ETV Bharat / bharat

ಜೆಡಿಯು ಪಕ್ಷದಿಂದ ಪ್ರಶಾಂತ್ ಕಿಶೋರ್ ಮತ್ತು ಪವನ್ ವರ್ಮಾ ಉಚ್ಛಾಟನೆ - ಜೆಡಿಯು ಪಕ್ಷದಿಂದ ಪ್ರಶಾಂತ್ ಕಿಶೋರ್ ಮತ್ತು ಪವನ್ ವರ್ಮಾ ಉಚ್ಛಾಟನೆ

ಜೆಡಿಯು ಪಕ್ಷದ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಮತ್ತು ಪ್ರಧಾನ ಕಾರ್ಯದರ್ಶಿ ಪವನ್ ವರ್ಮಾ ಅವರನ್ನು ಪಕ್ಷ ಹೊರಹಾಕಿದೆ.

jdu-fired-prashant-kishore-and-pawan-verma
ಜೆಡಿಯು ಪಕ್ಷದಿಂದ ಪ್ರಶಾಂತ್ ಕಿಶೋರ್ ಮತ್ತು ಪವನ್ ವರ್ಮಾ ಉಚ್ಛಾಟನೆ
author img

By

Published : Jan 29, 2020, 4:49 PM IST

ಪಾಟ್ನಾ/ಬಿಹಾರ್​: ಜೆಡಿಯು ಪಕ್ಷದ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಮತ್ತು ಪ್ರಧಾನ ಕಾರ್ಯದರ್ಶಿ ಪವನ್ ವರ್ಮಾ ಅವರನ್ನು ಪಕ್ಷ ಹೊರಹಾಕಿದೆ.

ಬಿಹಾರ ಸಿಎಂ ನಿತೀಶ್​​ ಕುಮಾರ್​ ಹಾಗೂ ಜೆಡಿಯು ಪಕ್ಷದ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ನಡುವೆ ನಡೆಯುತ್ತಿದ್ದ ಆಂತರಿಕ ಜಗಳ ಇದೀಗ ಬಯಲಾಗಿದೆ. ಇಬ್ಬರೂ ಕಳೆದ ಕೆಲವು ದಿನಗಳಿಂದ ಸಿಎಎ ವಿರುದ್ಧ ಪಕ್ಷ ವಿರೋಧಿ ಹೇಳಿಕೆ ನೀಡಿದ ಹಿನ್ನೆಲೆ ಪಕ್ಷದಿಂದ ಉಚ್ಛಾಟನೆಗೊಳಿಸಿದೆ. ಇನ್ನು ಪ್ರಶಾಂತ್ ಕಿಶೋರ್ ಉಚ್ಛಾಟನೆಗೊಳ್ಳುತ್ತಿದ್ದಂತೆ ಕಿಶೋರ್​ ಅವರನ್ನು ಮಾರಣಾಂತಿಕ ಕಾಯಿಲೆ ಕರೋನಾ ವೈರಸ್​​ಗೆ ಹೋಲಿಸಿ ವ್ಯಂಗ್ಯವಾಡಿರುವ ಜೆಡಿಯು ಮುಖಂಡರು ಈ ವೈಷಮ್ಯವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಆದರೆ ಈ ಕುರಿತು ಸ್ಪಷ್ಟನೆ ನೀಡುವಂತೆ ಪವನ್ ವರ್ಮಾ, ಸಿಎಂ ನಿತೀಶ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಹಿಂದೆಯೇ ನಿತೀಶ್​ ಕುಮಾರ್ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಾವು ಸಹಿಸುವುದಿಲ್ಲ, ಬಾಗಿಲು ತೆರೆದಿದೆ, ನೀವು ಪಕ್ಷ ತೊರೆದು ನಿಮಗೆ ಇಷ್ಟ ಬಂದಲ್ಲಿಗೆ ಹೋಗಬಹುದು ಎಂದು ಪ್ರಶಾಂತ್​​ ಕಿಶೋರ್​​ಗೆ ​​​ತಿಳಿಸಿದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.