ETV Bharat / bharat

ಕೊರೊನಾ ವೈರಸ್​ನಿಂದ ಬಳಲುತ್ತಿದ್ದ ಲೋಕಪಾಲ್ ಸದಸ್ಯ ನ್ಯಾ. ಎ.ಕೆ. ತ್ರಿಪಾಠಿ ನಿಧನ - ನಿಧನ

ಛತ್ತೀಸಗಢ ಹೈಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎ.ಕೆ. ತ್ರಿಪಾಠಿ, ಕೊರೊನಾ ಸೋಂಕಿನ ಕಾರಣದಿಂದ ದೆಹಲಿಯ ಏಮ್ಸ್​ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ತೀರಾ ಗಂಭೀರವಾದ ಹಿನ್ನೆಲೆಯಲ್ಲಿ ಅವರಿಗೆ ವೆಂಟಿಲೇಟರ್​ ಅಳವಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರಾತ್ರಿ 8.45 ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.

Justice AK Tripathi
Justice AK Tripathi
author img

By

Published : May 3, 2020, 12:08 AM IST

Updated : May 3, 2020, 12:33 AM IST

ನವದೆಹಲಿ: ಲೋಕಪಾಲ್​ ಸದಸ್ಯ, ನ್ಯಾಯಮೂರ್ತಿ (ನಿವೃತ್ತ) ಎ.ಕೆ. ತ್ರಿಪಾಠಿ ಕೊರೊನಾ ವೈರಸ್​ ಸೋಂಕಿನಿಂದ ಮೃತಪಟ್ಟಿದ್ದಾರೆ. 62 ವರ್ಷದ ತ್ರಿಪಾಠಿ ಅವರು ದೆಹಲಿಯ ಏಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಛತ್ತೀಸಗಢ ಹೈಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎ.ಕೆ. ತ್ರಿಪಾಠಿ, ಕೊರೊನಾ ಸೋಂಕಿನ ಕಾರಣದಿಂದ ದೆಹಲಿಯ ಏಮ್ಸ್​ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ತೀರಾ ಗಂಭೀರವಾದ ಹಿನ್ನೆಲೆಯಲ್ಲಿ ಅವರಿಗೆ ವೆಂಟಿಲೇಟರ್​ ಅಳವಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರಾತ್ರಿ 8.45 ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ. ನ್ಯಾಯಮೂರ್ತಿ ತ್ರಿಪಾಠಿ ಲೋಕಪಾಲ್​ ಮಂಡಳಿಯ ಸದಸ್ಯರೂ ಆಗಿದ್ದರು.

ಕೊರೊನಾ ವೈರಸ್​ ಸೋಂಕಿತರಾಗಿದ್ದ ತ್ರಿಪಾಠಿಯವರ ಮಗಳು ಹಾಗೂ ಮನೆಕೆಲಸದ ಸಿಬ್ಬಂದಿಯೊಬ್ಬ ಸೋಂಕಿನಿಂದ ಗುಣಮುಖರಾಗಿದ್ದಾರೆ.

Last Updated : May 3, 2020, 12:33 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.