ETV Bharat / bharat

8 ಪೊಲೀಸರ ಹತ್ಯೆ ಪ್ರಕರಣ: ರೌಡಿಶೀಟರ್​ ವಿಕಾಸ್​ ದುಬೆ ನಾನಾ ಅವತಾರದ ಫೋಟೋ ಬಿಡುಗಡೆ - ರೌಡಿಶೀಟರ್​ ವಿಕಾಸ್​ ದುಬೆ

ಪೊಲೀಸರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ದುಬೆ ಇರುವ ಸ್ಥಳವನ್ನ ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಈ ನಡುವೆ ಮೋಸ್ಟ್​ ವಾಂಟೆಡ್​​ ಕ್ರಿಮಿನಲ್​ ಬಂಧನಕ್ಕಾಗಿ ಆತನ ಸುಳಿವು ನೀಡಿದವರಿಗೆ ಪೊಲೀಸ್ ಇಲಾಖೆ 2.5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ.

Kanpur Police release pictures of accomplices of Vikas Dubey
8 ಪೊಲೀಸರ ಹತ್ಯೆ ಪ್ರಕರಣ
author img

By

Published : Jul 8, 2020, 6:55 AM IST

ಕಾನ್ಪುರ (ಉತ್ತರ ಪ್ರದೇಶ): 8 ಪೊಲೀಸರ ಹತ್ಯೆಯ ರೂವಾರಿ ಹಾಗೂ ಪ್ರಮುಖ ಆರೋಪಿ ವಿಕಾಸ್​ ದುಬೆ ಬಂಧನಕ್ಕೆ ಉತ್ತರ ಪ್ರದೇಶ ಪೊಲೀಸರು ಸತತ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಆದರೆ, ಆತನ ಸುಳಿವು ಸಿಗುತ್ತಿಲ್ಲ. ಇತ್ತ ಪೊಲೀಸರು ಮಂಗಳವಾರ ಆತನ ನಾನಾ ಅವತಾರದ ಫೋಟೋಗಳನ್ನ ಬಿಡುಗಡೆ ಮಾಡಿದ್ದಾರೆ.

ಈ ನಡುವೆ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ವಿಕಾಸ ದುಬೆ ಆಪ್ತ ಸಹಾಯಕ ಜೈ ಬಾಜಪೇಯಿ ನಿವಾಸ ಮೇಲೆ ಕಾನ್ಪುರ ಪೊಲೀಸರು ದಾಳಿ ನಡೆಸಿದ್ದಾರೆ. ಏತನ್ಮಧ್ಯೆ, ಕಾನ್ಪುರ್ ಎನ್​​​ಕೌಂಟರ್​​ಗೆ ಸಂಬಂಧಿಸಿದಂತೆ ಚೌಬೆಪುರ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿಗಳನ್ನ ವಿಶೇಷ ತನಿಖಾ ದಳ ವಿಚಾರಣೆಗೆ ಒಳಪಡಿಸಿದೆ ಎಂದು ಕಾನ್ಪುರ್ ಐಜಿಪಿ ಮೋಹಿತ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

Kanpur Police release pictures of accomplices of Vikas Dubey
ರೌಡಿಶೀಟರ್​ ವಿಕಾಸ್​ ದುಬೆ ನಾನಾ ಅವತಾರದ ಫೋಟೋ ಬಿಡುಗಡೆ

ಇನ್ನು ದುಬೆ ಬಂಧನಕ್ಕೆ ತೆರಳಿದ್ದಾಗ ಇದ್ದಕ್ಕಿದ್ದಂತೆ ಕಣ್ಮರೆ ಆಗಿದ್ದ ಚೌಬೆಪುರ ಪೊಲೀಸ್ ಠಾಣೆಯ ಅಧಿಕಾರಿ ವಿನಯ್ ತಿವಾರಿ ಅವರನ್ನ ಸಹ ಅಮಾನತು ಮಾಡಲಾಗಿದೆ. 8 ಪೊಲೀಸರ ಎನ್​​ಕೌಂಟರ್​​​​ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕಾಸ್​ ದುಬೆ ಬಂಧನಕ್ಕಾಗಿ ಸುಮಾರು 40 ತಂಡಗಳು ಸತತ ಕಾರ್ಯಾಚರಣೆ ನಡೆಸುತ್ತಿವೆ.

ಘಟನೆ ನಡೆದು 80 ಗಂಟೆಗಳ ನಂತರವೂ ಯುಪಿ ಪೊಲೀಸರು ಮತ್ತು ಎಟಿಎಸ್ ತಂಡಕ್ಕೆ ದುಬೆ ಇರುವ ಸ್ಥಳವನ್ನ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ನಡುವೆ ಮೋಸ್ಟ್​ ವಾಂಟೆಂಡ್​ ಕ್ರಿಮಿನಲ್​ ಬಂಧನಕ್ಕಾಗಿ ಆತನ ಸುಳಿವು ನೀಡಿದವರಿಗೆ ಪೊಲೀಸ್ ಇಲಾಖೆ 2.5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ. ಈ ಹಿಂದೆ 50 ಸಾವಿರ ವಿದ್ದ ಬಹುಮಾನದ ಮೊತ್ತವನ್ನ 2.5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.