ETV Bharat / bharat

ಸ್ಥಿರ ಸಮಾಜಕ್ಕೆ ಭದ್ರ ಬುನಾದಿ: ವಿಶ್ವ ಪರಿಸರ ಸಂರಕ್ಷಣಾ ದಿನ - ಪರಿಸರ ಉಳಿಸಿ

ನಿತ್ಯದ ಜೀವನಕ್ಕೆ ಅಗತ್ಯವಾದ ನೀರು, ಗಾಳಿ, ಮಣ್ಣು, ಖನಿಜ, ಮರ, ಪ್ರಾಣಿ, ಪಕ್ಷಿ, ಆಹಾರ ಮತ್ತು ಖನಿಜಗಳಂತಹ ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಾವೆಲ್ಲರೂ ಅವಲಂಬಿಸಿದ್ದೇವೆ. ಇವೆಲ್ಲವನ್ನೂ ಪ್ರಕೃತಿಗೆ ನಮಗೆ ನಿಸ್ವಾರ್ಥದಿಂದ ಕೊಡುತ್ತಿದೆ. ಆದರೆ, ಮನುಷ್ಯ ಇದನ್ನು ಸದ್ಬಳಕೆ ಮಾಡಿಕೊಳ್ಳದೆ ದುರುಪಯೋಗ ಪಡಿಸಿಕೊಂಡು ಮುಂದಿನ ಜನಾಂಗಕ್ಕೆ ಸಿಗದಂತೆ ನಾಶಪಡಿಸುತ್ತಿದ್ದಾನೆ. ಆದ್ದರಿಂದ, ಪ್ರಕೃತಿ ನಮಗೆ ನೀಡಿದ ಸಂಪನ್ಮೂಲಗಳನ್ನು ಕಾಪಾಡಿಕೊಂಡು ಸ್ವಚ್ಛ ಹಾಗೂ ಆರೋಗ್ಯವಾಗಿ ಇರಿಸಿಕೊಳ್ಳಬೇಕು.

conservation day
ವಿಶ್ವ ಪರಿಸರ ಸಂರಕ್ಷಣಾ ದಿನ
author img

By

Published : Jul 28, 2020, 9:00 PM IST

Updated : Jul 28, 2020, 9:28 PM IST

ಆರೋಗ್ಯಕರವಾದ ಪರಿಸರವು ಸ್ಥಿರ ಮತ್ತು ಉತ್ಪಾದಕ ಸಮಾಜಕ್ಕೆ ಭದ್ರವಾದ ಬುನಾದಿಯಾಗಿದೆ ಎಂದು ವಿಶ್ವ ಪರಿಸರ ಸಂರಕ್ಷಣಾ ದಿನವನ್ನು ಪ್ರತಿ ವರ್ಷ ಜುಲೈ 28ರಂದು ಆಚರಿಸಿಕೊಂಡು ಬರಲಾಗುತ್ತಿದೆ.

ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಳನ್ನು ಸಂರಕ್ಷಿಸಲು ಆರೋಗ್ಯಕರ ವಾತಾವರಣ ಸೃಷ್ಟಿಸುವುದು ನಮ್ಮೆಲ್ಲರ ಅವಶ್ಯಕವಾಗಿದೆ. ಅರಣ್ಯನಾಶ, ಅಕ್ರಮ ವನ್ಯಜೀವಿ ಬೇಟೆ, ಮಾಲಿನ್ಯ ಹೆಚ್ಚಳ, ಪ್ಲಾಸ್ಟಿಕ್ ಮತ್ತು ರಾಸಾಯನಿಕಗಳ ಬಳಕೆಯು ಪ್ರಕೃತಿ ಮೇಲಿನ ದಬ್ಬಾಳಿಕೆಯಾಗಿದೆ.

conservation day
ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ ಮಹತ್ವ

ನಿತ್ಯದ ಜೀವನಕ್ಕೆ ಅಗತ್ಯವಾದ ನೀರು, ಗಾಳಿ, ಮಣ್ಣು, ಖನಿಜ, ಮರ, ಪ್ರಾಣಿ, ಪಕ್ಷಿ, ಆಹಾರ ಮತ್ತು ಖನಿಜಗಳಂತಹ ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಾವೆಲ್ಲರೂ ಅವಲಂಬಿಸಿದ್ದೇವೆ. ಇವೆಲ್ಲವನ್ನೂ ಪ್ರಕೃತಿಗೆ ನಮಗೆ ನಿಸ್ವಾರ್ಥದಿಂದ ಕೊಡುತ್ತಿದೆ. ಆದರೆ, ಮನುಷ್ಯ ಇದನ್ನು ಸದ್ಬಳಕೆ ಮಾಡಿಕೊಳ್ಳದೆ ದುರುಪಯೋಗ ಪಡಿಸಿಕೊಂಡು ಮುಂದಿನ ಜನಾಂಗಕ್ಕೆ ಸಿಗದಂತೆ ನಾಶಪಡಿಸುತ್ತಿದ್ದಾನೆ. ಆದ್ದರಿಂದ, ಪ್ರಕೃತಿ ನಮಗೆ ನೀಡಿದ ಸಂಪನ್ಮೂಲಗಳನ್ನು ಕಾಪಾಡಿಕೊಂಡು ಸ್ವಚ್ಛ ಹಾಗೂ ಆರೋಗ್ಯವಾಗಿ ಇರಿಸಿಕೊಳ್ಳಬೇಕು.

