ಅತೃಪ್ತ ಶಾಸಕರ ಅರ್ಜಿ ವಿಚಾರಣೆ: ಸುಪ್ರೀಂನಲ್ಲಿ ಹೀಗಿತ್ತು ಸುದೀರ್ಘ ವಾದ-ಪ್ರತಿವಾದ! - ರೋಹಟಗಿ ವಾದ
ತಮ್ಮ ರಾಜೀನಾಮೆ ಅಂಗೀಕಾರ ಮಾಡಲು ಸ್ಪೀಕರ್ ರಮೇಶ್ ಕುಮಾರ್ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಅತೃಪ್ತ ಶಾಸಕರ ಅರ್ಜಿ ವಿಚಾರಣೆಯ ತೀರ್ಪು ನಾಳೆ ಪ್ರಕಟಗೊಳ್ಳಲಿದೆ.
ನವದೆಹಲಿ: ಸುದೀರ್ಘ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ. ಬೆಳಗ್ಗೆ 10:30ಕ್ಕೆ ಆರಂಭವಾದ ವಾದ- ಪ್ರತಿವಾದ ಸರಿಸುಮಾರು ಮಧ್ಯಾಹ್ನ 3:30 ರವರೆಗೂ ಮುಂದುವರೆಯಿತು.
ಅಂತಿಮವಾಗಿ 3:30ಕ್ಕೆ ವಾದ - ಪ್ರತಿವಾದ ಕೊನೆಗೊಂಡಿತು. ಅಂತಿಮವಾಗಿ ಸುಪ್ರೀಂಕೋರ್ಟ್ ತೀರ್ಪನ್ನು ನಾಳೆಗೆ ಕಾಯ್ದಿರಿಸಿತು. ಈ ನಡುವೆ ಗುರುವಾರ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ಕೋರ್ಟ್ ಮುಂದೆ ಈಗ ಸ್ಪೀಕರ್ ಮೊದಲಿಗೆ ರಾಜೀನಾಮೆ ವಿಚಾರ ಮೊದಲಿಗೆ ತೀರ್ಮಾನ ಮಾಡಬೇಕೋ, ಇಲ್ಲವೇ ಮೊದಲಿಗೆ ಅನರ್ಹತೆ ವಿಚಾರವನ್ನ ಪರಿಗಣನೆಗೆ ತೆಗೆದುಕೊಳ್ಳಬೇಕಾ ಎಂಬ ಬಗ್ಗೆ ತನ್ನ ತೀರ್ಮಾನ ಪ್ರಕಟಿಸಬೇಕಿದೆ. ಇನ್ನು ಅದಕ್ಕಿಂತ ಪೂರ್ವದಲ್ಲಿ ಸ್ಪೀಕರ್ ಅವರ ಸಾಂವಿಧಾನಿಕ ಕಾರ್ಯದಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡಬೇಕೇ ಬೇಡವೇ ಎಂಬ ಬಗ್ಗೆಯೇ ನ್ಯಾಯಮೂರ್ತಿಗಳು ತೀರ್ಮಾನ ಕೈಗೊಳ್ಳಬೇಕಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ತ್ರಿ ಸದಸ್ಯಪೀಠ ಅಂತಿಮವಾಗಿ ತೀರ್ಪನ್ನ ನಾಳೆ ಬೆಳಗ್ಗೆ 10:30ಕ್ಕೆ ಮುಂದೂಡಿತು.
ರೋಹಟಗಿ ವಾದವೇನಿತ್ತು?
- - ಅತೃಪ್ತ ಶಾಸಕರ ಪರ ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ಸುದೀರ್ಘ 1:30 ಗಂಟೆ ಕಾಲ ವಾದ ಮಂಡಿಸಿದರು. ಕೇವಲ ಇಬ್ಬರು ಶಾಸಕರ ವಿರುದ್ಧ ಮಾತ್ರ ಅನರ್ಹತೆ ವಿಷಯ ಸ್ಪೀಕರ್ ಮುಂದಿದೆ ಎಂಬುದನ್ನ ಸಿಜೆಐ ಗಮನಕ್ಕೆ ತಂದರು.ಇದೇ ವೇಳೆ, ಅನರ್ಹತೆ ನೋಟಿಸ್ ನೀಡಿದ್ದ ಉಮೇಶ್ ಜಾಧವ್ ಅವರ ರಾಜೀನಾಮೆ ಪತ್ರವನ್ನ ಇದೇ ಸ್ಪೀಕರ್ ಸ್ಪೀಕಾರ ಮಾಡಿದ ಬಗ್ಗೆಯೂ ಕೋರ್ಟ್ನ ಗಮನ ಸೆಳೆದರು.
