ETV Bharat / bharat

'ಕೇಂದ್ರ ಸರ್ಕಾರ ನನ್ನ ಅಧಿಕೃತ ನಿವಾಸ ಕಸಿದುಕೊಂಡಿದೆ': ದೆಹಲಿ ಸಿಎಂ ಅತಿಶಿ ಆರೋಪ - ATISHI ACCUSES BJP

ಕೇಂದ್ರದ ಬಿಜೆಪಿ ಸರ್ಕಾರ ತನಗೆ ಅಧಿಕೃತ ಮುಖ್ಯಮಂತ್ರಿ ನಿವಾಸ ನೀಡುತ್ತಿಲ್ಲ ಎಂದು ದೆಹಲಿ ಸಿಎಂ ಅತಿಶಿ ಆರೋಪಿಸಿದ್ದಾರೆ.

ದೆಹಲಿ ಸಿಎಂ ಅತಿಶಿ
ದೆಹಲಿ ಸಿಎಂ ಅತಿಶಿ (ians)
author img

By ETV Bharat Karnataka Team

Published : 24 hours ago

ನವದೆಹಲಿ: ವಿಧಾನಸಭಾ ಚುನಾವಣೆ ಘೋಷಣೆಗೆ ಒಂದು ದಿನ ಮುಂಚಿತವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನನ್ನು ಅಧಿಕೃತ ಮುಖ್ಯಮಂತ್ರಿ ನಿವಾಸದಿಂದ ಹೊರಹಾಕಿದೆ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಮಂಗಳವಾರ ಆರೋಪಿಸಿದ್ದಾರೆ.

"ಇಂದು ದೆಹಲಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಆದರೆ ಅದಕ್ಕೂ ಮುನ್ನ ಕಳೆದ ರಾತ್ರಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ನನ್ನನ್ನು ಸಿಎಂ ಅಧಿಕೃತ ನಿವಾಸದಿಂದ ಹೊರಹಾಕಿದೆ. ಕೇವಲ ಒಂದು ಪತ್ರ ಕಳುಹಿಸಿ ಅವರು ನನ್ನ ಮನೆ ಮಂಜೂರಿಯನ್ನು ರದ್ದುಗೊಳಿಸಿದ್ದಾರೆ. ಒಬ್ಬ ಚುನಾಯಿತ ಸರ್ಕಾರದ ಚುನಾಯಿತ ಮುಖ್ಯಮಂತ್ರಿಯ ನಿವಾಸವನ್ನು ಅವರು ಕಸಿದುಕೊಂಡಿದ್ದಾರೆ" ಎಂದು ಅತಿಶಿ ಪಿಟಿಐಗೆ ತಿಳಿಸಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮುಖ್ಯಮಂತ್ರಿ ಅತಿಶಿ, "ಅವರು ಮೂರು ತಿಂಗಳ ಹಿಂದೆಯೂ ಇದೇ ಕೆಲಸ ಮಾಡಿದ್ದರು. ನಾನು ಸಿಎಂ ಆಗಿ ಆಯ್ಕೆಯಾದಾಗ ನನ್ನ ಮತ್ತು ನನ್ನ ಕುಟುಂಬದ ಆಸ್ತಿಪಾಸ್ತಿಗಳನ್ನು ಬೀದಿಗೆ ಎಸೆಯಲಾಯಿತು. ನಮ್ಮ ಮನೆಗಳನ್ನು ಕಸಿದುಕೊಳ್ಳುವ ಮೂಲಕ, ನಮ್ಮನ್ನು ನಿಂದಿಸುವ ಮೂಲಕ ಮತ್ತು ನಮ್ಮ ಕುಟುಂಬದ ಬಗ್ಗೆ ಕೀಳುಮಟ್ಟದ ಹೇಳಿಕೆಗಳನ್ನು ನೀಡುವ ಮೂಲಕ ಅವರು ನಾವು ಕೆಲಸ ಮಾಡದಂತೆ ತಡೆಯಬಹುದು ಅಂದುಕೊಂಡಿದ್ದಾರೆ. ಆದರೆ, ಅವರು ನಮ್ಮ ಮನೆಯನ್ನು ಕಸಿದುಕೊಂಡರೂ ನಾವು ಜನರಿಗಾಗಿ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ" ಎಂದರು.

ಅತಿಶಿ ಆರೋಪಗಳನ್ನು ಅವರ ಕ್ಯಾಬಿನೆಟ್ ಸಚಿವ ಸೌರಭ್ ಭಾರದ್ವಾಜ್ ಬೆಂಬಲಿಸಿದ್ದಾರೆ. "ಬಿಜೆಪಿಗೆ ದೆಹಲಿಯ ಜನರಿಗಾಗಿ ಕೆಲಸ ಮಾಡುವ ಇಚ್ಛೆ ಇಲ್ಲ. ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆಯೇ ಅಥವಾ ಜನರಿಗೆ ವಿದ್ಯುತ್ ಸಿಗುತ್ತಿದೆಯೇ ಎಂಬ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಎಎಪಿ ನಾಯಕರ ವಿರುದ್ಧ ಏನಾದರೂ ಮಾಡುತ್ತಿರುವುದೇ ಅವರ ಕೆಲಸವಾಗಿದೆ" ಎಂದು ಅವರು ಹೇಳಿದ್ದಾರೆ.

ಅತಿಶಿ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, "ದೆಹಲಿ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ 11 ಅಕ್ಟೋಬರ್ 2024 ರಂದು ಶೀಶ್ ಮಹಲ್ ಮಂಜೂರು ಮಾಡಲಾಗಿತ್ತು. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ನೋಯಿಸಲು ಬಯಸದ ಕಾರಣ ಅವರು ಆ ಮನೆಗೆ ಶಿಫ್ಟ್ ಆಗಲಿಲ್ಲ. ಹೀಗಾಗಿ ಆ ಮನೆಯ ಹಂಚಿಕೆಯನ್ನು ಹಿಂಪಡೆಯಲಾಯಿತು. ಅದರ ಬದಲಿಗೆ ಬೇರೆ ಎರಡು ಬಂಗಲೆಗಳ ಆಯ್ಕೆಯನ್ನು ಅವರ ಮುಂದಿಡಲಾಗಿದೆ" ಎಂದು ಹೇಳಿದರು.

ಇದನ್ನೂ ಓದಿ : ಜೈಲಿನಿಂದ ಬಿಡುಗಡೆಯಾದ ಪ್ರಶಾಂತ್ ಕಿಶೋರ್​ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು - PRASHANT KISHOR HOSPITALIZED

ETV Bharat Logo

Copyright © 2025 Ushodaya Enterprises Pvt. Ltd., All Rights Reserved.