ETV Bharat / bharat

ಲಾಕ್​ಡೌನ್ ಉಲ್ಲಂಘಿಸಿದ್ದಕ್ಕೆ ತಡೆದ ಭದ್ರತಾ ಸಿಬ್ಬಂದಿ: ಕೆಮ್ಮಿ, ಕೊರೊನಾ ಹಬ್ಬಿಸ್ತೀನಿ ಎಂದ ಜೆಎನ್​ಯು ವಿದ್ಯಾರ್ಥಿ

ಲಾಕ್​ಡೌನ್​ ಉಲ್ಲಂಘಿಸುತ್ತಿದ್ದನ್ನು ಭದ್ರತಾ ಸಿಬ್ಬಂದಿ ತಡೆದಿದ್ದಕ್ಕೆ ಕೊರೊನಾ ಹರಡಿಸುವುದಾಗಿ ಜೆಎನ್​ಯೂ ವಿದ್ಯಾರ್ಥಿ ಬೆದರಿಕೆ ಹಾಕಿದ ಘಟನೆ ಜೆಎನ್​ಯು ಕ್ಯಾಂಪಸ್​ನಲ್ಲಿ ನಡೆದಿದೆ.

jnu
ಜೆಎನ್​ಯು
author img

By

Published : Apr 5, 2020, 4:41 PM IST

ನವದೆಹಲಿ: ಜೆಎನ್​ಯು ವಿದ್ಯಾರ್ಥಿಯೊಬ್ಬ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಗೆ ಕೊರೊನಾ ಸೋಂಕು ಹರಡುವುದಾಗಿ ಬೆದರಿಕೆ ಹಾಕಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

ಪ್ರಣವ್​ ಮೆನನ್​ ಕೊರೊನಾ ಸೋಂಕು ಹರಡುವುದಾಗಿ ಬೆದರಿಕೆ ಹಾಕಿದ ವಿದ್ಯಾರ್ಥಿಯಾಗಿದ್ದು, ಗುರುವಾರ ಸಂಜೆ ಜೆಎನ್​​ಯು ವಿವಿಯ ಕ್ಯಾಂಪಸ್​ನಿಂದ ಹೊರಬರಲು ಯತ್ನಿಸಿದ್ದನು. ಇದಕ್ಕಾಗಿ ಯೂನಿವರ್ಸಿಟಿಯ ಉತ್ತರ ದ್ವಾರದ ಬಳಿ ಬಂದಿದ್ದ ಆತನನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಲಾಕ್​ ಡೌನ್​ ಘೋಷಣೆಯಾಗಿದ್ದ ಕಾರಣದಿಂದ ಆತನನ್ನು ಕ್ಯಾಂಪಸ್​ನಿಂದ ಹೊರಹೋಗದಂತೆ ಸೂಚಿಸಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಣವ್​ ಮೆನನ್​ ಕೆಮ್ಮಿ, ಕೊರೊನಾ ಸೋಂಕನ್ನು ಹರಡುವುದಾಗಿ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ. ಇದರ ಜೊತೆಗೆ ಹೈಡ್ರಾಮಾ ಸೃಷ್ಟಿಸಿದ ಈತ ಮಾಸ್ಕ್​​ ತೆಗೆದು ಭದ್ರತಾ ಸಿಬ್ಬಂದಿಗೆ ಧಮ್ಕಿ ಹಾಕಿದ್ದಾನೆ. ಈ ವೇಳೆ ಆತನನ್ನು ವಶಕ್ಕೆ ಪಡೆದ ಪೊಲೀಸರು, ಎಫ್​ಐಆರ್ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.