- ಅಷ್ಟೇ ಅಲ್ಲ ಆರ್ಟಿಕಲ್ 190 ಹಾಗೂ ಸಂವಿಧಾನದ ಶೆಡ್ಯೂಲ್ 10 ನಿಯಮಗಳು ಬೇರೆ.. ಇವರೆಡು ಒಂದಕ್ಕೊಂದು ಸಂಬಂಧವಿಲ್ಲ. ಅನರ್ಹತೆ ವಿಚಾರಣೆ ರಾಜೀನಾಮೆಯನ್ನ ನೀಡದಂತೆ ತಡೆಯಲು ಬರುವುದಿಲ್ಲ ಎಂದು ರೋಹಟಗಿ ತಮ್ಮ ವಾದ ಮಂಡನೆ ಮಾಡಿದರು.
- ಈ ನಡುವೆ ಬಂಡಾಯ ಎದ್ದು ರಾಜೀನಾಮೆ ನೀಡಿರುವ ಶಾಸಕರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬುದನ್ನು ಅಲ್ಲಗಳೆದರು. ಅವರೆಲ್ಲ ರಾಜೀನಾಮೆ ನೀಡಿ ಜನರ ಬಳಿ ಹೋಗಲು ತೀರ್ಮಾನಿಸಿದ್ದಾರೆ ಎಂಬುದನ್ನ ಸುಪ್ರೀಂ ಪೀಠದ ಗಮನಕ್ಕೆ ತಂದರು. ಸಂವಿಧಾನದ ಆರ್ಟಿಕಲ್ 212 ಪ್ರಕಾರ ಸದನದ ಕಾರ್ಯವಿಧಾನದಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದೆ. ಆದರೆ, ಸ್ಪೀಕರ್ ನಿರ್ಧಾರ ಕೈಗೊಳ್ಳಲು ಸಮಯ ನಿಗದಿ ಮಾಡುವದನ್ನ ಅಥವಾ ನಿರ್ದೇಶನ ನೀಡುವ ಹಕ್ಕನ್ನು ಕಸಿದುಕೊಂಡಿಲ್ಲ ಎಂಬುದನ್ನ ಮುಖ್ಯನ್ಯಾಯಮೂರ್ತಿಗಳ ಗಮನಕ್ಕೆ ತಂದರು.
ಸ್ಪೀಕರ್ ಪರ ಹಾಜರಾದ ಹಿರಿಯ ನ್ಯಾಯವಾದಿ ಮನುಸಿಂಘ್ವಿ ವಾದ ಏನು?
- ಕಳೆದ ಫೆಬ್ರವರಿಯಲ್ಲೇ ಶಾಸಕರ ವಿರುದ್ಧದ ಅನರ್ಹತೆ ಪ್ರಕರಣ ಸ್ಪೀಕರ್ ಮುಂದಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಈಗ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ ಎಂದರು.
- ರಾಜೀನಾಮೆ ಸಲ್ಲಿಸುವ ಶಾಸಕರು ಖುದ್ದಾಗಿ ಸ್ಪೀಕರ್ ಭೇಟಿ ಮಾಡಿ ರಾಜೀನಾಮೆ ಸಲ್ಲಿಕೆ ಮಾಡಬೇಕು. ಅವರು ಮೊದಲು ರಾಜೀನಾಮೆ ಸಲ್ಲಿಸಿದ್ದಾಗ ಸ್ಪೀಕರ್ ಭೇಟಿ ಮಾಡಿರಲಿಲ್ಲ. 11ನೇ ತಾರಿಖಿನಂದು ಖುದ್ದಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ಎಂದರು.
