ETV Bharat / bharat

JEE, NEET ಪರೀಕ್ಷೆ ದಿನಾಂಕ ನಿಗದಿಗೊಳಿಸಿ ಆದೇಶ ಹೊರಡಿಸಿದ ಕೇಂದ್ರ! - JEE,NEET ಪರೀಕ್ಷೆ ದಿನಾಂಕ ನಿಗದಿ

ಮಹಾಮಾರಿ ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕ ಇದೀಗ ಕೇಂದ್ರ ಸರ್ಕಾರದಿಂದ ಹೊರಬಿದ್ದಿದೆ.

JEE,NEET
JEE,NEET
author img

By

Published : May 5, 2020, 2:04 PM IST

ನವದೆಹಲಿ: ಜೆಇಇ ಹಾಗೂ ನೀಟ್ ಸ್ಪರ್ಧಾತ್ಮಕ ಪರೀಕ್ಷೆಗಳ ನೂತನ ದಿನಾಂಕ ಕೇಂದ್ರ ಸರ್ಕಾರದಿಂದ ಇಂದು ಪ್ರಕಟಗೊಂಡಿದ್ದು, ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್​ ಪೋಖ್ರಿಯಾಲ್​ ನಿಶಾಂಕ್​ ಈ ದಿನಾಂಕ ಘೋಷಣೆ ಮಾಡಿದ್ದಾರೆ.

ದೇಶದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದ ಕಾರಣ ಎಂಜಿನಿಯರಿಂಗ್​​ ಮತ್ತು ವೈದ್ಯಕೀಯ ಕೋರ್ಸ್​ ಪ್ರವೇಶಕ್ಕಾಗಿ ನಡೆಯುವ ಜಂಟಿ ಪ್ರವೇಶ ಪರೀಕ್ಷೆ(ಜೆಇಇ) ಮತ್ತು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್​​ಇಇಟಿ) ಪರೀಕ್ಷೆ ಮುಂದೂಡಿಕೆಯಾಗಿದ್ದವು.

JEE,NEET
ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್​ ಪೋಖ್ರಿಯಾಲ್​

ಇದೀಗ ಐಐಟಿ-ಜೆಇಇ (ಮುಖ್ಯ) ಪರೀಕ್ಷೆಗಳು ಜುಲೈ 18, 20, 21, 22, & 23 ರಂದು ನಡೆಯಲಿದ್ದು, ಐಐಟಿ-ಜೆಇಇ ಅಡ್ವಾನ್ಸ್​ ಪರೀಕ್ಷೆ ಆಗಸ್ಟ್​ ತಿಂಗಳಲ್ಲಿ ನಡೆಯಲಿದ್ದು, ಇದರ ದಿನಾಂಕ ಮುಂದಿನ ದಿನಗಳಲ್ಲಿ ಪ್ರಕಟಗೊಳ್ಳಲಿದೆ. ಇನ್ನು ಎನ್​​​​​​​​​ಇಇಟಿ ಪರೀಕ್ಷೆ ಜುಲೈ 26ರಂದು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಸಿಬಿಎಸ್​ಸಿ 10ನೇ ಹಾಗೂ 12 ನೇತರಗತಿಗಳಿಗೆ ನಡೆಸುವ ಪರೀಕ್ಷೆ ಬಗ್ಗೆ ಆದಷ್ಟು ಬೇಗ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ, ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.