ETV Bharat / bharat

ಬಿಜೆಪಿ ಮುಖಂಡನ ಸಂಬಂಧಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ; 'ಕೈ' ಕಟ್​​

author img

By

Published : Dec 16, 2020, 5:47 PM IST

ಹಳೇ ದ್ವೇಷದ ಹಿನ್ನೆಲೆ ರಾಜಕೀಯ ಮುಖಂಡನ ಸಂಬಂಧಿಯೊಬ್ಬನನ್ನು ಅಪಹರಿಸಿದ ದುಷ್ಕರ್ಮಿಗಳು ಆತನನ್ನು ಥಳಿಸಿದ್ದಾರೆ. ಹಲ್ಲೆ ಬಳಿಕ ರೈಲು ಹಳಿಯ ಮೇಲೆ ಬಿಸಾಕಿ ಹೋಗಿದ್ದಾರೆ. ಇದರಿಂದ ವ್ಯಕ್ತಿಯ ಒಂದು ಕೈ ತುಂಡಾಗಿದೆ.

Kanpur: BJP leader's nephew thrown in front of train, hands cut
ಥಳಿತಕ್ಕೊಳಗಾದ ವ್ಯಕ್ತಿ

ಕಾನ್ಪುರ: ಬಿಜೆಪಿ ಮುಖಂಡನ ಸಂಬಂಧಿಯೊಬ್ಬನನ್ನು ಅಪಹರಿಸಿದ ಅಪಹರಣಕಾರರು ಆತನನ್ನು ಮನಬಂದಂತೆ ಥಳಿಸಿ ರೈಲ್ವೆ ಹಳಿ ಕೆಳಗೆ ಬಿಸಾಕಿ ಹೋದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ರೈಲು ಆತನ ಮೇಲೆ ಹರಿದು ಹೋಗಿದ್ದರಿಂದ ಆತನ ಎಡಗೈ ತುಂಡಾಗಿದೆ.

ಥಳಿತಕ್ಕೊಳಗಾದ ವ್ಯಕ್ತಿಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮೇಶ್ ದಿವೇದಿ ಅವರ ಸೋದರಳಿಯ ಲಲಿತ್‌ ಎಂದು ಗುರುತಿಸಲಾಗಿದೆ. ಸದ್ಯ ಆತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಅಪಹರಣ ಹಾಗೂ ಕೊಲೆ ಸಂಚು ಆರೋಪದ ಹಿನ್ನೆಲೆ ಉತ್ತರ ಪ್ರದೇಶದ ಪೊಲೀಸರು ಕೆಲವು ಜನರ ವಿರುದ್ಧ ಪ್ರಕರಣ ದಾಖಲಿಕೊಂಡಿದ್ದಾರೆ. ಕಾನ್ಪುರ - ಬಂಡಾ ರೈಲ್ವೆ ಹಳಿ ಮೇಲೆ ಸರಕು ಸಾಗಣೆ ರೈಲಿನ ಮುಂದೆ ಎಸೆದು ಹೋಗಿದ್ದರಿಂದ ಆತನ ಎಡಗೈ ತುಂಡಾಗಿದೆ ಎನ್ನಲಾಗುತ್ತಿದೆ. ಘಾಟಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ : ಒಂಟಿ ಮಹಿಳೆಯ ಮನೆಗೆ ನುಗ್ಗಿ ಕೈ, ಕಾಲು ಕಟ್ಟಿ ಹಲ್ಲೆ ನಡೆಸಿ ದರೋಡೆಗೆ ಯತ್ನ

ಹಳೇ ದ್ವೇಷದ ಹಿನ್ನೆಲೆ ದುಷ್ಕರ್ಮಿಗಳು ಲಲಿತ್ ಅವನನ್ನು ಥಳಿಸಿ, ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ರೈಲ್ವೆ ಹಳಿಗಳಲ್ಲಿ ಎಸೆದಿದ್ದರು. ಈ ವೇಳೆ, ಅವರ ಮೇಲೆ ರೈಲು ಹರಿದು ಹೋಗಿದ್ದರಿಂದ ಆತನ ಎಡಗೈ ತುಂಡಾಗಿದೆ ಎಂದು ಸ್ಥಳೀಯ ಪೊಲೀಸರು ಶಂಕಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.