका वो हमने कर दिखाया है।
— Gautam Gambhir (@GautamGambhir) August 5, 2019
कश्मीर में भी अपना तिरंगा लहराया हैं 🇮🇳🇮🇳
जय हिंद ! Congratulations India ! कश्मीर मुबारक!@narendramodi @AmitShahजो कोई ना कर सका वो हमने कर दिखाया है।
— Gautam Gambhir (@GautamGambhir) August 5, 2019
कश्मीर में भी अपना तिरंगा लहराया हैं 🇮🇳🇮🇳
जय हिंद ! Congratulations India ! कश्मीर मुबारक!@narendramodi @AmitShah
ಆರ್ಟಿಕಲ್ 370 ರದ್ದು ಮಾಡಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದು, ಇನ್ಮುಂದೆ ಅದು ರಾಜ್ಯವಾಗಿರದೇ ಕೇಂದ್ರಾಡಳಿತ ಪ್ರದೇಶವಾಗಿರಲಿದೆ. ಈಗಾಗಲೇ ಈ ನಿರ್ಧಾರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದು, ಐಎಡಿಎಂಕೆ, ಎಎಪಿ, ವೈಎಸ್ಆರ್ಪಿ, ಬಿಜು ಜನತಾದಳ ಹಾಗೂ ಬಿಎಸ್ಪಿ ಪಕ್ಷಗಳು ಕೇಂದ್ರದ ನಿರ್ಧಾರಕ್ಕೆ ಬೆಂಬಲ ನೀಡಿವೆ.
ಇನ್ನು ಕಾಶ್ಮೀರ ಕ್ರಿಕೆಟ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇರ್ಫಾನ್ ಪಠಾಣ್, 'ನಾನು ಕಾಶ್ಮೀರ ತೊರೆದಿದ್ದರೂ ನನ್ನ ಮನಸ್ಸು ಮತ್ತು ಹೃದಯ ಕಾಶ್ಮೀರದಲ್ಲಿದೆ. ನಾನು ನಮ್ಮ ಭಾರತೀಯ ಸೇನೆ ಮತ್ತು ಕಾಶ್ಮೀರದ ಸಹೋದರ, ಸಹೋದರಿಯರೊಂದಿಗಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ.