ETV Bharat / bharat

ಪ್ಲೀಸ್​​​ ನನ್ನ ಡ್ರಗ್ಸ್​ ಟೆಸ್ಟ್​ ಮಾಡ್ಸಿ, ಆರೋಪ ಸಾಬೀತಾದ್ರೆ ಶಾಶ್ವತವಾಗಿ ಮುಂಬೈ ತೊರೆಯುವೆ: ಕಂಗನಾ

ನನ್ನ ಮೇಲೆ ಕೇಳಿ ಬಂದಿರುವ ಆರೋಪ ಸಾಬೀತುಗೊಂಡರೆ ಶಾಶ್ವತವಾಗಿ ಮುಂಬೈ ತೊರೆಯುವೆ ಎಂದು ಬಾಲಿವುಡ್​ ನಟಿ ಕಂಗನಾ ರಣಾವತ್​ ಹೇಳಿಕೆ ನೀಡಿದ್ದಾರೆ.

Kangana Ranaut
Kangana Ranaut
author img

By

Published : Sep 8, 2020, 4:49 PM IST

Updated : Sep 8, 2020, 6:43 PM IST

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್​ ಮೇಲೆ ಇದೀಗ ಡ್ರಗ್ಸ್​​ ಸೇವನೆ ಮಾಡಿರುವ ಗಂಭೀರ ಆರೋಪ ಮಾಡಲಾಗಿದ್ದು, ಇದೇ ವಿಚಾರವಾಗಿ ಮಾತನಾಡಿರುವ ನಟಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​​ಮುಖ್​ ಅವರಿಗೆ ಚಾಲೆಂಜ್​​ ಮಾಡಿದ್ದಾರೆ.

ಕಂಗನಾ ಡ್ರಗ್ಸ್​ ಸೇವಿಸಿದ ಆರೋಪ: ತನಿಖೆ ನಡೆಸಲಾಗುವುದು ಎಂದ ಅನಿಲ್​ ದೇಶ್​​ಮುಖ್​!

ದಯವಿಟ್ಟು ನನ್ನ ಡ್ರಗ್ಸ್​​ ಪರೀಕ್ಷೆಗಳನ್ನ ಮಾಡಿ, ನಾನು ಡ್ರಗ್ಸ್​ ತೆಗೆದುಕೊಂಡಿರುವುದು ಸಾಬೀತುಗೊಂಡರೆ ಹಾಗೂ ಡ್ರಗ್ಸ್​ ಪೆಡ್ಲರ್​​ಗಳೊಂದಿಗೆ ಯಾವುದಾದರೂ ಲಿಂಕ್​​ ಹೊಂದಿರುವುದು ನನ್ನ ದೂರವಾಣಿ ಕರೆ ದಾಖಲೆ ಮೂಲಕ ಗೊತ್ತಾದರೆ ಶಾಶ್ವತವಾಗಿ ಮುಂಬೈ ತೊರೆಯುತ್ತೇನೆ ಎಂದು ಗೃಹ ಸಚಿವ ಅನಿಖ್​ ದೇಶ್​​ಮುಖ್​​ ಅವರಿಗೆ ಚಾಲೆಂಜ್​ ಹಾಕಿದ್ದಾರೆ. ನಿಮ್ಮನ್ನು ಭೇಟಿಯಾಗಲು ನಾನು ಎದುರು ನೋಡುತ್ತಿದ್ದೇನೆ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

  • I am more than happy to oblige Mumbai Police & Home Minister Anil Deshmukh. Please do my drug tests, investigate my call records if you find any links to drug peddlers ever I will accept my mistake and leave Mumbai forever, looking forward to meeting you: Kangana Ranaut https://t.co/yhv6aF3UEo pic.twitter.com/pM0WTOSFV5

    — ANI (@ANI) September 8, 2020 " class="align-text-top noRightClick twitterSection" data=" ">

ಕಂಗನಾ ರಣಾವತ್​ ನಾಳೆ ಮುಂಬೈಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಈಗಾಗಲೇ Y ಮಟ್ಟದ ಭದ್ರತೆ ನೀಡಲಾಗಿದೆ.

ಇದಕ್ಕೂ ಮೊದಲು ಮಾತನಾಡಿದ್ದ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​, ಕಂಗನಾ ಡ್ರಗ್ಸ್​ ಸೇವಿಸಿದ ಆರೋಪದ ಮೇಲೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದಿದ್ದರು. ಅಭಯನ್​ ಸುಮನ್​​ ಅವರು ನಟಿಯ ಮೇಲೆ ಗಂಭೀರ ಆರೋಪ ಮಾಡಿದ್ದರಿಂದ ತನಿಖೆ ನಡೆಸಲು ನಿರ್ಧರಿಸಲಾಗಿದ್ದು, ಕಂಗನಾ ಡ್ರಗ್ಸ್​ ತೆಗೆದುಕೊಳ್ಳುವುದಾಗಿ ಹಾಗೂ ತಮಗೂ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.

Last Updated : Sep 8, 2020, 6:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.