- ಆದರೆ ಈಗಾಗಲೇ ಅನರ್ಹತೆ ವಿಚಾರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ರಾಜೀನಾಮೆ ಸಲ್ಲಿಕೆ ಮಾಡಿರುವುದರಿಂದ ಮೊದಲು ಅನರ್ಹತೆಯನ್ನ ನಿರ್ಧಾರ ಮಾಡಬೇಕಿದೆ ಎಂದರಲ್ಲದೆ, ಸಂವಿಧಾನದ 10ನೇ ಪರಿಚ್ಛೇದ ಹಾಗೂ ಆರ್ಟಿಕಲ್ 190 ಎರಡಕ್ಕೂ ಸಂಬಂಧ ಇದೆ ಇವರೆಡು ಬೇರೆ ಬೇರೆ ಅಲ್ಲ ಎಂದು ವಾದಿಸಿದರು.
- ಈ ಸಂದರ್ಭದಲ್ಲಿ ಮಧ್ಯ ಪ್ರವೇಶಸಿದ ಸಿಜೆಐ, 11ನೇ ತಾರಿಖು 10 ಶಾಸಕರು ಖುದ್ದಾಗಿ ಹಾಜರಾಗಿ ರಾಜೀನಾಮೆ ನೀಡಿದ್ದಾರಲ್ಲ, ಯಾಕೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಪ್ರಶ್ನಿಸಿದರು.
- ಇದಕ್ಕೆ ಉತ್ತರಿಸಿದ ಅಭಿಷೇಕ್ ಮನು ಸಿಂಘ್ವಿ, ನೀವೇ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದ್ದರಿಂದಾಗಿ ರಾಜೀನಾಮೆ ಹಾಗೂ ಅನರ್ಹತೆ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿಲ್ಲ. ಅನುಮತಿ ಕೊಟ್ಟರೆ ನಾಳೆಯೇ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಸಿಎಂ ಪರ ವಕೀಲ ಧವನ್ ವಾದ ಏನು?
- ಸಿಎಂ ಪರ ಹಾಜರಾದ ವಕೀಲ ರಾಜೀವ್ ಧವನ್ ಕೋರ್ಟ್ ಯಾವುದೇ ನಿರ್ದೇಶನ ನೀಡುವಂತಿಲ್ಲ. ಜುಲೈ 11 ರಂದು ನೀವು ಮಧ್ಯಪ್ರವೇಶಿಸಿ ನೀಡಿದ ಆದೇಶವೂ ಸರಿಯಿಲ್ಲ ಎಂದು ವಾದ ಮಂಡನೆ ಮಾಡಿದರು.
- ಸ್ಪೀಕರ್ ಕೆಲಸದಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡುವಂತಿಲ್ಲ. ಯಾವಾಗ ಸ್ಪೀಕರ್ ತೀರ್ಮಾನ ಕೈಗೊಳ್ಳುತ್ತಾರೋ ಆಗ ಕೋರ್ಟ್ ಮಧ್ಯಪ್ರವೇಶಿಸಬಹುದು. ಆದರೆ ಅದಕ್ಕಿಂತ ಮೊದಲು ಅಂದರೆ ವಿಚಾರಣೆ ಹಂತದಲ್ಲಿ ಹಸ್ತಕ್ಷೇಪ ಸರಿಯಲ್ಲ ಎಂದರು. ಹಾಗಂತಾ ತಾವು ಕೋರ್ಟ್ನ ನ್ಯಾಯಾಂಗ ವಿಮರ್ಶೆಯನ್ನ ತಾವು ಪ್ರಶ್ನಿಸುತ್ತಿಲ್ಲ ಎಂದು ಧವನ್ ಸ್ಪಷ್ಟಪಡಿಸಿದರು.
- ಅಷ್ಟೇ ಅಲ್ಲ ಸುಪ್ರೀಂಕೋರ್ಟ್, ಸರ್ಕಾರ ಕೆಡುವುದಕ್ಕೆ ರಚಿಸಿಕೊಂಡ ಗುಂಪಿಗೆ ಮನ್ನಣೆ ನೀಡಿ ವಿಚಾರಣೆಗೆ ಅಂಗೀಕರಿಸಿದಂತಾಗಿದೆ ಎಂದರು. ಅಷ್ಟೇ ಅಲ್ಲ ಸ್ಪೀಕರ್ ಸುಪ್ರೀಂಕೋರ್ಟ್ನ ಡೆಡ್ಲೈನ್ ಯಾಕೆ ಒಪ್ಪಿಕೊಳ್ಳಲಿಲ್ಲ ಎಂಬ ಬಗ್ಗೆಯೂ ಧವನ್ ವಾದ ಮಂಡನೆ ಮಾಡಿದರು.
