ರಾಂಚಿ (ಜಾರ್ಖಂಡ್): ಮಕ್ಕಳಿಗೆ ಅನುಕೂಲವಾಗಲಿ. ಅವರ ವಿದ್ಯಾಭ್ಯಾಸಕ್ಕೆ ಲಾಕ್ಡೌನ್ನಿಂದ ತೊಂದರೆ ಆಗದಿರಲಿ ಎಂದು ಸರ್ಕಾರ ಆನ್ಲೈನ್ ಬೋಧನೆಗೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಪಾಠ ಮಾಡುವುದಕ್ಕೆ ಗಮನ ನೀಡುವ ಬದಲು ಬೋಧನೆ ಉದ್ದೇಶದಿಂದ ಮಾಡಿದ್ದ ಗ್ರೂಫ್ನಲ್ಲಿ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಈ ಕೃತ್ಯ ಎಸಗಿದ್ದಾರೆ. ಗಿರಿಡಿಹ್, ಬೊಕಾರೊ ಮತ್ತು ಲತೇಹರ್ ಜಿಲ್ಲೆಗಳಿಗೆ ಈ ಮೂವರು ಸೇರಿದವರಾಗಿದ್ದಾರೆ. ಈ ಕೃತ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಶಿಕ್ಷಣ ಇಲಾಖೆ ಸಂಬಂಧಪಟ್ಟ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಪತ್ರ ಬರೆದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸೂಚಿಸಿದೆ, .
ಈ ಶಿಕ್ಷಕರ ವಿರುದ್ಧ 24 ಗಂಟೆಯೊಳಗೆ ಕ್ರಮ ಕೈಗೊಳ್ಳಬೇಕೆಂದು ಮೂರು ಜಿಲ್ಲೆಗಳ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಯೋಜನಾ ನಿರ್ದೇಶಕ ಉಮಾಶಂಕರ್ ಸಿಂಗ್ ತಿಳಿಸಿದ್ದಾರೆ.