ETV Bharat / bharat

ರಾಜಸ್ಥಾನ ರಾಜಕೀಯ ಬಿಕ್ಕಟ್ಟು : ಬಿಜೆಪಿ ಕಾರ್ಯದರ್ಶಿ ಏನಂದ್ರು ಗೊತ್ತಾ..? - ಬಿಜೆಪಿ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಹೇಳಿಕೆ

ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್‌ನಲ್ಲಿ ಪ್ರತಿಭೆಗಳಿಗೆ ಪ್ರೋತ್ಸಾಹ ಇಲ್ಲ ಎಂದಿದ್ದಾರೆ.

kailash vijayvargiya in indore
ಬಿಜೆಪಿ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ
author img

By

Published : Jul 13, 2020, 1:37 PM IST

ಇಂದೋರ್( ಮಧ್ಯೆಪ್ರದೇಶ) : ಕಾಂಗ್ರೆಸ್​ ನಾಯಕರಿಗೆ ತಮ್ಮದೇ ಶಾಸಕರ ಮೇಲೆ ನಿಯಂತ್ರಣವಿಲ್ಲ. ಹೀಗಾಗಿ ಜನರು ಕಾಂಗ್ರೆಸ್​ನಿಂದ ಓಡಿ ಹೋಗುತ್ತಿದ್ದಾರೆ ಎಂದು ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ

ಜ್ಯೋತಿರಾಧಿತ್ಯ ಸಿಂಧಿಯಾ ಪರವಹಿಸಿ ಮಾತನಾಡಿದ ವಿಜಯವರ್ಗಿಯಾ, ಕಾಂಗ್ರೆಸ್‌ನಲ್ಲಿ ಪ್ರತಿಭೆಗಳಿಗೆ ಪ್ರೋತ್ಸಾಹ ಇಲ್ಲ. ರಾಹುಲ್ ಗಾಂಧಿ ಚೀನಾ ಘರ್ಷಣೆಯ ಕುರಿತು ಕೇಳುತ್ತಿರುವ ಪ್ರಶ್ನೆಗಳಿಂದಲೇ ಅವರ ತಿಳಿವಳಿಕೆ ಬಗ್ಗೆ ಗೊತ್ತಾಗುತ್ತದೆ. ಯಾವುದೇ ಸಂವೇದನಾಶೀಲ ನಾಯಕರು ಕಾಂಗ್ರೆಸ್‌ನಲ್ಲಿರಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಕೊರೊನಾ ನಿಯಂತ್ರಿಸುವಲ್ಲಿ ಮಮತಾ ಸರ್ಕಾರ ವಿಫಲವಾಗಿದೆ:

ಪಶ್ಚಿಮ ಬಂಗಾಳದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ವಿಫಲವಾಗಿದೆ. ಆಸ್ಪತ್ರೆಗಳಲ್ಲಿ ಸ್ವಚ್ಚತೆ ಸೇರಿದಂತೆ ಯಾವುದೇ ರೀತಿಯ ವ್ಯವಸ್ಥೆಗಳಿಲ್ಲ. ಕೇಂದ್ರ ಸರ್ಕಾರ ಕಳುಹಿಸಿದ ಹಣವೂ ಟಿಎಂಸಿ ಕಾರ್ಯಕರ್ತರ ನಡುವೆ ಹಂಚಿಕೆಯಾಗಿದೆ. ಹೀಗಾಗಿ ಟಿಎಂಸಿ ಕಾರ್ಯಕರ್ತರು ತಮ್ಮ ತಮ್ಮ ನಡುವೆ ಜಗಳವಾಡುತ್ತಿದ್ದಾರೆ ಎಂದು ಕೈಲಾಶ್ ವಿಜಯವರ್ಗಿಯ ಆರೋಪಿಸಿದ್ದಾರೆ.

ಮಧ್ಯಪ್ರದೇಶದ ಉಪಚುನಾವಣೆಯಲ್ಲಿ ಬಿಜೆಪಿಯ ಗೆಲುವು ಸಾಧಿಸಲಿದೆ. ಮಾಜಿ ಸಿಎಂ ಕಮಲ್ ನಾಥ್ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ ಎಂದು ಹೇಳಿದರು. ಮಧ್ಯಪ್ರದೇಶ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ, ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ರಮೇಶ್ ಮೆಂಡೋಲಾ ಅವರಿಗೆ ನೀಡಲಾಗಿದೆ. ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಕೈಯಲ್ಲಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.