ಅಂತಿಮವಾಗಿ ವಾದ - ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ಅಂತಿಮವಾಗಿ ನಾಳೆ ಬೆಳಗ್ಗೆ 10:30ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೇಳಿತು.
ಅತೃಪ್ತ ಶಾಸಕರ ಅರ್ಜಿ ವಿಚಾರಣೆ: ಸುಪ್ರೀಂನಲ್ಲಿ ಹೀಗಿತ್ತು ಸುದೀರ್ಘ ವಾದ-ಪ್ರತಿವಾದ!
ನವದೆಹಲಿ: ಸುದೀರ್ಘ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ. ಬೆಳಗ್ಗೆ 10:30ಕ್ಕೆ ಆರಂಭವಾದ ವಾದ- ಪ್ರತಿವಾದ ಸರಿಸುಮಾರು ಮಧ್ಯಾಹ್ನ 3:30 ರವರೆಗೂ ಮುಂದುವರೆಯಿತು.
ಅಂತಿಮವಾಗಿ 3:30ಕ್ಕೆ ವಾದ - ಪ್ರತಿವಾದ ಕೊನೆಗೊಂಡಿತು. ಅಂತಿಮವಾಗಿ ಸುಪ್ರೀಂಕೋರ್ಟ್ ತೀರ್ಪನ್ನು ನಾಳೆಗೆ ಕಾಯ್ದಿರಿಸಿತು. ಈ ನಡುವೆ ಗುರುವಾರ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ಕೋರ್ಟ್ ಮುಂದೆ ಈಗ ಸ್ಪೀಕರ್ ಮೊದಲಿಗೆ ರಾಜೀನಾಮೆ ವಿಚಾರ ಮೊದಲಿಗೆ ತೀರ್ಮಾನ ಮಾಡಬೇಕೋ, ಇಲ್ಲವೇ ಮೊದಲಿಗೆ ಅನರ್ಹತೆ ವಿಚಾರವನ್ನ ಪರಿಗಣನೆಗೆ ತೆಗೆದುಕೊಳ್ಳಬೇಕಾ ಎಂಬ ಬಗ್ಗೆ ತನ್ನ ತೀರ್ಮಾನ ಪ್ರಕಟಿಸಬೇಕಿದೆ. ಇನ್ನು ಅದಕ್ಕಿಂತ ಪೂರ್ವದಲ್ಲಿ ಸ್ಪೀಕರ್ ಅವರ ಸಾಂವಿಧಾನಿಕ ಕಾರ್ಯದಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡಬೇಕೇ ಬೇಡವೇ ಎಂಬ ಬಗ್ಗೆಯೇ ನ್ಯಾಯಮೂರ್ತಿಗಳು ತೀರ್ಮಾನ ಕೈಗೊಳ್ಳಬೇಕಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ತ್ರಿ ಸದಸ್ಯಪೀಠ ಅಂತಿಮವಾಗಿ ತೀರ್ಪನ್ನ ನಾಳೆ ಬೆಳಗ್ಗೆ 10:30ಕ್ಕೆ ಮುಂದೂಡಿತು.
ರೋಹಟಗಿ ವಾದವೇನಿತ್ತು?
ಅತೃಪ್ತ ಶಾಸಕರ ಪರ ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ಸುದೀರ್ಘ 1:30 ಗಂಟೆ ಕಾಲ ವಾದ ಮಂಡಿಸಿದರು. ಕೇವಲ ಇಬ್ಬರು ಶಾಸಕರ ವಿರುದ್ಧ ಮಾತ್ರ ಅನರ್ಹತೆ ವಿಷಯ ಸ್ಪೀಕರ್ ಮುಂದಿದೆ ಎಂಬುದನ್ನ ಸಿಜೆಐ ಗಮನಕ್ಕೆ ತಂದರು.
ಇದೇ ವೇಳೆ, ಅನರ್ಹತೆ ನೋಟಿಸ್ ನೀಡಿದ್ದ ಉಮೇಶ್ ಜಾಧವ್ ಅವರ ರಾಜೀನಾಮೆ ಪತ್ರವನ್ನ ಇದೇ ಸ್ಪೀಕರ್ ಸ್ಪೀಕಾರ ಮಾಡಿದ ಬಗ್ಗೆಯೂ ಕೋರ್ಟ್ನ ಗಮನ ಸೆಳೆದರು.