conservation day
ವಿಶ್ವ ಪರಿಸರ ಸಂರಕ್ಷಣಾ ದಿನ

ಕೈಗಾರಿಕಾ ಅಭಿವೃದ್ಧಿ ಮತ್ತು ಇತರ ಹಲವು ಅಂಶಗಳು ಸಹ ಪ್ರಕೃತಿಯ ನಾಶಕ್ಕೆ ಕಾರಣವಾಗಿವೆ. ನಾವು ಏನೇ ಮಾಡಿದರೂ ಅದು ಜಗತ್ತಿನ ಮೇಲೆ ಪರಿಣಾಮ ಬೀರುತ್ತದೆ. ಪ್ರಕೃತಿಯ ಸಂರಕ್ಷಣೆ ಬಹಳ ಅವಶ್ಯಕವಾಗಿದೆ. ವಿಜ್ಞಾನಿಗಳು ಸಹ ಮುಂದಿನ ದಿನಗಳಲ್ಲಿ ಸಾಮೂಹಿಕ ಅಳಿವಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನು ನಾವೆಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ, ಪ್ರಕೃತಿಯ ಬಗ್ಗೆ ಹಲವು ಗಣ್ಯರು ಸಾಕ್ಷ್ಯಚಿತ್ರಗಳನ್ನು ಮಾಡಿ ಸಂಪನ್ಮೂಲಗಳು ಹೇಗೆಲ್ಲ ವ್ಯರ್ಥವಾಗುತ್ತಿವೆ ಎಂದು ತೋರಿಸುತ್ತಿದ್ದಾರೆ.

ಜಾಗತಿಕ ತಾಪಮಾನದ ಉಷ್ಣತೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಬಿರುಗಾಳಿ, ಚಂಡಮಾರುತ, ಸಮುದ್ರದ ಮಟ್ಟದಲ್ಲಿ ಏರಿಕೆ, ಸಿಹಿನೀರಿನ ಹಿಮನದಿಗಳು ಕರಗುತ್ತಿದ್ದು ಅದು ಜೀವಸಂಕುಲಕ್ಕೆ ಅಪಾಯವನ್ನು ಉಂಟುಮಾಡುತ್ತಿದೆ. ಜಾಗತಿಕವಾಗಿ ಏರುತ್ತಿರುವ ಜನಸಂಖ್ಯೆ, ಪರಿಸರ ಮಾಲಿನ್ಯ, ನಗರೀಕರಣ, ಕೈಗಾರಿಕರಣ, ಅರಣ್ಯನಾಶದಿಂದ ತಾಪಮಾನ ಏರುತ್ತಿದೆ, ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಅಲ್ಲಲ್ಲಿ ಬೆಟ್ಟ ಕುಸಿತ, ಪ್ರವಾಹ ಸಾಮಾನ್ಯ ಎನ್ನುವಂತಾಗಿದೆ. ಪರಿಸರ ಮಾಲಿನ್ಯ, ಪ್ರಕೃತಿ ವಿಕೋಪಗಳು ಉಂಟಾಗುತ್ತಿದ್ದು, ಇಂಥ ಸಮಸ್ಯೆಗಳನ್ನು ನಿಯಂತ್ರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.

conservation day
ವಿಶ್ವ ಪರಿಸರ ಸಂರಕ್ಷಣಾ ದಿನ

ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆ, ಮಳೆ ನೀರು ಸಂಗ್ರಹ, ಶಕ್ತಿ ಸಂಪನ್ಮೂಲಗಳ ಮಿತ ಬಳಕೆ, ಪ್ಲಾಸ್ಟಿಕ್‌ ಬಳಕೆ ನಿಯಂತ್ರಿಸುವುದು, ಕ್ರಿಮಿನಾಶಕ ಬಳಕೆ ಕಡಿಮೆ ಮಾಡುವುದು ಇನ್ನಿತರ ಪರಿಸರ ಸಂರಕ್ಷಣಾ ವಿಷಯದ ಬಗ್ಗೆ ಗಮನ ಹರಿಸುವುದರಿಂದ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಸಂರಕ್ಷಿಸುವುದು ಅತ್ಯಗತ್ಯವಾಗಿದೆ.

Last Updated : Jul 28, 2020, 9:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.