ಅಷ್ಟೇ ಅಲ್ಲ ಆರ್ಟಿಕಲ್ 190 ಹಾಗೂ ಸಂವಿಧಾನದ ಶೆಡ್ಯೂಲ್ 10 ನಿಯಮಗಳು ಬೇರೆ.. ಇವರೆಡು ಒಂದಕ್ಕೊಂದು ಸಂಬಂಧವಿಲ್ಲ. ಅನರ್ಹತೆ ವಿಚಾರಣೆ ರಾಜೀನಾಮೆಯನ್ನ ನೀಡದಂತೆ ತಡೆಯಲು ಬರುವುದಿಲ್ಲ ಎಂದು ರೋಹಟಗಿ ತಮ್ಮ ವಾದ ಮಂಡನೆ ಮಾಡಿದರು.
ಈ ನಡುವೆ ಬಂಡಾಯ ಎದ್ದು ರಾಜೀನಾಮೆ ನೀಡಿರುವ ಶಾಸಕರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬುದನ್ನು ಅಲ್ಲಗಳೆದರು. ಅವರೆಲ್ಲ ರಾಜೀನಾಮೆ ನೀಡಿ ಜನರ ಬಳಿ ಹೋಗಲು ತೀರ್ಮಾನಿಸಿದ್ದಾರೆ ಎಂಬುದನ್ನ ಸುಪ್ರೀಂ ಪೀಠದ ಗಮನಕ್ಕೆ ತಂದರು. ಸಂವಿಧಾನದ ಆರ್ಟಿಕಲ್ 212 ಪ್ರಕಾರ ಸದನದ ಕಾರ್ಯವಿಧಾನದಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದೆ. ಆದರೆ, ಸ್ಪೀಕರ್ ನಿರ್ಧಾರ ಕೈಗೊಳ್ಳಲು ಸಮಯ ನಿಗದಿ ಮಾಡುವದನ್ನ ಅಥವಾ ನಿರ್ದೇಶನ ನೀಡುವ ಹಕ್ಕನ್ನು ಕಸಿದುಕೊಂಡಿಲ್ಲ ಎಂಬುದನ್ನ ಮುಖ್ಯನ್ಯಾಯಮೂರ್ತಿಗಳ ಗಮನಕ್ಕೆ ತಂದರು.
ಸ್ಪೀಕರ್ ಪರ ಹಾಜರಾದ ಹಿರಿಯ ನ್ಯಾಯವಾದಿ ಮನುಸಿಂಘ್ವಿ ವಾದ ಏನು?
ಕಳೆದ ಫೆಬ್ರವರಿಯಲ್ಲೇ ಶಾಸಕರ ವಿರುದ್ಧದ ಅನರ್ಹತೆ ಪ್ರಕರಣ ಸ್ಪೀಕರ್ ಮುಂದಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಈಗ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ ಎಂದರು.
ರಾಜೀನಾಮೆ ಸಲ್ಲಿಸುವ ಶಾಸಕರು ಖುದ್ದಾಗಿ ಸ್ಪೀಕರ್ ಭೇಟಿ ಮಾಡಿ ರಾಜೀನಾಮೆ ಸಲ್ಲಿಕೆ ಮಾಡಬೇಕು. ಅವರು ಮೊದಲು ರಾಜೀನಾಮೆ ಸಲ್ಲಿಸಿದ್ದಾಗ ಸ್ಪೀಕರ್ ಭೇಟಿ ಮಾಡಿರಲಿಲ್ಲ. 11ನೇ ತಾರಿಖಿನಂದು ಖುದ್ದಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ಎಂದರು.
ಆದರೆ ಈಗಾಗಲೇ ಅನರ್ಹತೆ ವಿಚಾರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ರಾಜೀನಾಮೆ ಸಲ್ಲಿಕೆ ಮಾಡಿರುವುದರಿಂದ ಮೊದಲು ಅನರ್ಹತೆಯನ್ನ ನಿರ್ಧಾರ ಮಾಡಬೇಕಿದೆ ಎಂದರಲ್ಲದೆ, ಸಂವಿಧಾನದ 10ನೇ ಪರಿಚ್ಛೇದ ಹಾಗೂ ಆರ್ಟಿಕಲ್ 190 ಎರಡಕ್ಕೂ ಸಂಬಂಧ ಇದೆ ಇವರೆಡು ಬೇರೆ ಬೇರೆ ಅಲ್ಲ ಎಂದು ವಾದಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಸಿದ ಸಿಜೆಐ, 11ನೇ ತಾರಿಖು 10 ಶಾಸಕರು ಖುದ್ದಾಗಿ ಹಾಜರಾಗಿ ರಾಜೀನಾಮೆ ನೀಡಿದ್ದಾರಲ್ಲ, ಯಾಕೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಭಿಷೇಕ್ ಮನು ಸಿಂಘ್ವಿ, ನೀವೇ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದ್ದರಿಂದಾಗಿ ರಾಜೀನಾಮೆ ಹಾಗೂ ಅನರ್ಹತೆ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿಲ್ಲ. ಅನುಮತಿ ಕೊಟ್ಟರೆ ನಾಳೆಯೇ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಸಿಎಂ ಪರ ವಕೀಲ ಧವನ್ ವಾದ ಏನು?
ಸಿಎಂ ಪರ ಹಾಜರಾದ ವಕೀಲ ರಾಜೀವ್ ಧವನ್ ಕೋರ್ಟ್ ಯಾವುದೇ ನಿರ್ದೇಶನ ನೀಡುವಂತಿಲ್ಲ. ಜುಲೈ 11 ರಂದು ನೀವು ಮಧ್ಯಪ್ರವೇಶಿಸಿ ನೀಡಿದ ಆದೇಶವೂ ಸರಿಯಿಲ್ಲ ಎಂದು ವಾದ ಮಂಡನೆ ಮಾಡಿದರು.
ಸ್ಪೀಕರ್ ಕೆಲಸದಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡುವಂತಿಲ್ಲ. ಯಾವಾಗ ಸ್ಪೀಕರ್ ತೀರ್ಮಾನ ಕೈಗೊಳ್ಳುತ್ತಾರೋ ಆಗ ಕೋರ್ಟ್ ಮಧ್ಯಪ್ರವೇಶಿಸಬಹುದು. ಆದರೆ ಅದಕ್ಕಿಂತ ಮೊದಲು ಅಂದರೆ ವಿಚಾರಣೆ ಹಂತದಲ್ಲಿ ಹಸ್ತಕ್ಷೇಪ ಸರಿಯಲ್ಲ ಎಂದರು. ಹಾಗಂತಾ ತಾವು ಕೋರ್ಟ್ನ ನ್ಯಾಯಾಂಗ ವಿಮರ್ಶೆಯನ್ನ ತಾವು ಪ್ರಶ್ನಿಸುತ್ತಿಲ್ಲ ಎಂದು ಧವನ್ ಸ್ಪಷ್ಟಪಡಿಸಿದರು.
ಅಷ್ಟೇ ಅಲ್ಲ ಸುಪ್ರೀಂಕೋರ್ಟ್, ಸರ್ಕಾರ ಕೆಡುವುದಕ್ಕೆ ರಚಿಸಿಕೊಂಡ ಗುಂಪಿಗೆ ಮನ್ನಣೆ ನೀಡಿ ವಿಚಾರಣೆಗೆ ಅಂಗೀಕರಿಸಿದಂತಾಗಿದೆ ಎಂದರು. ಅಷ್ಟೇ ಅಲ್ಲ ಸ್ಪೀಕರ್ ಸುಪ್ರೀಂಕೋರ್ಟ್ನ ಡೆಡ್ಲೈನ್ ಯಾಕೆ ಒಪ್ಪಿಕೊಳ್ಳಲಿಲ್ಲ ಎಂಬ ಬಗ್ಗೆಯೂ ಧವನ್ ವಾದ ಮಂಡನೆ ಮಾಡಿದರು.
ಅಂತಿಮವಾಗಿ ವಾದ - ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ಅಂತಿಮವಾಗಿ ನಾಳೆ ಬೆಳಗ್ಗೆ 10:30ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೇಳಿತು.
Conclusion: